ದಕ್ಷಿಣ ಕನ್ನಡ ಜಿಲ್ಲೆಯಲ್ಲಿಕೊರೊನಾ ಸೋಂಕಿನಿಂದ ಇಂದು ಮತ್ತಿಬ್ಬರು ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಇಂದು (ಜು.6)ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕುತ್ತಾರು ನಿವಾಸಿ 52 ವರ್ಷ ವಯಸ್ಸಿನ ಪುರುಷ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾರೆ. ಉಳ್ಳಾಲ ನಿವಾಸಿ 62 ವರ್ಷ ವರ್ಷದ ಪುರುಷನೂ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ
ಈ ಸಮಯದಲ್ಲಿ ನೀವು ಹೂಡಿಕೆ ಹಾಗೂ ಉಳಿತಾಯ ಯೋಜನೆ ಬಗ್ಗೆ ಯೋಚಿಸಲೇಬೇಕು :ನಿಮ್ಮ ಬದುಕು ಕಾಪಾಡೋ ಯೋಜನೆಗಳಿವು!
ಕಷ್ಟಕಾಲಕ್ಕೆ ಒಂದಷ್ಟು ಸಂಪತ್ತನ್ನು ಶೇಖರಿಸಿಡಬೇಕು ಎಂದು ಚಾಣಕ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಬಹಳ ವರ್ಷಗಳ ಹಿಂದೆ ನಮ್ಮ ಉಳಿತಾಯದ ಅಥವ ಹೂಡಿಕೆಯ ಅವಕಾಶಗಳು ಕಡಿಮೆ ಇದ್ದವು. ಆದರೆ ಈಗ ಕಾಲ ಬದಲಾಗಿದೆ. ಒಬ್ಬ ಸಾಮಾನ್ಯ ಪ್ರಜೆಯೂ ಹೂಡಿಕೆ ಹಾಗೂ ಉಳಿತಾಯ ಮಾಡಲು ಸಾಧ್ಯವಾಗುವ೦ತಹ ಹಲವು ಯೋಜನೆಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಿದ್ದಾರೆ ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ವಿಕ್ರಮ್ ವತ್ಸ ♦ಫಿಕ್ಸೆಡ್ ಡೆಪೋಸಿಟ್: ಇದು ಎಲ್ಲರಿಗೂ ತಿಳಿದಿರುವ ಜನಪ್ರಿಯ ಯೋಜನೆ.ಆದರೆ ಇದರಿ೦ದ ಬರುವ […]
ಅತೀ ಹೆಚ್ಚು ಕೊರೋನಾ ಸೋಂಕು ಪ್ರಕರಣ: ಭಾರತಕ್ಕೆ ಮೂರನೆಯ ಸ್ಥಾನ
ನವದೆಹಲಿ: ವಿಶ್ವದಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಅತೀ ಹೆಚ್ಚು ಸೋಂಕು ಪ್ರಕರಣಗಳಿರುವ ಪಟ್ಟಿಯಲ್ಲಿ ರಷ್ಯಾವನ್ನು ಹಿಂದಿಕ್ಕಿ ಭಾರತ ಈಗ ಮೂರನೇ ಸ್ಥಾನಕ್ಕೇರಿದೆ. ಜುಲೈ5 ರಾತ್ರಿ 9ರ ವೇಳೆಗೆ ಭಾರತದಲ್ಲಿ ಒಟ್ಟು 6,94,053ಕ್ಕೆ ಪ್ರಕರಣಗಳು ದಾಖಲಾಗಿದ್ದು, ರಷ್ಯಾದಲ್ಲಿ ಒಟ್ಟು 6,80,283 ಪ್ರಕರಣಗಳು ದೃಢಪಟ್ಟಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕ ಒಟ್ಟು 28.39 ಲಕ್ಷ ಹಾಗೂ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ಒಟ್ಟು 15.77 ಲಕ್ಷ ಸೋಂಕು ಪ್ರಕರಣಗಳು ದೃಢವಾಗಿದೆ. ದೇಶದಲ್ಲಿ ಸತತ ಮೂರನೇ ದಿನವೂ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು […]