ಉಡುಪಿಯಲ್ಲಿ ಲಾಕ್ ಡೌನ್ ಇಲ್ಲ,14 ದಿನಗಳ ಕಾಲ ಗಡಿ ಸೀಲ್ ಡೌನ್: ಡಿಸಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ಬದಲು 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲು ತೀರ್ಮಾನಿಸಲಾಗಿದೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದ ಜಿಲ್ಲಾ ಶಾಸಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಜುಲೈ 15ರ ಬುಧವಾರ ರಾತ್ರಿ 8 ಗಂಟೆಯವರೆಗೆ ಜಿಲ್ಲಾ ಗಡಿ ಭಾಗದಿಂದ ಒಳ ಬರುವವರಿಗೆ ಮತ್ತು ಹೊರ ಹೋಗುವವರಿಗೆ ಅವಕಾಶ ಕಲ್ಪಿಸಲಾಗುವುದು. ಬಳಿಕ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಮುಚ್ಚಲಾಗುವುದು […]

ದ್ವಿತೀಯ ಪಿಯುಸಿ ಫಲಿತಾಂಶ: ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ಬಾಲಕಿಯರೇ ಮೇಲುಗೈ

ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ. 61.80ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 68.73 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇ. 54.77 ಬಾಲಕರು ಪಾಸ್ ಆಗಿದ್ದಾರೆ. ಇಂದು ಬೆಂಗಳೂರಿನ ಪಿಯು ಬೋರ್ಡ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಹೊಸದಾಗಿ 5,56, 267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3,84,947 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ. […]

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ, ದಕ್ಷಿಣ ಕನ್ನಡ ಫಸ್ಟ್: ವಿಜಯಪುರ ಲಾಸ್ಟ್

ಬೆಂಗಳೂರು: 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ. ಕೊಡಗು ಜಿಲ್ಲೆ ಎರಡನೇ ಸ್ಥಾನ ಹಾಗೂ ಉತ್ತರ ಕನ್ನಡ ಮೂರನೇ ಸ್ಥಾನ ಪಡೆದುಕೊಂಡಿದೆ. ಕೊನೆಯ ಸ್ಥಾನವನ್ನು ವಿಜಯಪುರ ಜಿಲ್ಲೆ ಪಡೆದುಕೊಂಡಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಜಾಗ, ನಿವೇಶನ, ಮಾರಲು, ಖರೀದಿಸಲು ಇಲ್ಲಿದೆ ಒಂದು ಭರ್ಜರಿ ವೇದಿಕೆ: ಉಡುಪಿಯ “ತುಳುನಾಡು ಪ್ರಾಪರ್ಟೀಸ್” ನಿಮ್ಮ ಕನಸು ನನಸಾಗಿಸುತ್ತೆ!

ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ? ಆದರೆ ಪ್ಲಾನ್ ಅನ್ನು ಹೇಗೆ ಸಾಕಾರಗೊಳಿಸೋದು ಅಂತೇನಾದ್ರೂ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಉಡುಪಿಯ ತುಳುನಾಡು ಪ್ರಾಪಟೀಸ್ ಸಿಂಪಲ್ಲಾಗಿ ಪರಿಹರಿಸಿಬಿಡುತ್ತೆ. ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ.‌ ಮತ್ತು ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು […]