ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಸೆಂಟರ್ ಇದ್ರೆ ಅಪಾಯ ! ಗುಲ್ವಾಡಿ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಸೆಂಟರ್‌ ಗೆ ವಿರೋಧ:

ಕುಂದಾಪುರ: ಇಲ್ಲಿನ ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಎಫ್‌ಎಸ್‌ಐಎಲ್ ತರಬೇತಿ ಕೇಂದ್ರವನ್ನು ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತಿಸಿರುವುದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಭಾನುವಾರದಿಂದ ಇಲ್ಲಿನ ಎಫ್‌ಎಸ್‌ಐಎಲ್ ತರಬೇತಿ ಕೇಂದ್ರದಲ್ಲಿ ಬೇರೆ ಜಿಲ್ಲೆಗಳಿಂದ ಬಂದಿರುವವರನ್ನು ಕ್ವಾರೆಂಟೈನ್ ಮಾಡಲಾಗಿದೆ. ಸುಮಾರು ಮೂವತ್ತಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಸಮೀಪದಲ್ಲಿ ಸಾಕಷ್ಟು ಮನೆಗಳಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ದಿನವನ್ನು ಕಳೆಯುವಂತಾಗಿದೆ. ಸ್ಥಳೀಯರನ್ನು ಕ್ವಾರಂಟೈನ್‌ನಲ್ಲಿಟ್ಟರೆ ಯಾವುದೇ ಅಭ್ಯಂತರವಿಲ್ಲ. ಆದರೆ ಪಂಚಾಯತ್ ವ್ಯಾಪ್ತಿ ಮೀರಿದವರನ್ನೂ ಇದೇ ಸೆಂಟರ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ. ಹೀಗಾಗಿ ಕ್ವಾರಂಟೈನ್ ಸೆಂಟರ್‌ಗೆ ಗುಲ್ವಾಡಿ ಗ್ರಾ.ಪಂ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ಕ್ವಾರಂಟೈನ್ ಸೆಂಟರ್ ಅನ್ನು ಸ್ಥಳಾಂತರಿಸಬೇಕು ಎಂದು ಗ್ರಾ.ಪಂ ಸದಸ್ಯ ಸುದೀಶ್ ಶೆಟ್ಟಿ ಕರ್ಕಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.