ಮೀನುಗಾರಿಕೆಯಲ್ಲಿ ಆರ್ಥಿಕ ನಷ್ಟ: ಮನನೊಂದು ಯುವಕ ನೇಣಿಗೆ ಶರಣು

ಉಡುಪಿ: ಮೀನುಗಾರಿಕೆಯಲ್ಲಿ ಆರ್ಥಿಕ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ಯುವಕನೊರ್ವ ತನ್ನ ಬೋಟ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಲ್ಪೆ ಬಂದರಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಬಡಾನಿಡಿಯೂರಿನ ಬೈಲಕೆರೆಯ ನಿವಾಸಿ ಭಾಗ್ಯರಾಜ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿಕೊಂಡು ಮೀನುಗಾರಿಕಾ ಬೋಟ್ ವೊಂದನ್ನು ಖರೀದಿಸಿದ್ದನು. ಆದರೆ ಲಾಕ್ ಡೌನ್ ನಿಂದಾಗಿ ಅಷ್ಟಾಗಿ ಮೀನುಗಾರಿಕೆಗೆ ನಡೆಸಲು ಆಗಿಲ್ಲ. ಹಾಗೆ ಮತ್ಸ್ಯ ಕ್ಷಾಮದಿಂದ ಮೀನುಗಾರಿಕಾ ವ್ಯವಹಾರದಲ್ಲಿ ಅಪಾರ ಆರ್ಥಿಕ ನಷ್ಟ ಉಂಟಾಗಿದ್ದು, ಇದರಿಂದ ಮನನೊಂದು […]

ಉಡುಪಿಯಲ್ಲಿ ಇಂದು ಕೂಡ ಕೊರೊನಾ ಪ್ರಕರಣ ದಾಖಲಾಗಿಲ್ಲ: 93 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಜಿಲ್ಲೆಯಲ್ಲಿ ಇಂದು ಕೂಡ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದು ಜಿಲ್ಲೆಯ ಜನರಲ್ಲಿದ್ದ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 947 ಮಂದಿ ಸೋಂಕಿತರು ಪತ್ತೆಯಾಗಿದೆ. ಇಂದು 93 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 327 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಜಿಲ್ಲೆಯಲ್ಲಿ 619 ಸಕ್ರಿಯ ಪ್ರಕರಣಗಳಿವೆ. ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಬಂದಿದೆ ಇಂಟೆಲ್ ನ ಹೊಸ ಪಿ 36 ಸೀರಿಸ್: ಸೂಪರ್ ಬ್ಯಾಟರಿ, ಅದ್ಬುತ ಬಾಳಿಕೆಯ ಮೊಬೈಲ್

ವಿಶೇಷ: ಚೈನಾ ಕಂಪೆನಿಯ ಮೊಬೈಲ್ ಬ್ರ್ಯಾಂಡ್ ಗಳು ನಮಗೆ ಬೇಡ, ಬೇರೆ ದೇಶದ್ದಾದರೂ ಸರಿ ಎನ್ನುವವರಿಗೊಂದು ಗುಡ್ ನ್ಯೂಸ್.ಯುಎಸ್ ಎ ಯ ಅತ್ಯಾಧುನಿಕ ಮತ್ತು ಉತ್ಕೃಷ್ಟ ಮೊಬೈಲ್ ಕಂಪೆನಿ ತನ್ನ ಹೊಸ  ಮೊಬೈಲ್ ಪಿ 36 ಸೀರಿಸ್ ಬಿಡುಗಡೆ ಮಾಡಿದೆ.ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಇಂಟೆಲ್ ಕಂಪೆನಿಯ ಈ ಮೊಬೈಲ್ ನ ಬೆಲೆ 6,299 ನೀಲಿ ಮತ್ತು ಕಪ್ಪುಗಳಲ್ಲಿ ಲಭ್ಯವಿರುವ ಈ ಸೆಟ್ ನಲ್ಲಿ  2GB RAM,32 GB ROM,    4000mh […]

