udupixpress
Home Trending ನಿಗದಿತ ದಿನಾಂಕದಂದೇ ಎಸ್‌.ಎಸ್.‌ಎಲ್.‌ಸಿ ಪರೀಕ್ಷೆ: ಸುರೇಶ್ ‌ಕುಮಾರ್

ನಿಗದಿತ ದಿನಾಂಕದಂದೇ ಎಸ್‌.ಎಸ್.‌ಎಲ್.‌ಸಿ ಪರೀಕ್ಷೆ: ಸುರೇಶ್ ‌ಕುಮಾರ್

ಉಡುಪಿ: ಈಗಾಗಲೇ ನಿಗದಿಯಾದ ದಿನಾಂಕದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ಈಗಾಗಲೇ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಕೋರ್ಟ್ ನೀಡಿದ ಕೆಲವು ಸೂಚನೆಗಳನ್ನು ಅನುಸರಿಸಿಯೇ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದರು.
 ಪರೀಕ್ಷಾ ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ,
ಜೂನ್ 12 ರಿಂದ 20ರವರೆಗೆ ವಿದ್ಯಾರ್ಥಿಗಳಿಗೆ ಪುನರ್‌ಮನನ ಕಾರ್ಯಕ್ರಮ ಆಯೋಜಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡುವ ಬಗ್ಗೆ ಸಾರಿಗೆ ಸಚಿವರ ಜತೆ ಚರ್ಚಿಸುವೆ ಎಂದು ತಿಳಿಸಿದರು.
error: Content is protected !!