ಪುಲ್ವಾಮಾ ಪ್ರದೇಶದಲ್ಲಿ ಗುಂಡಿನ ದಾಳಿ: ಮೂವರು ಉಗ್ರರು ಎನ್ ಕೌಂಟರ್ ಗೆ ಬಲಿ

ಪುಲ್ವಾಮಾ: ಪುಲ್ವಾಮಾ ಕಂಗಾನ್ ಪ್ರದೇಶದಲ್ಲಿ ಜೂನ್ 3ರಂದು ಬೆಳಗ್ಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಬಲಿಯಾದ ಉಗ್ರರಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈಗ ಆ ಪ್ರದೇಶದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಹೆಚ್ಚಿನ ಮಾಹಿತಿ ಇನ್ನೂ ಬರಬೇಕಾಗಿದೆ. ಜೂನ್ 2 ಕ್ಕೆ ಟ್ರಾಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರೂ ಜೈಶ್ ಎ. ಮೊಹಮ್ಮದ್ […]

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್

ಮಂಗಳೂರು: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡುವಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್ ಮಾಡಲಾಗಿದೆ. ಕೊರೋನಾ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿ ಮದುವೆಯಲ್ಲಿ ಭಾಗವಹಿಸಿದ್ದು, ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆರೋಗ್ಯ ಇಲಾಖೆ ದ್ವಿತೀಯ ಸಂಪರ್ಕದ 62 ಮಂದಿಯನ್ನು ಹೋಂ ಕ್ವಾರೆಂಟೈನ್ ಮಾಡಿದೆ. ಮಲೇಷಿಯಾದಿಂದ ಬಂದಿದ್ದ ವೈದ್ಯರೊಬ್ಬರಿಗೆ ಪಾಸಿಟಿವ್ ಆಗಿತ್ತು. ಅವರು ಭಾನುವಾರ ಅರಂತೋಡುವಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಆ ಮನೆಯಲ್ಲಿ ವೈದ್ಯರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿ ಮದುವೆಯಲ್ಲಿ […]

ಇನ್ನೂ ಜಗತ್ತನ್ನೇ ನೋಡದ ನನ್ನ ಗರ್ಭದಲ್ಲಿರುವ ಕಂದಮ್ಮನನ್ನು ಕೊಂದು ಬಿಟ್ಟೆಯಲ್ಲಾ!

ಗರ್ಭ ಧರಿಸಿದ ಆನೆಯೊಂದು ಮನುಷ್ಯನ ದುಷ್ಟ ಕೃತ್ಯಕ್ಕೆ ಬಲಿಯಾದ ಘಟನೆ ದೇಶವನ್ನೇ ಕಲಕುತ್ತಿದೆ.ಅನಾನಾಸ್ ನಲ್ಲಿ ಪಟಾಕಿ ಇಟ್ಟು ಆನೆಯನ್ನು ಸಾಯಿಸಿದ ದುಷ್ಟರ ಬಗ್ಗೆ ಸಹೃದಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಘಟನೆ ಮಾನವರಿಂದ ಮುಗ್ದ ಪ್ರಾಣಿಗಳು ಹೇಗೆ ಸಂಘರ್ಷಕ್ಕೊಳಗಾಗುತ್ತವೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ. ಬರಹಗಾರ್ತಿ ಜಯಾ ಬಿ ಬರೆದ ಬರಹವನ್ನೊಮ್ಮೆ ಓದಿ. ಈ ಬರಹ ನಿಜಕ್ಕೂ ಕಣ್ಣಂಚಿನಲ್ಲಿ ನೀರು ಭರಿಸುತ್ತದೆ.ಯಾವ ಮುಗ್ದ ಪ್ರಾಣಿಗಳನ್ನು ಇನ್ನು ಮುಂದೆ ನಾವು ಬಲಿ ತಗೊಳಲ್ಲ ಎನ್ನುವ ಪ್ರತಿಜ್ಞೆ ಮಾಡೋಣ ಕ್ಷಮಿಸಿ ಬಿಡು […]

ಸಿಡಿಲಂದ್ರೆ ಭಯಬೀಳ್ತಿರಾ? ಹಾಗಿದ್ರೆ ಈ ಮುನ್ನೆಚ್ಚರಿಕೆ ಪಾಲಿಸಿ, ಸಿಡಿಲಿಂದ ಪಾರಾಗ್ತಿರಾ !

ಇನ್ನೇನು ಮಳೆಗಾಲ ಶುರುವಾಗಲಿದೆ. ಮಳೆಗಾಲದಲ್ಲಿ ಮಳೆಯ ಜೊತೆಜೊತೆಗೆ ಸಿಡಿಲಪ್ಪಳಿಸುವುದು ಮಾಮೂಲು.ಕೆಲವರಿಗಂತೂ ಸಿಡಿಲಂದ್ರೆ ಮೈನಡುಕ ಹುಟ್ಟಿಸುತ್ತದೆ.ವರ್ಷ ವರ್ಷ ಸಿಡಿಲೆರಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯೇನಲ್ಲ.ಬಹುತೇಕ ಮಂದಿ ಸಿಡಿಲನ್ನು ನಿರ್ಲಕ್ಷಿಸಿ ಸಿಡಿಲು ಬರುವ ಹೊತ್ತಿಗೇನೇ ಮೊಬೈಲ್ ನಲ್ಲಿ ಮಾತಾಡೋದು, ಸುತ್ತಾಡೋದು,ಟಿ.ವಿ ನೋಡೋದು ಮೊದಲಾದ ಕೆಲಸಗಳನ್ನು ಮಾಡುದರಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ.ಇಂತಹ ಅಪಾಯಕಾರಿ ಸಿಡಿಲಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಒಂದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ಸಿಡಿಲಿಂದ ಪಾರಾಗಬಹುದು. ಹೀಗೆ ಮಾಡಿ: ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ […]

ಭಾರತ್ ಸ್ಕೌಟ್ ಅಂಡ್ ಗೈಡ್ಸ್  ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್

ಉಡುಪಿ: ಭಾರತ್ ಸ್ಕೌಟ್ ಅಂಡ್ ಗೈಡ್ಸ್  ಉಡುಪಿ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ 15,000 ಮಾಸ್ಕ್ ಗಳನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣಾ ಇಲಾಖೆಯ ಶೇಷಶಯನ ಕಾರಂಜ ಅವರಿಗೆ  ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಎಲ್ಲಾ ಸ್ಥಳೀಯ  ಸಂಸ್ಥೆಯ ಕಾರ್ಯದರ್ಶಿಗಳು ಹಸ್ತಾಂತರಿಸಿದರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ರಾಜ್ಯ ಸಂಘಟನಾ ಆಯಕ್ತ ಪ್ರಭಾಕರ್ ಭಟ್, ಜಿಲ್ಲಾ ಸ್ಕೌಟ್ ಆಯುಕ್ತ ಡಾಕ್ಟರ್ ವಿಜಯೇಂದ್ರ ವಸಂತ ರಾವ್, ಜಿಲ್ಲಾ ಕಾರ್ಯದರ್ಶಿ ಜಯಚಂದ್ರ ಸಹಕಾರ್ಯದರ್ಶಿ ಡಾ ಜಯರಾಮ್ ಶೆಟ್ಟಿಗಾರ್, ಜಿಲ್ಲಾ […]