ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಒದಗಿಸಿ: ಬಿ.ಸಿ.ಪಾಟೀಲ್
ಉಡುಪಿ, ಮೇ 4: ರೈತರಿಗೆ ವಿತರಿಸಲಾಗುವ ಭಿತ್ತನೆ ಬೀಜ, ಕೀಟನಾಶಕಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು , ಈ ಕುರಿತಂತೆ, ಭಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾದರಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಿ, ರೈತರಿಗೆ ಉತ್ತಮ ಗುಣಮಟ್ಟದ ಭಿತ್ತನೆ ಬೀಜಗಳು ದೊರೆಯುವಂತೆ ಮಾಡಬೇಕು ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು. ರಾಜ್ಯದಲ್ಲಿ ಕೋವಿಡ್-19 ಆವರಿಸಿರುವ ಕಾರಣ , ಅವರು ಸೋಮವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳ ಲಭ್ಯತೆ ಮತ್ತು […]
ನಾಳೆಯಿಂದ ಉಡುಪಿಯಲ್ಲಿ ಲಾಕ್ ಡೌನ್ ಸಡಿಲಿಕೆ: ಬೆಳಗ್ಗೆ 7ರಿಂದ ಸಂಜೆ 7ವರೆಗೆ ಸಂಚಾರಕ್ಕೆ ಅವಕಾಶ: ಜಿಲ್ಲಾಧಿಕಾರಿ
ಉಡುಪಿ: ಕೋವಿಡ್ 19 ಸಂಬಂಧಿಸಿ ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7ರಿಂದ ಸಂಜೆ 7 ರ ವರೆಗೆ ಅವಕಾಶ ನೀಡಲಾಗಿದೆ. ಅದರಂತೆ ಎಂಎಸ್ ಐಎಲ್ ಹಾಗೂ ವೈನ್ ಶಾಪ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಬೆಳಿಗ್ಗೆ 9ರಿಂದ ಸಂಜೆ 7ರ ವರೆಗೆ ಅನುಮತಿ ನೀಡಲಾಗಿದೆ. ಇಂದು ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮದ್ಯ ಮಾರಾಟಕ್ಕೆ ಬೆಳಿಗ್ಗೆ 9ರಿಂದ 1 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು. […]
ಕುಂದಾಪ್ರದಲ್ಲೂ ಜಾತ್ರೆಯಂತಾಯ್ತು ಗುಂಡು ಪ್ರಿಯರ ದಂಡು: ನಶೆ ಏರಿಸಿಕೊಳ್ಳುವ ಆಸೆಯಲ್ಲಿ ಸಾಮಾಜಿಕ ಅಂತರ ಮರೆತ್ರು, ಅಂಗಡಿ ಶಟರ್ ಎತ್ತಿದ್ರು
ಕುಂದಾಪುರ: ಸೋಮವಾರದಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಷರತ್ತುಬದ್ದ ಅನುಮತಿ ನೀಡಿದ ಪರಿಣಾಮ ಮದ್ಯ ಪ್ರಿಯರು ಮದ್ಯದಂಗಡಿಗಳೆದುರು ಸರಕಾರದ ಆದೇಶಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯಕ್ಕಾಗಿ ಮುಗಿಬಿದ್ದಿದ್ದಾರೆ. ಕಳೆದ ನಲವತ್ತು ದಿನಗಳಿಂದ ಮದ್ಯವಿಲ್ಲದೆ ಪರದಾಡುತ್ತಿದ್ದ ಮದ್ಯ ಪ್ರಿಯರು ಸರಕಾರ ಹೊರಡಿಸಿರುವ ಆದೇಶಕ್ಕೆ ಸಂತಸ ವ್ಯಕ್ತಪಡಿಸಿ ಮದ್ಯದಂಗಡಿಗಳ ಎದುರು ಅರ್ಧ ಕಿಲೋಮೀಟರಿಗೂ ಅಧಿಕ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ ದೃಶ್ಯ ಕಂಡುಬಂದಿತು. ಆರಂಭದಲ್ಲಿ ಹನಿ-ಹನಿ ಮಳೆ ಸುರಿದರೂ ಬಳಿಕ ಬಿಸಿಲ ಝಳದ ನಡುವೆಯೂ ಬಹುತೇಕ ಮದ್ಯ […]
ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಸೆಂಟರ್ ಇದ್ರೆ ಅಪಾಯ ! ಗುಲ್ವಾಡಿ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಸೆಂಟರ್ ಗೆ ವಿರೋಧ:
ಕುಂದಾಪುರ: ಇಲ್ಲಿನ ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಎಫ್ಎಸ್ಐಎಲ್ ತರಬೇತಿ ಕೇಂದ್ರವನ್ನು ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತಿಸಿರುವುದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಭಾನುವಾರದಿಂದ ಇಲ್ಲಿನ ಎಫ್ಎಸ್ಐಎಲ್ ತರಬೇತಿ ಕೇಂದ್ರದಲ್ಲಿ ಬೇರೆ ಜಿಲ್ಲೆಗಳಿಂದ ಬಂದಿರುವವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಸುಮಾರು ಮೂವತ್ತಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಸಮೀಪದಲ್ಲಿ ಸಾಕಷ್ಟು ಮನೆಗಳಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ದಿನವನ್ನು ಕಳೆಯುವಂತಾಗಿದೆ. ಸ್ಥಳೀಯರನ್ನು ಕ್ವಾರಂಟೈನ್ನಲ್ಲಿಟ್ಟರೆ ಯಾವುದೇ ಅಭ್ಯಂತರವಿಲ್ಲ. ಆದರೆ ಪಂಚಾಯತ್ ವ್ಯಾಪ್ತಿ ಮೀರಿದವರನ್ನೂ ಇದೇ ಸೆಂಟರ್ನಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ. ಹೀಗಾಗಿ ಕ್ವಾರಂಟೈನ್ […]
ಕುಂದಾಪುರ: ಕುಡಿಯುವ ನೀರಿನ ಪೈಪ್ ಪೈನ್ ಅಳವಡಿಕೆಗೆ ಇಡೀ ರಸ್ತೆ ಅಗೆತ : ಆಕ್ರೋಶಗೊಂಡ ಜನರಿಂದ ಕಾಮಗಾರಿಗೆ ತಡೆ
ಕುಂದಾಪುರ : ಕುಡಿಯುವ ನೀರಿನ ಪೈಪ್ ಪೈನ್ ಅಳವಡಿಕೆಗೆ ಇಡೀ ರಸ್ತೆಯನ್ನು ಅಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಸೋಮವಾರ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಗುಜ್ಜಾಡಿ ಗ್ರಾಮದ ನಾಯಕವಾಡಿ ಪರಿಸರದ ಮೇಲಂಡಿ ಎಂಬಲ್ಲಿ ಗ್ರಾಮ ಪಂಚಾಯತ್ನ ೧೪ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಗೆ ೭೧ ಸಾವಿರ ರೂ. ಮೀಸಲಿಡಲಾಗಿತ್ತು. ಮೇ ೩೧ರೊಳಗೆ ಕಾಮಗಾರಿಯನ್ನು ಮುಗಿಸಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಭಾನುವಾರ ಗುತ್ತಿಗೆದಾರರು ಯಾರ ಗಮನಕ್ಕೂ ತಾರದೇ ಮೇಲಂಡಿ ಪರಿಸರದ […]