udupixpress
Home Trending ಭಾರತ್ ಸ್ಕೌಟ್ ಅಂಡ್ ಗೈಡ್ಸ್  ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್

ಭಾರತ್ ಸ್ಕೌಟ್ ಅಂಡ್ ಗೈಡ್ಸ್  ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್

ಉಡುಪಿ: ಭಾರತ್ ಸ್ಕೌಟ್ ಅಂಡ್ ಗೈಡ್ಸ್  ಉಡುಪಿ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ 15,000 ಮಾಸ್ಕ್ ಗಳನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣಾ ಇಲಾಖೆಯ ಶೇಷಶಯನ ಕಾರಂಜ ಅವರಿಗೆ  ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಎಲ್ಲಾ ಸ್ಥಳೀಯ  ಸಂಸ್ಥೆಯ ಕಾರ್ಯದರ್ಶಿಗಳು ಹಸ್ತಾಂತರಿಸಿದರು.
 ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ರಾಜ್ಯ ಸಂಘಟನಾ ಆಯಕ್ತ ಪ್ರಭಾಕರ್ ಭಟ್, ಜಿಲ್ಲಾ ಸ್ಕೌಟ್ ಆಯುಕ್ತ ಡಾಕ್ಟರ್ ವಿಜಯೇಂದ್ರ ವಸಂತ ರಾವ್, ಜಿಲ್ಲಾ ಕಾರ್ಯದರ್ಶಿ ಜಯಚಂದ್ರ ಸಹಕಾರ್ಯದರ್ಶಿ ಡಾ ಜಯರಾಮ್ ಶೆಟ್ಟಿಗಾರ್, ಜಿಲ್ಲಾ ಉಪಾಧ್ಯಕ್ಷ  ಗುಣರತ್ನ, ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು  ಹಾಗೂ ನಾಲ್ಕು ವಲಯಗಳ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಜ್ಯೋತಿ. ಬಿ ಬೈಂದೂರು ವಲಯ. ಮಂಜುಳಾ .ಕೆ ಉಡುಪಿ ವಲಯ ಅಶೋಕ್ ಕಾಮತ್ ಕುಂದಾಪುರ ವಲಯ. ಓ. ಆರ್ ಪ್ರಕಾಶ್ ಬ್ರಹ್ಮವಾರ ವಲಯಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸಂಘಟಕರಾದ ನಿತಿನ್ ಅಮೀನ್ ಹಾಗೂ ಸುಮನ್ ಶೇಖರ್ ಕಾರ್ಯಕ್ರಮ ಸಂಘಟಿಸಿದರು.
error: Content is protected !!