ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು:ಜಿಲ್ಲಾಧಿಕಾರಿ
ಕುಂದಾಪುರ : ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಪ್ರಸ್ತುತ ಆಸ್ಪತ್ರೆಯಲ್ಲಿರುವ ಗರ್ಭೀಣಿಯರು ಹಾಗೂ ಬಾಣಂತಿಯರನ್ನು ಕೋಟ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಳೆದೆರಡು ದಿನಗಳಲ್ಲಿ ಬಂದಿರುವ ಪರೀಕ್ಷಾ ವರದಿಗಳಲ್ಲಿ ಅತೀ […]
ಉಡುಪಿಗೆ ಮತ್ತಷ್ಟು ಬೀಗಿಯಾದ ಮಹಾರಾಷ್ಟ್ರದ ಉರುಳು: ಒಂದೇ ದಿನ 150 ಕೊರೊನಾ ಪಾಸಿಟಿವ್
ಉಡುಪಿ: ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದ 150 ಮಂದಿಯಲ್ಲಿ ಇಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ ಅವರು, ಇಂದು ಪತ್ತೆಯಾದ 150 ಸೋಂಕಿತರ ಪೈಕಿ 10 ವರ್ಷದೊಳಗಿನ 9 ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ವೃದ್ದರು ಮೂರು ಮಂದಿ ಇದ್ದಾರೆ. 120 ಪುರುಷರು ಹಾಗೂ 30 ಮಂದಿ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. 1120 ಬೆಡ್ ಗಳ ವ್ಯವಸ್ಥೆ ಕೊರೊನಾ ಸೋಂಕಿತರ […]
ವೈರಲ್ ಆಯ್ತು ರಾಧಿಕಾ ಪಂಡಿತ್ ಮುದ್ದು ಮಕ್ಕಳ ವಿಡಿಯೋ: ಅಕ್ಕ-ತಮ್ಮನ ಮುದ್ದಾಟಕ್ಕೆ ಅಭಿಮಾನಿಗಳು ಫಿದಾ!
ಉಡುಪಿ: ಸದ್ಯ ತಾಯ್ತನ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಸಿನಿ ರಂಗದಿಂದ ಸ್ವಲ್ಪ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್‍ನಲ್ಲಿದ್ದಾರೆ. ಹೌದು ಇದೀಗ ಫೇಸ್‍ಬುಕ್‍ನಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಕಳೆಯುತ್ತಿರುವ ಅದ್ಭುತ ಕ್ಷಣಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಐರಾ ವಿಡಿಯೋ ಅಪ್‍ಲೋಡ್ ಮಾಡುತ್ತಿದ್ದ ರಾಧಿಕಾ ಇದೀಗ ತಮ್ಮ ಇಬ್ಬರು ಮಕ್ಕಳ ಕ್ಯೂಟ್ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಅಕ್ಕ ಐರಾ ತನ್ನ ತಮ್ಮನನ್ನ ಮಡಿಲಲ್ಲಿ […]
ದ.ಕ. ಜಿಲ್ಲೆಯಲ್ಲಿ ತೀವ್ರಗೊಂಡ ಕಡಲಿನ ಅಬ್ಬರ: ಸಚಿವ ಕೋಟರಿಂದ ಪರಿಶೀಲನೆ
ಮಂಗಳೂರು: ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ, ಸರಕಾರದಿಂದ ಯಾವ ಯಾವ ಕಾರ್ಯ ರೂಪಿಸಬೇಕು, ಮತ್ತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕುಂಬುದರ […]
ಕಾರ್ಕಳ: ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯ ಬಂಧನ
ಉಡುಪಿ: ಅಪ್ರಾಪ್ತ ಬಾಲಕನಿಗೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಚ್ಚರಿಪೇಟೆಯ ಇಬ್ರಾಹಿಂ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಕಾರಣ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕನ ಪೋಷಕರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಡಿವೈಎಸ್ ಪಿ ಭರತ್ ರೆಡ್ಡಿ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮತ್ತು ಉಪ ನಿರೀಕ್ಷಕರಾದ ನಾಸಿರ್ ಹುಸೈನ್ ಮತ್ತು ದಿಲೀಪ್ ಒಳಗೊಂಡ ಕ್ರೈಂ ತಂಡ ಆರೋಪಿಯನ್ನು ಬಂಧಿಸಿದೆ. ಜಿಲ್ಲಾ […]