ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರಧಾನ್ಯ ವಿತರಣೆ: ಜಿಲ್ಲಾಧಿಕಾರಿ

ಉಡುಪಿ, ಮೇ 6: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ  ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ-2020ರ ಮಾಹೆಗೆ ಬಿಡುಗಡೆಯಾಗಿರುವ ಆಹಾರಧಾನ್ಯವನ್ನು ಮೇ 7 ರಿಂದ  ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಈ ಕೆಳಗಿನಂತೆ ವಿತರಿಸಲಾಗುವುದು. ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ ಏಪ್ರಿಲ್ ಮತ್ತು ಮೇ ಮಾಹೆಯ ಬಾಬ್ತು ತಿಂಗಳಿಗೆ 5ಕಜಿಯಂತೆ ಒಟ್ಟು 10 ಕೆಜಿ  ಅಕ್ಕಿ ಹಾಗೂ ಪ್ರತಿ ಕಾರ್ಡಿಗೆ 1 ಕಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುವುದು. […]

ಕೈಗಾರಿಕೆಗಳ ಪ್ರಾರಂಭಕ್ಕೆ ಸ್ವಯಂ ದೃಢೀಕರಣ ಅಗತ್ಯ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಮೇ 6: ಲಾಕ್‌ಡೌನ್ ಅವಧಿಯಲ್ಲಿ ಕೈಗಾರಿಕೆಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಗೆ ಬರುವ ಇತರ ಚಟುವಟಿಕೆಗಳು ಸ್ವಯಂ ದೃಢೀಕರಣ ಸಲ್ಲಿಸಿ ಕೈಗಾರಿಕೆ ಪ್ರಾರಂಭಿಸಲು ಸರಕಾರ ಸುತ್ತೋಲೆ ಹೊರಡಿಸಿದೆ. ಸರಕಾರಿ ಆದೇಶದಂತೆ, ಅರ್ಹರಿರುವ ಕೈಗಾರಿಕೆಗಳು ಐಟಿ/ಐಟಿಇಎಸ್ ಕಂಪೆನಿಗಳು, ಡಾಟಾ/ಕಾಲ್ ಸೆಂಟರ್‌ಗಳು, ಟೆಲಿ ಕಮ್ಯೂನಿಕೇಷನ್, ಇಂಟರ್ನೆಟ್ ಸರ್ವಿಸಸ್, ಇಂಕ್ಯೂಬರೇಟರ್‌ಗಳು ಹಾಗೂ ಇನ್ನಿತರ ಕಂಪೆನಿಗಳು ಕಾರ್ಯನಿರ್ವಹಿಸುವ ಬಗ್ಗೆ ಆನ್‌ಲೈನ್‌ನಲ್ಲಿ www.kum.karnataka.gov.in ವೆಬ್‌ಸೈಟ್‌ನಲ್ಲಿ COVID-19 SELF DECLARATION ಲಿಂಕ್ ನ್ನು ಉಪಯೋಗಿಸಿಕೊಂಡು ಸ್ವಯಂ ದೃಢೀಕರಣ ಸಲ್ಲಿಸಿದ ನಂತರ ಘಟಕ […]

ರಂಗದಲ್ಲೂ ಕುಣಿತಾರೆ, ಕೊಳಲೂ ನುಡಿಸ್ತಾರೆ ಈ ಯುವತಾರೆ: ಪ್ರತಿಭೆಗಳ ಬಹುಮುಖಿ ಉಡುಪಿಯ ಚಿರಶ್ರೀ ಕತೆ ಕೇಳಿ

ಇದು UDUPI XPRESS”ಬಣ್ಣದ ಕನಸುಗಾರರು” ಸರಣಿಯ 5 ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.ಈ ಸಂಚಿಕೆಯಲ್ಲಿ ಉಡುಪಿ, ಗುಂಡಿಬೈಲಿನ ಚಿರಶ್ರೀ ಕತೆ ಹೇಳ್ತೀವಿ ಒಂದು ಕಲೆ, ಒಂದು ಕಲಿಕೆ, ಒಂದೇ ಆಸಕ್ತಿ. ಉಹ್ಞು. ಇಲ್ಲಿ ಹಾಗಲ್ಲ.‌ […]