ಜಿಲ್ಲೆಯನ್ನು ನಾನ್ ಕೋವಿಡ್ ಜಿಲ್ಲೆ ಮಾಡಲು ಪ್ರಯತ್ನ: ಸಚಿವ ಬೊಮ್ಮಾಯಿ
ಉಡುಪಿ ಜೂನ್ 8: ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಡಿಸ್ಚಾರ್ಜ್ ಪ್ರಮಾಣ ಹೆಚ್ಚಿದ್ದು, ಮುಂದಿನ 10 ದಿನದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್ ಆಗುವ ಸಾದ್ಯತೆಗಳಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಂದ ಯಾವುದೇ ಸಂದರ್ಭದಲ್ಲೂ ಸಾವು ಸಂಭವಿಸದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಿಲ್ಲೆಯನ್ನು ನಾನ್ ಕೋವಿಡ್ ಜಿಲ್ಲೆಯನ್ನಾಗಿ ರೂಪಿಸುವಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರನಿಧಿಗಳು ಸಹಕಾರದಿಂದ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ […]
ಉಡುಪಿ: ಮುಂಬೈನಿಂದ ಬಂದ 45 ಮಂದಿ, ಸ್ಥಳೀಯ ಲ್ಯಾಬ್ ಟೆಕ್ನಿಷನ್ ಮಗುವಿಗೆ ಕೊರೊನಾ ಪಾಸಿಟಿವ್
ಉಡುಪಿ: ಮುಂಬೈಯಿಂದ ಉಡುಪಿ ಜಿಲ್ಲೆಗೆ ಬಂದ 44 ಮಂದಿ ಹಾಗೂ ಸ್ಥಳೀಯ ಲ್ಯಾಬ್ ಟೆಕ್ನಿಷನ್ ಮಗುವಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 45 ಸೋಂಕಿತರ ಪೈಕಿ 30 ಪುರುಷರು, 11 ಮಹಿಳೆಯರು ಹಾಗೂ 4 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಡುಪಿ ತಾಲ್ಲೂಕಿನ 9, ಕುಂದಾಪುರ ತಾಲ್ಲೂಕಿನ 34 ಹಾಗೂ ಕಾರ್ಕಳ ತಾಲ್ಲೂಕಿನ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೊರರಾಜ್ಯದಿಂದ ಬಂದವರ ಪರೀಕ್ಷೆ ಪೂರ್ಣ: ಹೊರರಾಜ್ಯದಿಂದ ಜಿಲ್ಲೆಗೆ […]
ಲಾಕ್ ಡೌನ್ ಬಳಿಕ ತೆರೆದ ಕರಾವಳಿಯ ದೇಗುಲಗಳು: ಸಾಮಾಜಿಕ ಅಂತರದ ಮೂಲಕ ಭಕ್ತರಿಗೆ ದರ್ಶನ ಭಾಗ್ಯ
ಮಂಗಳೂರು: ಲಾಕ್ಡೌನ್ ಬಳಿಕ ಜೂ. 8ರಂದು ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಹೀಗಾಗಿ ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೋವಿಡ್-19 ವೈರಸ್ ಕಾರಣದಿಂದ ದೇವಸ್ಥಾನಗಳಿಗೆ ಎರಡೂವರೆ ತಿಂಗಳಿನಿಂದ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಸದ್ಯ ಬಹುತೇಕ ಲಾಕ್ ಡೌನ್ ನಿರ್ಬಂಧಗಳು ಸಡಿಲಿಕೆ ಮಾಡಿ ಇಂದಿನಿಂದ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ದೇವರ ದರ್ಶನಕ್ಕೆ ಪಡೆಯಲು ಅವಕಾಶ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದೇವರ […]
ಕುದ್ರೋಳಿ: ಕೊರೊನ ಮುಕ್ತಿಗಾಗಿ ಧನ್ವಂತರಿ ಹೋಮ
ಮಂಗಳೂರು: ಎರಡೂವರೆ ತಿಂಗಳ ಬಳಿಕ ಇಂದಿನಿಂದ ದೇವಸ್ಥಾನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕೊರೋನಾದಿಂದ ಮುಕ್ತಿಯಾಗಲು ಧನ್ವಂತರಿ ಹೋಮ ಮಾಡಿ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಾಲಾಗಿದೆ. ಲೋಕ ಕಲ್ಯಾಣಕ್ಕಾಗಿ ಗೋಕರ್ಣನಾಥೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕವನ್ನು ಮಾಡಲಾಗಿದ್ದು, ವಿಶ್ವವೇ ಕೊರೊನಾದಿಂದ ಬೇಗ ಮುಕ್ತವಾಗಲಿ ಎಂದು ಪಾರ್ಥಿಸಲಾಯಿತು. ಇನ್ನೂ ಬೆಳಗ್ಗಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗೋಕರ್ಣನಾಥೇಶ್ವರ ದೇವರ ದರ್ಶನ ಪಡೆಯುತ್ತಿದ್ದಾರೆ.ಭಕ್ತರಿಗೆ ಮಂಗಳಾರತಿ, ಗಂಧ ಪ್ರಸಾದ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ವರ್ಷದ ಬಾಲಕ ಸಮೇತ ಮೂವರಿಗೆ ಕೊರೊನಾ ದೃಢಪಟ್ಟಿದೆ. ಮಹಾರಾಷ್ಟ್ರ ದಿಂದ ಬಂದ 52 ವರ್ಷದ ಪುರುಷ ಮತ್ತು ಎಂಟು ವರ್ಷದ ಬಾಲಕ ಹಾಗೂ ದುಬೈನಿಂದ ಬಂದ 23 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 195 ಮಂದಿಗೆ ಕೊರೊನಾ ದೃಢಪಟ್ಟಿದ್ದು, 92 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.