ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಉದ್ದಿಮೆಗಳಿಗೆ ವಿಶ್ವಬ್ಯಾಂಕ್ ನೆರವು
ನವದೆಹಲಿ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ 15 ಕೋಟಿ ಸಣ್ಣ ಉದ್ದಿಮೆಗಳಿಗೆ 5,625 ಕೋಟಿ ರೂ. ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ. ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಹೆಸರಿನಲ್ಲಿ ಎಂಎಸ್‌ಎಂಇಗಳಿಗೆ 3.7 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿರುವ ನಿರ್ಧಾರಕ್ಕೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬ್ಯಾಂಕ್ ಅಥವಾ ಎಸ್‌ಐಡಿಬಿಐ ಮೂಲಕ ಮಾರುಕಟ್ಟೆಗೆ ನಗದು ಪೂರೈಕೆ ಮಾಡಲು ಆರ್‌ಬಿಐ ಸೂಕ್ತ ಕ್ರಮ ಕೈಗೊಂಡಿದೆ ಎಂದು ವಿಶ್ವ ಬ್ಯಾಂಕ್ ಭಾರತದ ನಿರ್ದೇಶಕ ಜುನೈದ್ ಅಹ್ಮದ್ ಹೇಳಿದ್ದಾರೆ. ವಿಶ್ವ […]
ಮಂಗಳೂರಿನಲ್ಲಿ 7 ದಿನದ ಮಗುವಿಗೆ ಕೊರೋನಾ ಸೋಂಕು ದೃಢ
ಮಂಗಳೂರು: ಮಂಗಳೂರಿನಲ್ಲಿ 7 ದಿನದ ಮಗುವಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗು ಜನಿಸಿತ್ತು. ಜೂನ್ 28 ರಂದು ಮಗುವಿನ ತಾಯಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಟ ಮಿಮಿಕ್ರಿ ರಾಜಗೋಪಾಲ್ ನಿಧನ
ಬೆಂಗಳೂರು: ಕನ್ನಡದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್(69) ಗುರುವಾರ ನಿಧನರಾಗಿದ್ದಾರೆ. ಅವರು ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ಕನ್ನಡ ಸೇರಿದಂತೆ ಪರಭಾಷೆಗಳಲ್ಲಿಯೂ ಹಾಸ್ಯನಟನಾಗಿ, ಪೋಷಕ ನಟನಾಗಿ ಅಭಿನಯಿಸಿದ್ದರು. ಇವರು 1983ರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದರು. ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಿಮಿಕ್ರಿ ಮಾಡುವಲ್ಲಿ ಖ್ಯಾತರಾಗಿದ್ದರು. ನಟಿ ಕಲ್ಪನಾ ಧ್ವನಿಯನ್ನು ಅನುಕರಿಸುವುದರಲ್ಲಿ ನಿಪುಣರು. ಕಲ್ಪನಾ ಧ್ವನಿಯನ್ನು ಅನುಕರಿಸಿ ಅಭಿಮಾನಿಗಳನ್ನು ಪಡೆದಿದ್ದರು.