udupixpress
Home Trending ಕುದ್ರೋಳಿ: ಕೊರೊನ ಮುಕ್ತಿಗಾಗಿ ಧನ್ವಂತರಿ ಹೋಮ

ಕುದ್ರೋಳಿ: ಕೊರೊನ ಮುಕ್ತಿಗಾಗಿ ಧನ್ವಂತರಿ ಹೋಮ

ಮಂಗಳೂರು: ಎರಡೂವರೆ ತಿಂಗಳ ಬಳಿಕ ಇಂದಿನಿಂದ ದೇವಸ್ಥಾನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕೊರೋನಾದಿಂದ ಮುಕ್ತಿಯಾಗಲು ಧನ್ವಂತರಿ ಹೋಮ ಮಾಡಿ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಾಲಾಗಿದೆ.

ಲೋಕ ಕಲ್ಯಾಣಕ್ಕಾಗಿ ಗೋಕರ್ಣನಾಥೇಶ್ವರ ದೇವರಿಗೆ ಸಹಸ್ರ ಸೀಯಾಳಾಭಿಷೇಕವನ್ನು ಮಾಡಲಾಗಿದ್ದು, ವಿಶ್ವವೇ ಕೊರೊನಾದಿಂದ‌ ಬೇಗ ಮುಕ್ತವಾಗಲಿ ಎಂದು ಪಾರ್ಥಿಸಲಾಯಿತು.
ಇನ್ನೂ ಬೆಳಗ್ಗಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗೋಕರ್ಣನಾಥೇಶ್ವರ ದೇವರ ದರ್ಶನ ಪಡೆಯುತ್ತಿದ್ದಾರೆ.‌ಭಕ್ತರಿಗೆ ಮಂಗಳಾರತಿ, ಗಂಧ ಪ್ರಸಾದ ನೀಡಲಾಗುತ್ತಿದೆ.

error: Content is protected !!