ಉಡುಪಿಯಲ್ಲಿ ಮತ್ತೆ ಹೊಸದಾಗಿ ಆರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲು
ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ ಬಿಡುಗಡೆಗೊಳಿಸಿದ ಕೋವಿಡ್-19 ಸಂಬಂಧಿಸಿದ ಬುಲೆಟಿನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದು ಹೊಸದಾಗಿ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ನಿನ್ನೆಯವರೆಗೆ 15 ಪ್ರಕರಣಗಳು ವರದಿಯಾಗಿದ್ದು, ಇಂದಿನ 6 ಸೇರಿದಂತೆ ಒಟ್ಟು 21 ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿವೆ.
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ: ಆರು ಜನರ ರಕ್ಷಣೆ
ಮಲ್ಪೆ: ಮೀನುಗಾರಿಕೆಗೆ ತೆರಳಿದ ಬೋಟ್ ವೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಸಮುದ್ರ ಮಧ್ಯೆ ಮುಳುಗಡೆಯಾದ ಘಟನೆ ಮಲ್ಪೆಯಲ್ಲಿ ಸಂಭವಿಸಿದೆ. ಮೀನುಗಾರಿಕೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ದುರ್ಘಟನೆ ನಡೆದಿದೆ. ಬೋಟ್ ನಲ್ಲಿದ್ದ ಆರು ಮಂದಿಯನ್ನು ಪಕ್ಕದ ಬೋಟ್ ನವರು ರಕ್ಷಣೆ ಮಾಡಿದ್ದಾರೆ. ಘಟನೆಯಿಂದ ಬೋಟ್ ನಲ್ಲಿದ್ದ 5 ಲಕ್ಷ ಮೌಲ್ಯದ ಮೀನು ಹಾಗೂ ಬಲೆ ಸಮುದ್ರ ಪಾಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಕೊರೋನಾ ಮಹಾಮಾರಿಯಿಂದಾಗಿ ಯಾರೂ ಕೂಡ ನೆಮ್ಮದಿಯಿಂದ ನಿದ್ದೆಮಾಡುತ್ತಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ಕೊರೋನಾ ಮಹಾಮಾರಿಯಿಂದಾಗಿ ಯಾರೂ ಕೂಡ ನೆಮ್ಮದಿಯಿಂದ ನಿದ್ದೆಮಾಡುತ್ತಿಲ್ಲ. ನಮ್ಮನ್ನೂ ಸೇರಿದಂತೆ ನೀವೆಲ್ಲರೂ ಶ್ರಮವಹಿಸಿ ದುಡಿಯುತ್ತಿದ್ದೀರಿ. ಅಧಿಕಾರಿಗಳು ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ದಿನನಿತ್ಯ ನನಗೆ ಸಾವಿರಾರು ಕರೆಗಳು ಬರುತ್ತಿವೆ. ಈ ವೇಗದಲ್ಲಿ ಹೋದರೆ ಏನು ಕೆಲಸವಾಗಲಿಕ್ಕಿಲ್ಲ. ಯುದ್ದ ಎದುರಿಸಿದ ಹಾಗೆ ಕೆಲಸ ಮಾಡಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಎರಡು ದಿನಗಳ ಹಿಂದೆ ಕುಂದಾಪುರ, ಬೈಂದೂರು ಕ್ವಾರಂಟೈನ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೋಟ […]