ಮಂಗಳೂರು: ಕೊರೊನ‌ ಗುಣಮುಖ ಬಂಟ್ವಾಳದ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಂಗಳೂರು: ಕೊರೊನಾ ಸೋಂಕಿತ ಓರ್ವ ಮಹಿಳೆ ಗುಣಮುಖರಾಗಿ ನಗರದ ವೆನ್ಲಾಕ್ ಆಸ್ಪತ್ರೆಯಿಂದ ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಬಂಟ್ವಾಳ‌ ಮೂಲದ ವೃದ್ದೆ ಕೊರಾನಾದಿಂದ ಚಿಕಿತ್ಸೆ ಫಲಕಾರಿ ಮೃತಪಟ್ಟಿದ್ದರು. ನಂತರ ವೃದ್ಧೆ ಮಗಳಿಗೂ ಕೊರೊನಾ ತಗುಲಿ ನಗರದ ವೆನ್ಲಾಕ್ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಹಿಳೆ ಕೊರೊನಾದಿಂದ ಗುಣಮುಖವಾಗಿ‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 31 ಪ್ರಕರಣ ಪತ್ತೆಯಾಗಿದ್ದು, 14 ಮಂದಿ ಕೊರೊನಾದಿಂದ ಗುಣಮುಖವಾಗಿ ಡಿಸ್ಚಾರ್ಜ್ ಆಗಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ. ಸದ್ಯ 14 ಮಂದಿ […]

ಉಡುಪಿ, ದ.ಕ ಓಡಾಟಕ್ಕೆ ಬೇಡ ಪಾಸ್: ಇನ್ನು ಮುಂದೆ ಕಂಪೆನಿ ಅನುಮತಿ ಪತ್ರ ಸಾಕು

ಉಡುಪಿ:  ದಕ್ಷಿಣ ಕನ್ನಡ ಹಾಗೂ ಉಡುಪಿ ಮದ್ಯೆ ಜನ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ಸಡಿಲಿಕೆ ಮಾಡಿದೆ. ಇನ್ನು ಮುಂದೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಯಾವುದೇ ಅಂತರ್ ಜಿಲ್ಲಾ ಪಾಸ್ ವ್ಯವಸ್ಥೆ ಇಲ್ಲದೆ ಉದ್ಯೋಗಸ್ಥರು ಆರಾಮಾಗಿ ಓಡಾಟ ಮಾಡಲು ಸರಕಾರ ವ್ಯವಸ್ಥೆ ಮಾಡಿದೆ. ಉದ್ಯೋಗಸ್ಥರು ತಾವು ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಯಿಂದ ನೀಡಲಾಗುವ ಪತ್ರದ ಮೇರೆಗೆ ಮತ್ತು ಕಂಪನಿ ಸಂಸ್ಥೆಯ ಗುರುತಿನ ಚೀಟಿಯನ್ನು ಓಡಾಟದ ಸಮಯದಲ್ಲಿ ಜೊತೆಗಿಟ್ಟುಕೊಳ್ಳಬೇಕೆಂದು ಸರಕಾರ ತಿಳಿಸಿದೆ.

ಹೊರ ರಾಜ್ಯಗಳಿಗೆ ಪ್ರಯಾಣಿಕರನ್ನು ಕಳುಹಿಸಲು ಯಾವುದೇ ಖಾಸಗಿ ವ್ಯಕ್ತಿಗಳನ್ನು ನೇಮಿಸಿಲ್ಲ:  ಜಿಲ್ಲಾಧಿಕಾರಿ

ಉಡುಪಿ ಮೇ 11: ಕೊರೋನಾ ಲಾಕ್ ಡೌನ್ ಸಮಸ್ಯೆಯಿಂದ, ಉಡುಪಿ ಜಿಲ್ಲೆಯಿಂದ ಹೊರರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಅವರ ರಾಜ್ಯಗಳಿಗೆ ಕಳುಹಿಸಲು ವಾಹನ ಸಂಬoಧಿತ ವ್ಯವಸ್ಥೆ ಮಾಡಲು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸರ್ಕಾರ ಯಾವುದೇ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟ ಪಡಿಸಿದ್ದಾರೆ. ರಾಜ್ಯ ಸರಕಾರವು ಅಂತರ್ ರಾಜ್ಯ ಪ್ರಯಾಣಿಕರಿಗೆ ಸ್ವ ಊರಿಗೆ ಮರಳಲು ಸಹಾಯವಾಗುವಂತೆ ಸೇವಾ ಸಿಂಧು ಆ್ಯಪ್ ತಯಾರಿಸಿದ್ದು, ಇದರಲ್ಲಿ ಈಗಾಗಲೇ ಹಲವಾರು ಮಂದಿ ಈ ಅ್ಯಪ್ […]

ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ರಿಯಾಯತಿ ದರದಲ್ಲಿ ಗಿಡಗಳು ಲಭ್ಯ

ಉಡುಪಿ, ಮೇ 11: ಉಡುಪಿ ಸಾಮಾಜಿಕ ಅರಣ, ವಲಯದ ಪೆರ್ಡೂರು ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ 2019-20 ನೇ ಸಾಲಿನಲ್ಲಿ ಸಾರ್ವಜನಿಕರಿಗೆ ಕೆಳಗಿನಂತೆ ವಿವಿಧ ಜಾತಿಯ ಸಸ್ಯಗಳು ರಿಯಾಯತಿ ದರದಲ್ಲಿ ಲಭ್ಯವಿದೆ. ಜಾತಿ: ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಫಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ , ಹೆಬ್ಬೇವು, ಹಲಸು,  ಬೀಟೆ, ಅತ್ತಿ, ನೇರಳೆ, ಪುರ್ನಪುಳಿ, ಪೇರಳೆ, ಮಾವು,  ಒಟ್ಟು […]

ಕೊರೊನಾ ವೈರಸ್: ಜಗತ್ತಿನಾದ್ಯಂತ 41 ಲಕ್ಷ ಜನರಲ್ಲಿ ಸೋಂಕು ದೃಢ, 2 ಲಕ್ಷ ಜನರು ಬಲಿ

ಕೊರೊನಾ ಅಟ್ಟಹಾಸಕ್ಕೆ ಅಮೇರಿಕಾ ಕಳೆದ 24 ಗಂಟೆಯಲ್ಲಿ 20,000 ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಅಮೆರಿಕದಲ್ಲಿ 13.6 ಲಕ್ಷ ಜನರು  ಸೋಂಕಿನಿಂದ ಬಳಲುತ್ತಿದ್ದು, 80,574 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು 187 ರಾಷ್ಟ್ರಗಳಿಗೆ ಹರಡಿದ್ದು, ಇಲ್ಲಿಯವರೆಗೂ 41 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.10 ಲಕ್ಷ ಜನರು ಕೋವಿಡ್‌-19 ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 67,000  ದಾಟಿದ್ದು, […]