udupixpress
Home Trending ಲಾಕ್ ಡೌನ್ ಸಮಯದಲ್ಲಿ ಪಾರ್ಲೇಜಿ ಬಿಸ್ಕಿಟ್ ಭಾರೀ ಸೇಲ್ : ಪಾರ್ಲೆಯ ಎಲ್ಲಾ ಉತ್ಪನ್ನಗಳಿಗೂ...

ಲಾಕ್ ಡೌನ್ ಸಮಯದಲ್ಲಿ ಪಾರ್ಲೇಜಿ ಬಿಸ್ಕಿಟ್ ಭಾರೀ ಸೇಲ್ : ಪಾರ್ಲೆಯ ಎಲ್ಲಾ ಉತ್ಪನ್ನಗಳಿಗೂ ಡಿಮ್ಯಾಂಡೋ ಡಿಮ್ಯಾಂಡ್

ನವದೆಹಲಿ:ಮೊದಲೇ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಚಿಣ್ಣರಿಂದ ಹಿಡಿದು ಮುದುಕರ ಬಾಯಿಂದಲೂ ಹೆಗ್ಗಳಿಕೆ ಗಳಿಸಿಕೊಂಡಿದ್ದ ಪಾರ್ಲೇಜಿ ಬಿಸ್ಕೆಟ್ ಕೊರೋನಾ ಲಾಕ್ ಡೌನ್ ಸಮಯದಲ್ಲಿ ತನ್ನ ಲಾಭವನ್ನು ಇನ್ನೊಂದಷ್ಟು ಉತ್ತುಂಗಕ್ಕೆ ಏರಿಸಿಕೊಂಡು ದಾಖಲೆ ಮಾರಾಟ ಕಂಡಿದೆ.ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಕಂಪೆನಿಯ ಉತ್ಪನ್ನಗಳು ಅದರಲ್ಲೂ ಬಿಸ್ಕೆಟ್ ಗಳು ಭಾರೀ ಸೇಲ್ ಆದ ಕುರಿತು ಕಂಪೆನಿ ಹೇಳಿಕೊಂಡಿದೆ.ಶೇ.ಐದರಷ್ಟು ಶೇರು ಮೌಲ್ಯ ವೃದ್ದಿಸಿಕೊಂಡು ಕಂಪೆನಿ ಲಾಭದತ್ತ ಸಾಗಿದೆ.

ಇಷ್ಟು ಲಾಭ ಕಂಪೆನಿಗೆ ಯಾವತ್ತೂ ಬಂದಿರಲಿಲ್ಲ.ದೇಶದಲ್ಲಿ ಕಷ್ಟದಲ್ಲಿರುವ ಕಾರ್ಮಿಕರಿಗೆ ಬಹಳಷ್ಟು ಮಂದಿ ಪಾರ್ಲೇಜಿ ಗ್ಲೂಕೋಸ್ ಬಿಸ್ಕೆಟ್ ಗಳನ್ನೇ ನೀಡಿದ್ದಾರೆ.ಇದು ಪಾರ್ಲೆಜಿ ಕಂಪೆನಿಯ ಮೇಲೆ ಜನಗಳಿಗಿರುವ ಪ್ರೀತಿ ಮತ್ತು ವಿಶ್ವಾಸ್ವನ್ನು ಸೂಚಿಸುತ್ತದೆ ಎಂದು ಕಂಪೆನಿ ಮುಖ್ಯಸ್ಥರು ತಿಳಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲೂ ಪಾರ್ಲೆಜಿ ಗುಣಮಟ್ಟ ಮತ್ತು ಸೇವೆಯಲ್ಲಿ ರಾಜಿ ಮಾಡಿಕೊಂಡಿಲ್ಲ ಇದನ್ನು ಗ್ರಾಹಕರು ಮೆಚ್ಚಿಕೊಂಡಿರುವುದು ಖುಷಿ ತಂದಿದೆ ಎಂದು ಕಂಪೆನಿ ಅಭಿಪ್ರಾಯಪಟ್ಟಿದೆ.

error: Content is protected !!