ದೇಶದಲ್ಲಿ 2ಲಕ್ಷ ದಾಟಿತು ಸೋಂಕಿತರ ಸಂಖ್ಯೆ: ಒಟ್ಟು 5,598 ಸಾವು!
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಜೂನ್ 2ಕ್ಕೆ ಎರಡು ಲಕ್ಷ ದಾಟಿದೆ. ದೇಶದಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗೆವರೆಗೆ ಹೊಸ 8,171 ಪ್ರಕರಣಗಳು ದಾಖಲಾಗಿದ್ದು, ಸೋಂಕು ಪ್ರಕರಣಗಳು ಸಂಖ್ಯೆ ಒಟ್ಟು 1,98,706 ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇತರ ರಾಜ್ಯಗಳು ನೀಡಿದ ಮಾಹಿತಿ ಪ್ರಕಾರ, ಸೋಂಕಿತರ ಒಟ್ಟು ಸಂಖ್ಯೆಯು 2,00,403ಕ್ಕೆ ಏರಿದೆ. ಇದೀಗ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,598ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೃತರಲ್ಲಿ […]
ಉಡುಪಿ ಜಿಲ್ಲೆಯಲ್ಲಿ ಮಂಗಳವಾರದ ಬದಲು ಭಾನುವಾರ ಸೆಲೂನ್ ಬಂದ್ ಮಾಡಲು ನಿರ್ಧಾರ: ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಹಾಗೂ ಭಾನುವಾರ ಸೆಲೂನುಗಳಿಗೆ ಹೆಚ್ಚಿನ ಗ್ರಾಹಕರು ಬರುವುದರಿಂದ ಮುಂದಿನ ದಿನಗಳಲ್ಲಿ ಮಂಗಳವಾರದ ಬದಲು ಭಾನುವಾರ ಸೆಲೂನುಗಳನ್ನು ಬಂದ್ ಮಾಡಲು ಜಿಲ್ಲಾ ಸವಿತಾ ಸಮಾಜ ತೀರ್ಮಾನಿಸಿದೆ. ಮಂಗಳವಾರ ನಡೆದ ಜಿಲ್ಲಾ ಪದಾಧಿಕಾರಿಗಳು ಮತ್ತು ಏಳು ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯವನ್ನು ಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಸೆಲೂನುಗಳನ್ನು ಭಾನುವಾರ ಬಂದ್ ಮಾಡಿ, ಮಂಗಳವಾರ ತೆರೆಯಲು ನಿರ್ಧರಿಸಲಾಗಿದೆ ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಭಾಸ್ಕರ್ […]