ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಸಚಿವ ಕೋಟ
ಮಂಗಳೂರು: ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸೋಮವಾರ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ಸಾಮಾರ್ಥ್ಯವನ್ನು ಪರಿಶೀಲಿಸಿ ಅವರು ಮಾತನಾಡಿದರು. ಬಿಪಿಎಲ್, ಎಪಿಎಲ್ ಕುಟುಂಬಗಳು, ವಲಸೆ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಚಿಕಿತ್ಸೆ ದೊರೆಯಲಿದೆ. ರೋಗಿಗಳು ಆಸ್ಪತ್ರೆಯಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಕೂಡ ಉಚಿತ ಚಿಕಿತ್ಸೆ ಮುಂದುವರಿಯಲಿದೆ. […]
ಉಡುಪಿ: ಬೆಳ್ಳಂಪಳ್ಳಿಯ ಭೂತರಾಜನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಾವಿ ಪತ್ತೆ
ಉಡುಪಿ: ಬೆಳ್ಳಂಪಳ್ಳಿಯ ಭೂತರಾಜನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಾವಿಯೊಂದು ಪತ್ತೆಯಾಗಿದೆ. ಇಲ್ಲಿನ ಭೂತರಾಜನ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಹೊಸದಾಗಿ ರಸ್ತೆಯನ್ನು ನಿರ್ಮಿಸವ ವೇಳೆ ರಸ್ತೆಯ ಮಧ್ಯೆ ಏಕಾಏಕಿಯಾಗಿ ಮಣ್ಣು ಕುಸಿದು, ಬಾವಿಯ ಆಕಾರದಲ್ಲಿ ಐದು ಅಡಿಕ್ಕಿಂತಲೂ ದೊಡ್ಡದಾದ ಗುಂಡಿ ಬಿದ್ದಿದೆ. ಅಚ್ಚರಿ ಎನ್ನುವಂತೆ ಈ ಗುಂಡಿಯಲ್ಲಿ ನೀರು ತುಂಬಿ ತುಳುಕುತ್ತಿದ್ದು, ಅಲ್ಲಿ ಇದ್ದ ಸ್ಥಳೀಯರು ಕುತೂಹಲದಿಂದ ಈ ಗುಂಡಿಯೊಳಗೆ ಕೋಲನ್ನು ಹಾಕಿ ಆಳವನ್ನು ನೋಡಿದ್ದಾರೆ. ಮಳೆಗೆ ಮಣ್ಣು ಕುಸಿದು ಗುಂಡಿ ನಿರ್ಮಾಣ ಆಗಿದೆ ಎನ್ನಲಾಗಿದ್ದರೂ, ಬಾವಿಯ ಆಕಾರದಲ್ಲಿ […]
ಕುಂದಾಪುರ : ಕೋವಿಡ್-19 ನಿಯಮ ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮ
ಉಡುಪಿ : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕೋವಿಡ್ 19 ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ದರಿಸುವುದು ,ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು,ಎಲ್ಲಂದರಲ್ಲಿ ಉಗುಳಬಾರದು ಮುಂತಾದ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು ಇವುಗಳನ್ನು ಉಲ್ಲಂಘಿಸಿ ಸಾಂಕ್ರಮಿಕ ರೋಗ ಹರಡುವುದನ್ನು ಹೆಚ್ಚಿಗೆ ಮಾಡುವಂತಹ ನಡವಳಿಕೆಗಳನ್ನು ಮಾಡುತ್ತಿರುವುದು ಕಂಡುಬಂದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಹಾಗೂ ಕರ್ನಾಟಕ ಸರಕಾರದ ಸಾಂಕ್ರಮಿಕ ರೋಗ ಕೋವಿಡ್- 19 ರೆಗ್ಯೂಲೇಶನ್ 2020 ರ ಪ್ರಕಾರ ದಂಡವನ್ನು ವಿಧಿಸುವ ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ […]
ನಗರಾಭಿವೃಧ್ದಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗಳಿಸಿ:ಸಚಿವ ಬಿ.ಎ.ಬಸವರಾಜ್
ಉಡುಪಿ: ಜಿಲ್ಲೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಮೂಲಕ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ, ಕಾಮಗಾರಿಗಳ ವಿಳಂಬಕ್ಕೆ ಆಸ್ಪದ ನೀಡಬೇಡಿ ರಾಜ್ಯದ ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಸೂಚಿಸಿದ್ದಾರೆ. ಅವರು ಸೋಮವಾರ, ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಪಟ್ಟಣದ ಒಳಚರಂಡಿ ಯೋಜನೆ 2017 ಕ್ಕೆ ಮುಕ್ತಾಯಗೊಳ್ಳಬೇಕಾಗಿದ್ದು, […]
ಉಡುಪಿಯಲ್ಲಿ ಇಂದು 53 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇಂದು ಕೂಡ 53 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1661 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ನೀಡಿದೆ.