ದ.ಕ. ಜಿಲ್ಲೆ: ಓರ್ವ ಕೊರೊನ ಸೋಂಕಿತ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಮಂಗಳೂರು: ದ.ಕ ಜಿಲ್ಲೆಯ 13ನೇ ಕೊರೋನಾ ರೋಗಿ ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಗೆ ವೈಯಕ್ತಿಕ ಕೆಲಸ ನಿಮಿತ್ತ ತೆರಳಿದ್ದ 39 ವರ್ಷದ ಉಪ್ಪಿನಂಗಡಿ ನಿವಾಸಿಗೆ ಎ.17ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ಆ ಬಳಿಕ ಇವರ ಪತ್ನಿಗೂ ಕೊರೋನಾ ಸೋಂಕು ತಗುಲಿತ್ತು. ಸದ್ಯ ಪತ್ನಿಗೆ ಚಿಕಿತ್ಸೆ ಮುಂದುವರಿದಿದೆ. ದ.ಕ ಜಿಲ್ಲೆಯಲ್ಲಿ 12 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಪ್ರಕರಣಗಳು 28 ಪ್ರಕರಣ ಕಂಡುಬಂದಿದೆ. ಮೂವರು ಮೃತಪಟ್ಟಿದ್ದಾರೆ. ಈವರೆಗೆ 13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪರೀಕ್ಷೆಗೆ ಚಿಂತನೆ,ಎರಡು ಬ್ಯಾಚ್ ಗಳಲ್ಲಿ ಶೈಕ್ಷಣಿಕ ವರ್ಷದ ಆರಂಭ :ಸಚಿವ
ಬೆಂಗಳೂರು:ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಈಗಾಗಲೇ ಪಾಠ ಪ್ರವಚನಗಳು ನಡೆಯುತ್ತಿದ್ದು ಪರೀಕ್ಷೆಯನ್ನು ಕೂಡ ಆನ್ ಲೈನ್ ನಲ್ಲಿಯೇ ಮಾಡುವ ಕುರಿತು ಸರಕಾರ ಯೋ ಚಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಟ್ವೀಟ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪದವಿ ಕಾಲೇಜುಗಳಲ್ಲಿ ಎಲ್ಲಾ ಪರೀಕ್ಷೆಗಳು ಹಾಗೂ ಹೊಸ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಅಗಸ್ಟ್ ನಲ್ಲಿ ಪೂರ್ಣಗೊಂಡು, ಅಗಸ್ಟ್ ಹಾಗೂ ಸಷ್ಟೆಂಬರ್ ನಲ್ಲಿ ಎರಡು ಬ್ಯಾಚ್ ಗಳಲ್ಲಿ ಹೊಸ […]
ಕುಂದಾಪುರ: ವೇದ ಗಣಿತ ಅಧ್ಯಯನ ವೇದಿಕೆಯಿಂದ ಪಿಎಂ ಕೇರ್ ಫಂಡ್ಗೆ ನೆರವು
ಕುಂದಾಪುರ: ಪಿಎಂ ಕೇರ್ ಫಂಡ್ಗೆ ವೇದಗಣಿತ ಅಧ್ಯಯನ ವೇದಿಕೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಮೂಲಕ 5 ಲಕ್ಷ ರೂ.ಗಳ ನೆರವು ನೀಡಲಾಗಿದೆ. ವೈದ್ಯ ಡಾ| ಎಸ್.ಎನ್. ಪಡಿಯಾರ್ ಅವರು ತಮ್ಮ ಸಂಗಮ್ ಬಳಿಯಲ್ಲಿನ ನಿವಾಸದಲ್ಲಿ ಸಂಸದೆ ಮೂಲಕ ಪ್ರಧಾನಿಗೆ 5 ಲಕ್ಷ ರೂ.ಗಳ ನೆರವು ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಡಾ| ಪಡಿಯಾರ್, ೨೦ ವರ್ಷಗಳ ಹಿಂದೆ ಸ್ವದೇಶಿ ಜಾಗರಣ ಮಂಚ್ನ ಪಶ್ಚಿಮ ವಿಭಾಗ ಮುಖ್ಯಸ್ಥನಾಗಿದ್ದಾಗ ಕಾರ್ಯಕ್ರಮವೊಂದಕ್ಕೆ ನರೇಂದ್ರ ಮೋದಿ ಬಂದಿದ್ದರು. ಆ ವೇಳೆಯಲ್ಲಿ […]
ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ: ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ವಿದೇಶದಿಂದ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಇಂದು ಕುಂದಾಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಕರೆ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ. ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ ಎಂದು ಹೇಳಿದರು. ಪಿಎಫ್ಐ ಹಾಗೂ ಎಸ್ ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆ ಬರುತ್ತೆ. ಹಿಂದೂ ಯುವಕರ ಹತ್ಯೆಯಾದ ಬಗ್ಗೆ ಮಾತನಾಡಿದಾಗ ಕರೆ ಬರುತ್ತೆ. ಕಳೆದ 2 […]
ಮಂಗಳೂರಿನಲ್ಲಿ ಇಂದು ಮೂವರಿಗೆ ಕೊರೊನ ದೃಢ: ದ.ಕ. ಜಿಲ್ಲೆಯಲ್ಲಿ ಮತ್ತಷ್ಟು ಆತಂಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಕೊರೊನಾ ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. P 536 ಸಂಖ್ಯೆಯ ರೋಗಿ ಸಂಪರ್ಕದಲ್ಲಿ ಇದ್ದ ಮಂಗಳೂರಿನ ಬೋಳಾರದ 38 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿಯ ಗಂಟಲು ದ್ರವ ಮಾದರಿಯ ವರದಿ ಇಂದು ಸ್ವೀಕೃತಗೊಂಡಿದ್ದು, ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. P390 ಸಂಖ್ಯೆಯ ರೋಗಿ ಸಂಪರ್ಕದ ಇದ್ದ 16 ವರ್ಷದ ಬಾಲಕಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಮೂರು […]