ಮಟ್ಟುಗುಳ್ಳ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ: ತೋಟಗಾರಿಕೆ ಇಲಾಖೆ
ಉಡುಪಿ ಏ.29: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು, ಉಳಿಯಾರಗೋಳಿ ಹಾಗೂ ಕೋಟೆಗ್ರಾಮಗಳಲ್ಲಿ ಬೆಳೆಯುವ ಮಟ್ಟುಗುಳ್ಳ ಬದನೆಯು ಭೌಗೋಳಿಕ ಮಾನ್ಯತೆ ಪಡೆದಿರುವ ಬೆಳೆಯಾಗಿರುತ್ತದೆ. ಇದರ ವಿಶೇಷ ರುಚಿಯಿಂದ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು ಉಡುಪಿ, ಮತ್ತು ಮಂಗಳೂರು ಜಿಲ್ಲೆಗಳ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 89 ಮಟ್ಟುಗುಳ್ಳ ಬದನೆ ಬೆಳೆಗಾರರು 128 ಎಕರೆ ವಿಸ್ತೀರ್ಣದಲ್ಲಿ ಮಟ್ಟುಗುಳ್ಳ ಬದನೆಯನ್ನು ಪ್ರತಿವರ್ಷ ಬೆಳೆಯುತ್ತಿದ್ದು, ಈ ವರ್ಷ ಕೋವಿಡ್-19 ಸಂಬಂದ ಲಾಕ್ ಡೌನ್ ಇದ್ದುದರಿಂದ ಮಟ್ಟುಗುಳ್ಳ ಬದನೆಗೆ […]
ಗ್ರಾಮ ಮಟ್ಟದಿಂದಲೇ ಕೊರೊನಾ ತೊಲಗಿಸಲು ಪಂಚಾಯತ್ ಸಜ್ಜಾಗಬೇಕು: ಸಚಿವ ಕೋಟ ಕರೆ
ಪುತ್ತೂರು: ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯೊಂದನ್ನು ರಚಿಸಿಕೊಂಡು ಕೊರೊನಾ ಮುಕ್ತವಾಗಿಸಲು ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳು ಸಿದ್ದರಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ಆಯ್ದ 30 ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಇಂದು ವಿಡಿಯೋ ಸಂವಾದ ನಡೆಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಸಂಘಟಿತವಾಗಿ ಕೆಲಸ ಮಾಡಿದಲ್ಲಿ ಕೊರೊನಾವನ್ನು ಬೇರುಸಮೇತವಾಗಿ ಕಿತ್ತುಹಾಕಲು ಸಾಧ್ಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಮನೆ ಮನೆ ಸಂದರ್ಶಿಸುವ […]
ವೆನ್ಲಾಕ್ ಆಸ್ಪತ್ರೆಗೆ ನಿರ್ಮಿತಿ ಕೇಂದ್ರದ ವತಿಯಿಂದ ಕೋವಿಡ್ 19 ಮಾದರಿ ಸಂಗ್ರಹಣಾ ಕೇಂದ್ರ ಹಸ್ತಾಂತರ
ಮಂಗಳೂರು: ನಗರದ ಪ್ರಮುಖ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಿರುವ ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಕೋವಿಡ್ 19 ಮಾದರಿ ಸಂಗ್ರಹಣಾ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈರಾಣು ಸೋಂಕಿತರು ಹೆಚ್ಚಾಗುತ್ತಿರುವ ವಿದ್ಯಮಾನಗಳು ಆಘಾತಕಾರಿಯಾಗಿದೆ. ಈಗಾಗಲೇ ಅನೇಕರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ತಕ್ಷಣವೇ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ. ನಿರ್ಮಿತಿ ಕೇಂದ್ರದ ಪ್ರಮುಖರಾದ ರಾಜೇಂದ್ರ […]
ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದಿಂದ ಕೋವಿಡ್-19 ಪರಿಹಾರ ನಿಧಿಗೆ ರೂ.50 ಲಕ್ಷ ಚೆಕ್ ಹಸ್ತಾಂತರ
ಉಡುಪಿ ಏ.29: ಕರ್ನಾಟಕ ರಾಜ್ಯಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಸಹಾಯಕ ಜನತೆ ಹಾಗೂ ಸಂತ್ರಸ್ಥರ ನೆರವಿಗೆ ಸಹಕಾರಿಯಾಗಲು ದಕ್ಷಿಣಕನ್ನಡ ಸಹಕಾರಿ ಹಾಲು ಒಕ್ಕೂಟದ ಉಭಯ ಜಿಲ್ಲೆಗಳ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದೇಣಿಗೆ ಮೊತ್ತ, ಒಕ್ಕೂಟದ ಸಿಬ್ಬಂದಿಗಳ ಒಂದು ದಿನದ ವೇತನ ಮೊತ್ತ ಸೇರಿದಂತೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಒಟ್ಟಾಗಿ ರೂ.50 ಲಕ್ಷ ಸಹಾಯಧನದ ಚೆಕ್ನ್ನು ಏಪ್ರಿಲ್ 28 ರಂದು ಸಹಕಾರ ಸಚಿವರ ಮೂಲಕ […]
ಕಿನ್ನಿಗೋಳಿ: ಹಾಡಹಗಲೇ ದಂಪತಿಯ ಬರ್ಬರ ಹತ್ಯೆ; ಆರೋಪಿ ಪೊಲೀಸರ ವಶ
ಮಂಗಳೂರು: ಹಾಡಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದ.ಕ.ಜಿಲ್ಲೆಯ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ಬುಧವಾರ ನಡೆದಿದೆ. ಏಳಿಂಜೆಯ ವಿನ್ಸೆಂಟ್ ಡಿಸೋಜ (48) ಹಾಗೂ ಅವರ ಪತ್ನಿ ಹೆಲಿನ್ ಡಿಸೋಜಾ (43) ಹತ್ಯೆಗೀಡಾದವರು. ಅಲ್ಫನ್ ಸಲ್ದಾನ (52)ಎಂಬಾತ ಕೊಲೆ ನಡೆಸಿದ್ದು, ಆತನನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.