ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಸರ್ಕಾರಿ ಕ್ವಾರಂಟೈನ್ ಇಲ್ಲ: 14 ದಿನ ಹೋಮ್ ಕ್ವಾರಂಟೈನ್: ಆರೋಗ್ಯ ಸಚಿವ ಶ್ರೀರಾಮುಲು
ಉಡುಪಿ: ಮಹಾರಾಷ್ಟ್ರದಿಂದ ಬರುವವರಿಗೆ ಇನ್ಮುಂದೆ ಸರ್ಕಾರಿ ಕ್ವಾರಂಟೈನ್ ಇರುವುದಿಲ್ಲ. ಅದರ ಬದಲಾಗಿ ಅವರನ್ನು 14 ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಹಾಗೆಯೇ ಅವರು ಉಳಿದುಕೊಳ್ಳುವ ಮನೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಹೊರರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಸಂಬಂಧಿಸಿ ರಾಜ್ಯದಲ್ಲಿ ನಿನ್ನೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಅದರಂತೆ ಸೀಲ್ ಹಾಕಿಸಿಕೊಂಡು ಹೋಮ್ ಕ್ವಾರಂಟೈನ್ ಆಗುವ ವ್ಯಕ್ತಿ ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಆತ ಹೊರಬಂದು ಓಡಾಡಿದರೆ […]
ನಿಗದಿತ ದಿನಾಂಕದಂದೇ ಎಸ್.ಎಸ್.ಎಲ್.ಸಿ ಪರೀಕ್ಷೆ: ಸುರೇಶ್ ಕುಮಾರ್
ಉಡುಪಿ: ಈಗಾಗಲೇ ನಿಗದಿಯಾದ ದಿನಾಂಕದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ಈಗಾಗಲೇ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಕೋರ್ಟ್ ನೀಡಿದ ಕೆಲವು ಸೂಚನೆಗಳನ್ನು ಅನುಸರಿಸಿಯೇ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದರು. ಪರೀಕ್ಷಾ ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಜೂನ್ 12 ರಿಂದ 20ರವರೆಗೆ ವಿದ್ಯಾರ್ಥಿಗಳಿಗೆ ಪುನರ್ಮನನ ಕಾರ್ಯಕ್ರಮ ಆಯೋಜಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡುವ ಬಗ್ಗೆ ಸಾರಿಗೆ […]
ಎಸ್.ಎಸ್.ಎಲ್.ಸಿ ಪರೀಕ್ಷೆ: ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭ
ಉಡುಪಿ ಜೂನ್ 9: ಎಸ್.ಎಸ್.ಎಲ್.ಸಿ ಪರೀಕ್ಷೆಯು ಜೂನ್ 25 ರಿಂದ ನಡೆಯಲಿದ್ದು, ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸರಕಾರಿ ರಜಾದಿನ ಹೊರತುಪಡಿಸಿ ಪ್ರತೀ ದಿನ ಕಚೇರಿ ಸಮಯದಲ್ಲಿ ಪರೀಕ್ಷೆಗೆ ಸಂಬಂದಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಈ ಸಹಾಯವಾಣಿಯ ಮೂಲಕ ನೋಡೆಲ್ ಅಧಿಕಾರಿ, ಕಚೇರಿಯನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುವಂತೆ ಡಿಡಿಪಿಯ ಉಡುಪಿ ಅವರ ಪ್ರಕಟಣೆ ತಿಳಿಸಿದೆ. ಸಹಾಯವಾಣಿ ಸಂಖ್ಯೆಗಳು: ಉಪ ನಿದೇಶಕರ ಕಚೇರಿ ಉಡುಪಿ […]