ಜು.6 : ಮುನಿಯಾಲು ಆಯುರ್ವೇದ ಸಂಸ್ಥೆಯಿಂದ ಉಚಿತ ಔಷಧೀಯ ಸಸ್ಯಗಳ ವಿತರಣೆ
ಮಣಿಪಾಲ:ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ ಜಾತಿಯ ರೋಗ ನಿರೋಧಕ ಔಷಧೀಯ ಸಸ್ಯಗಳನ್ನು ವಿತರಿಸುವ ಕಾರ್ಯಕ್ರಮ ಜು.6 ರಂದು ನಡೆಯಲಿದೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಿಸಲಾಗುತ್ತದೆ. ಅಂದು ಮುಂಜಾನೆ 9 ಗಂಟೆಯಿಂದ ಸಂಜೆ 4ರ ತನಕ ಉಚಿತವಾಗಿ ಪೇರಳೆ,ಬಿಲ್ವಪತ್ರೆ, ಕಹಿಬೇವು, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ನೇರಳೆ, ತಾರೆಕಾಯಿ, ನೊರೆಕಾಯಿ, ಹಾಗೂ ಬಳ್ಳಿ ಮತ್ತು ಗಿಡಗಳಾದ ಹಿಪ್ಪಲಿ, ಅಮೃತ ಬಳ್ಳಿ, ಸಂಧಿಬೀಳು, […]
ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ
ಉಡುಪಿ ಜುಲೈ 3: 2019-20ನೇ ಸಾಲಿನ ಸ್ವಯಂ ಉದ್ಯೋಗ, ಸಮೃದ್ಧಿ, ಉನ್ನತಿ, ಐರಾವತ, ಪ್ರೇರಣಾ, ಸ್ಪೂರ್ತಿ, ಭೂ ಒಡೆತನ, ಗಂಗಾ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ, ಅರ್ಹ ಸಫಾಯಿ ಕರ್ಮಚಾರಿ/ಸ್ಕಾವೆಂರ್ಸ್ ಹಾಗೂ ಅವರ ಅವಲಂಬಿತರಿಂದ ಅರ್ಜಿ ಆಹ್ವಾನಿಸಲಾಗಿರುತ್ತದೆ. ಆಸಕ್ತಿಯುಳ್ಳವರು ನಿಗಮದ ವೆಬ್ಸೈಟ್ www.ksskdc.kar.nic.in ಮುಖಪುಟ ಮೆನುವಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ, “ಬಿ” ಬ್ಲಾಕ್, […]
ಹೆಬ್ರಿ: ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಹೆಬ್ರಿ: ತಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸತ್ಕಾರ್ಯಗಳಿಗೆ ಮೀಸಲಿಡುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು 317 C ಜಿಲ್ಲಾ ಗವರ್ನರ್ ಎನ್.ಎಂ .ಹೆಗ್ಡೆ ಹೇಳಿದ್ದಾರೆ ಹೆಬ್ರಿಯ ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಹೆಬ್ರಿಯ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವನ್ನು ಭೋದಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿಯನ್ ಎ.ಎಸ್.ಎನ್ .ಹೆಬ್ಬಾರ್, ಲಯನ್ಸ್ ಕ್ಲಬ್ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು. ಪದಗ್ರಹಣ ಸ್ವೀಕರಿಸಿ ಲಯನ್ ಸಿಟಿ ಅಧ್ಯಕ್ಷೆ ಡಾ. ಭಾರ್ಗವಿ ಆರ್.ಐತಾಳ್ […]
ಆದಿಉಡುಪಿಯ ತಿಮ್ಮಪ್ಪ ಮೀನು ಊಟದ ಹೋಟೆಲ್ ಸೀಲ್ ಡೌನ್: ಮಾಲೀಕನಿಗೆ ಕೊರೊನಾ ಪಾಸಿಟಿವ್
ಉಡುಪಿ: ಇಲ್ಲಿನ ಆದಿಉಡುಪಿಯಲ್ಲಿರುವ ಹೆಸರಾಂತ ತಿಮ್ಮಪ್ಪ ಮೀನು ಊಟದ ಹೋಟೆಲ್ ಮಾಲೀಕನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹೋಟೆಲ್ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಉಡುಪಿಯಲ್ಲಿ ಮುಂದುವರಿದ ಕೊರೊನಾ ರಣಕೇಕೆ: ಇಂದು ಕೂಡ 19 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇಂದು ಕೂಡ 19 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1277ಕ್ಕೆ ಏರಿಕೆಯಾಗಿದೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ.