udupixpress
Home Trending ಕಿನ್ನಿಗೋಳಿ: ಹಾಡಹಗಲೇ ದಂಪತಿಯ ಬರ್ಬರ ಹತ್ಯೆ; ಆರೋಪಿ ಪೊಲೀಸರ ವಶ

ಕಿನ್ನಿಗೋಳಿ: ಹಾಡಹಗಲೇ ದಂಪತಿಯ ಬರ್ಬರ ಹತ್ಯೆ; ಆರೋಪಿ ಪೊಲೀಸರ ವಶ

ಮಂಗಳೂರು: ಹಾಡಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದ.ಕ.‌ಜಿಲ್ಲೆಯ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ಬುಧವಾರ ನಡೆದಿದೆ.
ಏಳಿಂಜೆಯ ವಿನ್ಸೆಂಟ್ ಡಿಸೋಜ (48) ಹಾಗೂ ಅವರ ಪತ್ನಿ ಹೆಲಿನ್ ಡಿಸೋಜಾ (43) ಹತ್ಯೆಗೀಡಾದವರು.
ಅಲ್ಫನ್ ಸಲ್ದಾನ (52)ಎಂಬಾತ ಕೊಲೆ ನಡೆಸಿದ್ದು, ಆತನನ್ನು ಪೊಲೀಸ್ ರು  ವಶಕ್ಕೆ ಪಡೆದಿದ್ದಾರೆ. ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಹೆಚ್ಚಿನ‌ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

error: Content is protected !!