ಲಾಕ್ ಡೌನ್ ಸಮಯದಲ್ಲಿ ಪಾರ್ಲೇಜಿ ಬಿಸ್ಕಿಟ್ ಭಾರೀ ಸೇಲ್ : ಪಾರ್ಲೆಯ ಎಲ್ಲಾ ಉತ್ಪನ್ನಗಳಿಗೂ ಡಿಮ್ಯಾಂಡೋ ಡಿಮ್ಯಾಂಡ್

ನವದೆಹಲಿ:ಮೊದಲೇ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಚಿಣ್ಣರಿಂದ ಹಿಡಿದು ಮುದುಕರ ಬಾಯಿಂದಲೂ ಹೆಗ್ಗಳಿಕೆ ಗಳಿಸಿಕೊಂಡಿದ್ದ ಪಾರ್ಲೇಜಿ ಬಿಸ್ಕೆಟ್ ಕೊರೋನಾ ಲಾಕ್ ಡೌನ್ ಸಮಯದಲ್ಲಿ ತನ್ನ ಲಾಭವನ್ನು ಇನ್ನೊಂದಷ್ಟು ಉತ್ತುಂಗಕ್ಕೆ ಏರಿಸಿಕೊಂಡು ದಾಖಲೆ ಮಾರಾಟ ಕಂಡಿದೆ.ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಕಂಪೆನಿಯ ಉತ್ಪನ್ನಗಳು ಅದರಲ್ಲೂ ಬಿಸ್ಕೆಟ್ ಗಳು ಭಾರೀ ಸೇಲ್ ಆದ ಕುರಿತು ಕಂಪೆನಿ ಹೇಳಿಕೊಂಡಿದೆ.ಶೇ.ಐದರಷ್ಟು ಶೇರು ಮೌಲ್ಯ ವೃದ್ದಿಸಿಕೊಂಡು ಕಂಪೆನಿ ಲಾಭದತ್ತ ಸಾಗಿದೆ. ಇಷ್ಟು ಲಾಭ ಕಂಪೆನಿಗೆ ಯಾವತ್ತೂ ಬಂದಿರಲಿಲ್ಲ.ದೇಶದಲ್ಲಿ ಕಷ್ಟದಲ್ಲಿರುವ ಕಾರ್ಮಿಕರಿಗೆ ಬಹಳಷ್ಟು ಮಂದಿ ಪಾರ್ಲೇಜಿ ಗ್ಲೂಕೋಸ್ ಬಿಸ್ಕೆಟ್ ಗಳನ್ನೇ ನೀಡಿದ್ದಾರೆ.ಇದು […]

ಉಡುಪಿ ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರ 57ನೇ ಜನ್ಮದಿನಾಚರಣೆ

ಉಡುಪಿ: ಕೀರ್ತಿ ಶೇಷ ಪರಮಪೂಜ್ಯ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ 57ನೇ ಜನ್ಮದಿನಾಚರಣೆ ಜೂ.8ರಂದು ಕೇಮಾರು ಮಠ ಹಾಗೂ ಉಡುಪಿ ಪರಿಸರದ ವಿವಿಧ ಕಡೆಗಳಲ್ಲಿ ಪರಿಸರೋಪಯುಕ್ತವಾದ ವಿವಿಧ ರೀತಿಯ ಗಿಡಗಳನ್ನು ನೆಡುವುದರ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು. ಶೀರೂರು ಶ್ರೀಗಳು ಪರಿಸರದ ಬಗ್ಗೆ ತೀರ ಕಾಳಜಿ ವಹಿಸಿದ್ದು, ಅವರ ಜನ್ಮದಿನದಂದು ಭಕ್ತರಿಗೆ ವಿವಿಧ ರೀತಿಯ ಗಿಡಗಳನ್ನು ವಿತರಿಸಿ ಜನ್ಮದಿನವನ್ನು ಆಚರಿಸುತ್ತಿದ್ದರು. ಶ್ರೀಗಳ ಈ ಸವಿನೆನಪಿಗಾಗಿ 57ನೇ ಜನ್ಮದಿನವಾದ ಈ ಬಾರಿಯೂ ವಿವಿಧ ಕಡೆಗಳಲ್ಲಿ ವಿವಿಧ ತಳಿಯ 57 ಸಸಿಗಳನ್ನು ನೆಡಲಾಯಿತು […]