ಮಲ್ಪೆ: ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ: ವಕ್ವಾಡಿ ಪ್ರವೀಣ್ ಕೊಲೆ ಆರೋಪಿಗಳ ಕೈವಾಡದ ಶಂಕೆ

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದ ಶಾಲೆ ಹಿಂಬದಿಯಲ್ಲಿ ಕ್ಷುಲ್ಲಕ ಕಾರಣಕ್ಜೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಕ್ಷ್ಮೀನಗರದ ಯೋಗೀಶ್ ಕೊಲೆಯಾದ ಯುವಕ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ವಕ್ವಾಡಿ ಪ್ರವೀಣ್ ಹಾಗೂ ಗುರು ಭಟ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಸುಜೀತ್ ಪಿಂಟೋ ಸಹಚರರಿಂದ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಯೋಗೀಶ್ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಈ ಗಲಾಟೆ ತಾರಕ್ಕೇರಿದ್ದು ಆರೋಪಿಗಳು ಯೋಗೀಶ್ ನನ್ನು ಕೊಲೆ ಮಾಡಿ […]

ಅಂತಿಮ ಪದವಿ ಪರೀಕ್ಷೆಗೆ ನೂತನ ಮಾರ್ಗಸೂಚಿ ಬಿಡುಗಡೆ: ಸಪ್ಟೆಂಬರ್ ಅಂತ್ಯದೊಳಗೆ ನಡೆಸಲು ನಿರ್ಧಾರ

ನವದೆಹಲಿ: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯು ಯಶಸ್ವಿಯಾದ ಹಿನ್ನಲೆ, ಇದೀಗ ಸೆಪ್ಟೆಂಬರ್  ಅಂತ್ಯದೊಳಗೆ ಪದವಿ ಶಿಕ್ಷಣ ಪರೀಕ್ಷೆಯನ್ನು ನಡೆಸಲು ಯುಜಿಸಿ ಹೇಳಿದೆ. ಅಂತಿಮ ವರ್ಷದ ನೂತನ ಪರೀಕ್ಷಾ ವೇಳಾಪಟ್ಟಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ. ಆನ್ ಲೈನ್ ಅಥವಾ ಆಫ್ ಲೈ ಪರೀಕ್ಷೆ ನಡೆಸುವುದರ ಕುರಿತು ಸ್ಥಳದ ಪರಿಸ್ಥಿತಿಗೆ ಅನುಸಾರವಾಗಿ ನಿರ್ಧಾರ ಕೈಗೊಳ್ಳಲಾಗುವುದು. ಕೊರೋನಾ ಕಾರಣದಿಂದ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷಾ […]

ಕರಾವಳಿಯಲ್ಲಿ ಐದು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ: ಯಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಜು.7ರಿಂದ 11ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಅರಬ್ಬಿ ಸಮುದ್ರದಿಂದ ರಾಜ್ಯದ ಕರಾವಳಿಯೆಡೆಗೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಐದೂ ದಿನ ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆಯು ಎಚ್ಚರಿಕೆ ನೀಡಿದೆ. ಜು.10ರಿಂದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, […]

ನೀಲಾವರ ಗೋಶಾಲೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ: ಪೇಜಾವರ ಶ್ರೀಪಾದರಿಗೆ ಗುರು ಪೂರ್ಣಿಮೆಯ ಗೌರವ ಸಮರ್ಪಣೆ

ಉಡುಪಿ: ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಸೋಮವಾರ ಸಂಸದೆ ಶೋಭಾ ಕರಂದ್ಲಾಜೆ ಭೇಟಿಯಾಗಿ ಗುರು ಪೂರ್ಣಿಮೆಯ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಇದ್ದರು.

ಉಡುಪಿ: ಉದ್ಯಮಿ ‘ಶಿವಸಾಗರ್’ ರಾಘು ಭಟ್ ಆತ್ಮಹತ್ಯೆ

ಉಡುಪಿ: ಕಡಿಯಾಳಿಯಲ್ಲಿ‌ ದಶಕದ ಹಿಂದೆ ಪ್ರಸಿದ್ಧವಾಗಿದ್ದ ಶಿವಸಾಗರ್ ಕ್ಯಾಂಟೀನ್ ಮಾಲೀಕ, ಸಾಮಾಜಿಕ ಕಾರ್ಯಕರ್ತ, ಯುವ ಉದ್ಯಮಿ ರಾಘು ಭಟ್ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.