udupixpress
Home Trending ಹೆಬ್ರಿ: ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹೆಬ್ರಿ: ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹೆಬ್ರಿ: ತಾವು ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸತ್ಕಾರ್ಯಗಳಿಗೆ ಮೀಸಲಿಡುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು 317 C ಜಿಲ್ಲಾ ಗವರ್ನರ್ ಎನ್.ಎಂ .ಹೆಗ್ಡೆ ಹೇಳಿದ್ದಾರೆ
ಹೆಬ್ರಿಯ ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಹೆಬ್ರಿಯ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವನ್ನು ಭೋದಿಸಿ‌ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿಯನ್ ಎ.ಎಸ್.ಎನ್ .ಹೆಬ್ಬಾರ್, ಲಯನ್ಸ್ ಕ್ಲಬ್ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.
ಪದಗ್ರಹಣ ಸ್ವೀಕರಿಸಿ ಲಯನ್ ಸಿಟಿ ಅಧ್ಯಕ್ಷೆ ಡಾ. ಭಾರ್ಗವಿ ಆರ್.ಐತಾಳ್ ಮಾತನಾಡಿದರು.
ಇದೆ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎಡ್ವೊಕೇಟ್ ಕೃಷ್ಣ ಕೆ ಶೆಟ್ಟಿ ಅಧಿಕಾರವನ್ನು ಅಧ್ಯಕ್ಷೆ ಭಾರ್ಗವಿ ಐತಾಳ್ ಅವರಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಎರಡನೇ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಜಿ.ಆಚಾರ್ಯ , ಪ್ರಾಂತ್ಯ ಅಧ್ಯಕ್ಷ ಉದಯ್ ಕುಮಾರ್ ನೀರೆ ಬೈಲೂರು , ಲಯನ್ಸ್ ಕ್ಲಬ್ ಕಾಯದರ್ಶಿ ಕೆ.ರಾಮಚಂದ್ರ ಭಟ್ ಕೋಶಾಧಿಕಾರಿ ರಘುರಾಮಶೆಟ್ಟಿ ಚಾರ ಹರೀಶ್ , ಮೊದಲಾದವರು ಉಪಸ್ಥಿತರಿದ್ದರು.
error: Content is protected !!