ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ: ಜಿಲ್ಲಾಧಿಕಾರಿ

ಉಡುಪಿ ಜುಲೈ 7: ರಾಜ್ಯ ಸರಕಾರದ ಆದೇಶದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ,  ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ 19 ಸೋಂಕಿತರು ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು,  ಇದಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿರಬೇಕಾಗುತ್ತದೆ. ಇದನ್ನು ಬಿಪಿಎಲ್, ಎಪಿಎಲ್ ಹಾಗೂ ಕಾರ್ಡ್ ಇಲ್ಲದವರು ಸಹ ಸೇರಿದಂತೆ, ವಿವಿಧ ಸರ್ಕಾರಿ ನೌಕರರಿಗೆ ಈ ಕಾರ್ಡ್ ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಲು,  ನಿಮ್ಮ […]

ಉಡುಪಿ: ಇಂದು 28 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನ ಪ್ರಕರಣ ಮುಂದುವರಿದಿದ್ದು, ಇಂದು ಕೂಡ 28 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1390ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಣ್ಣು ಬಿಟ್ಟು ನೋಡಿ, ನಿಮಗೂ ನನ್ನಂತೆಯೇ ಖುಷಿ ಸಿಗಬಹುದು !

ಕೋರೋನ ಲೊಕ್ಡೌನ್ ಸಮಯದಲ್ಲಿ ಒಂದು ದಿನ ಎಂದಿನಂತೆ ಬೈಗು ಹೊತ್ತಲ್ಲಿ ಟೆರೇಸ್ ನಲ್ಲಿ ಅಡ್ಡಾಡುತ್ತಾ ಸುತ್ತಲಿನ ವಿಹಂಗಮ ದೃಶ್ಯ ಸುಮ್ಮನೆ ವೀಕ್ಷಿಸುತ್ತಿದ್ದಾಗ ಹಲವಾರು ಅನಿಸಿಕೆಗಳು ಮನದಲ್ಲಿ ಸುಳಿದವು. ಪ್ರಪಂಚವೆಲ್ಲ ವ್ಯಾಪಿಸಿದ ಕೊರೊನದಿಂದ ಮನುಕುಲವು ಅಸಹಾಯಕವಾದರೂ, ತನ್ನ ಉಳಿವಿಗಾಗಿ ಹೋರಾಟ ಮಾಡುತ್ತಲೇ ಆತ್ಮಾವಲೋಕನ ಮಾಡುತ್ತಿದೆ ಅನಿಸಿತು. ಈ ಹಿಂದೆಯೂ ಮನುಕುಲದ ಮೇಲೆ ಎಷ್ಟೊಂದು ಮಾರಕ ರೋಗಗಳ ಧಾಳಿ ನಡೆದಿಲ್ಲ?. ಆದರೆ ಅವೆಲ್ಲವನ್ನು ಗೆದ್ದು ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆಯಲ್ಲವೇ ಅಂತ ಅನಿಸಿತು. ನಾನಾ ಬವಣೆಗಳ ನಡುವೆಯೂ ಮಾನವನ […]

ಸಂಕಷ್ಟದಲ್ಲಿ ಸಿಲುಕಿದ್ದ ಉದ್ಯೋಗಿಗಳನ್ನು ವಾಪಾಸ್ ಕರೆಸಿಕೊಂಡ ಇನ್ಫೋಸಿಸ್

ಬೆಂಗಳೂರು: ಅಮೆರಿಕಾದಲ್ಲಿ ಸಿಲುಕಿದ್ದ 200 ಮಂದಿ ಭಾರತೀಯ ಉದ್ಯೋಗಿಗಳನ್ನು ಇನ್ಫೋಸಿಸ್ ಸಂಸ್ಥೆ ವಾಪಸ್ ಕರೆಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕಾದಲ್ಲಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಭಾರತೀಯರು ಹಾಗೂ ಅವರ ಕುಟುಂಬವನ್ನು ಸಂಸ್ಥೆ ವಾಪಸ್ ಕರೆ‌‌ ತಂದಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಿಶೇಷ ಚಾರ್ಟೆಡ್ ವಿಮಾನದಲ್ಲಿ  ಕರೆತರಲಾಗಿದೆ ಎಂದು ಇನ್ಫೋಸಿಸ್ ಉಪಾಧ್ಯಕ್ಷ ಸಮೀರ್ ಗೋಸವಿ ತಿಳಿಸಿದ್ದಾರೆ.

ಕೊರೊನಾ ಕೊರೊನಾ ಅಂತ ಹೆದರಿಸುವುದನ್ನು ಮೊದಲು ಬಿಡಿ, ಮನಸ್ಸು ಗಟ್ಟಿಯಾಗಿಸುವ ಕೆಲಸ ಮಾಡಿ : ಡಾ.ಶಶಿಕಿರಣ್ ಶೆಟ್ಟಿ ಹೇಳಿದ್ದಾರೆ ಒಂದಷ್ಟು ಟಿಪ್ಸ್

♠ ಡಾ.ಶಶಿಕಿರಣ್ ಶೆಟ್ಟಿ ಉಡುಪಿ  ಘಟನೆ: 1 : ಇದು 2009 ರಲ್ಲಿ ನಡೆದ ಘಟನೆ. ವೈದ್ಯನಾದ ನನ್ನ ಕ್ಲಿನಿಕ್ ಗೆ ರಾತ್ರಿ 7 ಗಂಟೆಗೆ ಯುವಕನೊಬ್ಬ ಗಾಬರಿಯಿಂದ ಬಂದಿದ್ದ, ಆತನೊಂದಿಗೆ 4-5 ಜನರಿದ್ದರು. “ಸರ್ ಹಾವು ಕಚ್ಚಿದೆ” ಎಂದ. ಕಚ್ಚಿದ ಜಾಗ ನೋಡಿದೆ, ಬಲಗೈಯಲ್ಲಿ ಹಲ್ಲುಗಳ ಎರಡು ಚಿಕ್ಕ ಗಾಯಗಳಿದ್ದವು. ಜೊತೆಗಿದ್ದ ಇಬ್ಬರು “ಅದು ಭಯಂಕರ ಸರ್ಪ, ಕೂಡಲೇ ವಿಷವೇರುವುದು” ಹಾಗೆ ಹೀಗೆ ಅಂತ ಕತೆ ಹೇಳುತ್ತಲಿದ್ದರು. ಸಂದೇಹ ಬೇಡ ಎಂದು ಸಮೀಪದ ಆಸ್ಪತ್ರೆಗೆ ಕಳುಹಿಸಿದೆ. […]