ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಸ್ಪಷ್ಟನೆ
ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತಾಗಿ ಹಬ್ಬಿದ್ದ ಊಹಾಪೋಹಗಳಿಗೆ ದಕ್ಷಿಣ ಕೊರಿಯಾ ತೆರೆಎಳೆದಿದೆ. ಕಿಮ್ ಜಾಂಗ್ ಉನ್ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ಸಿಎನ್ಎನ್ ವರದಿ ಮಾಡಿದೆ. ಕಿಮ್ ಜಾಂಗ್ ಉನ್ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವದಂತಿಗಳು ಹರಡಿದ್ದವು. ಶಸ್ತ್ರಚಿಕಿತ್ಸೆ ನಂತರ […]
ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಬಡವರಿಗೆ 150 ತರಕಾರಿ ಕಿಟ್ ವಿತರಣೆ
ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ 31ನೇ ಬೈಲೂರು ವಾರ್ಡಿನ ಭಾಗ್ಯಮಂದಿರ ಹಾಗೂ ಇತರ ಪ್ರದೇಶದ ಜನರಿಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರು ಸುಮಾರು 150 ತರಕಾರಿ ಕಿಟ್ ಗಳನ್ನು ವಿತರಿಸಿದರು.
ನಾಗರಿಕ ಸಮಿತಿಯಿಂದ 100 ಗಡ್ಡಧಾರಿಗಳಿಗೆ ಉಚಿತ ಶೇವಿಂಗ್ ಸೆಟ್ ವಿತರಣೆ
ಉಡುಪಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಶರೀರ ಸ್ವಚ್ಚತೆ ಕಾಪಾಡಲು ಸಮಸ್ಯೆ ಎದುರಾಗಿದೆ. ಸೆಲೂನ್ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿವುದರಿಂದ ಎಲ್ಲರು ಗಡ್ಡಧಾರಿಗಳಾಗಿದ್ದರು. ಇದರಿಂದ ಇವರೆಲ್ಲರೂ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬೆಳೆದು ನಿಂತಿರುವ ಗಡ್ಡದಿಂದಾಗಿ ಸೆಖೆಯಲ್ಲಿ ಕೆಲವರಿಗೆ ತುರಿಕೆ, ಕೆಲವರ ಗಡ್ಡದಲ್ಲಿ ಹೇನಿನ ಸಂಚಾರ, ಚರ್ಮವ್ಯಾಧಿಯ ಲಕ್ಷಣಗಳು, ಊಟ ಮಾಡುವವಾಗ ಮೀಸೆ ಗಡ್ಡಗಳಿಗೆ ಅಂಟಿಕೊಳ್ಳುವ ಅನ್ನ ಸಾಂಬರು, ಅಂದ ಕಳೆದಿರುವ ಮುಖ ಸೌಂದರ್ಯ. ಇವುಗಳೆಲ್ಲ ಸಮಸ್ಯೆಗಳು ಸೇವಿಂಗ್ ಮಾಡಿಕೊಳ್ಳಲು ಅಸಹಾಯಕತೆ ಎದುರಾದರಿಂದ ವಲಸೆ ಕಾರ್ಮಿಕರು ಎದುರಿಸಬೇಕಾಯಿತು. […]
ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಬ್ಬ ಮಹಿಳೆಗೆ ಕೊರೋನಾ ಸೋಂಕು ಪತ್ತೆ: ಇಂದು ರಾಜ್ಯದ ಏಕೈಕ ಪ್ರಕರಣ
ಮಂಗಳೂರು: ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಭಾನುವಾರ ಮತ್ತೊಬ್ಬ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ 47 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಎ.21ರಂದು ಮೃತಪಟ್ಟಿದ್ದ ಕೇಸ್ ನಂಬರ್ P-432 ವೃದ್ದೆಯ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಬಂಟ್ವಾಳದ ವೃದ್ದೆ ಚಿಕಿತ್ಸೆ ಪಡೆದಿದ್ದು, ಎ.21ರಂದು ಅವರು ಮೃತಪಟ್ಟಿದ್ದರು. ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹಿಳೆಗೆ […]