ಕೋವಿಡ್-19: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪತ್ರಕರ್ತರಿಗೆ ಆರೋಗ್ಯ ತಪಾಸಣೆ

ಉಡುಪಿ ಏ.24: ಕೋವಿಡ್-19  ಸಂದರ್ಭದಲ್ಲಿ, ಸಾರ್ವಜನಿಕರಿಗೆ ಕೋವಿಡ್ 19 ಕುರಿತು ಸುದ್ದಿಗಳನ್ನು ತಲುಪಿಸುತ್ತಿರುವ  ಪತ್ರಕರ್ತರು, ಲಾಕ್‌ಡೌನ್ ಆರಂಭದಿಂದಲೂ ತಮಗಿರುವ ಅಪಾಯವನ್ನು ಲೆಕ್ಕಿಸದೇ, ಪ್ರತೀ ದಿನ ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಆರೋಗ್ಯ ಸುರಕ್ಷತೆಯ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ, ಪತ್ರಕರ್ತರಿಗೆ ಕೋವಿಡ್-19 ತಪಾಸಣೆಯನ್ನು ಶುಕ್ರವಾರ ನಡೆಸಲಾಯಿತು. ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದ ತಪಾಸಣೆಯಲ್ಲಿ ಹಲವು ಪತ್ರಕರ್ತರು ಭಾಗವಹಿಸಿದ್ದು, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಮತ್ತು ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ ಅವರ ನಿರ್ದೇಶನದಲ್ಲಿ,  ಜಿಲ್ಲಾಸ್ಪತ್ರೆಯ […]

ಭಟ್ಕಳದ ಕೊರೊನಾ ಸೋಂಕಿತ ಗರ್ಭಿಣಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್: ಡಿಸಿ ಜಗದೀಶ್

ಉಡುಪಿ: ಇಲ್ಲಿನ ಡಾ. ಟಿಎಂಎ ಪೈ ಕೋವಿಡ್ ದಾಖಲಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಕೊರೊನಾ ಸೋಂಕಿತ ಗರ್ಭಿಣಿ ಸಂಪೂರ್ಣ ಗುಣಮುಖರಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಈ ಸೋಂಕಿತ ಗರ್ಭಿಣಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಲು ಅಸಾಧ್ಯವಾಗಿದ್ದು, ತಾಯಿ ಹಾಗೂ ಮಗುವನ್ನು ರಕ್ಷಿಸುವುದು ಬಹಳ ಕಷ್ಟವೆಂದು ತಿಳಿದಾಗ ಉಡುಪಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಸಿಎಂ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯ […]

ಅಧಿಕಾರ, ಅಂತಸ್ತಿಗಿಂತಲೂ ಮಾನವೀಯತೆ ಅತೀ ಮುಖ್ಯ ಎಂದು ತೋರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ 

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ಎಪ್ರಿಲ್‌  19ರಂದು ಮೃತಪಟ್ಟ ಮಹಿಳೆಯ ಸಂಬಂಧಿ ಮಹಿಳೆಯೋರ್ವರು ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾನುವಾರ ಮೃತಪಟ್ಟ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯವಾಗಿ ಜನರು ಪ್ರತಿಭಟಿಸಿದ್ದರು. ಗುರುವಾರವು ಮೃತಪಟ್ಟ 75ರ ವೃದ್ದೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾದಾಗ ಆಡಳಿತ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾಯಿತು. ಇದಕ್ಕೆ ವಿರೋಧ ಉಂಟಾದಾಗ ರಾತ್ರಿ ಸುಮಾರು 11 ಗಂಟೆಯ […]

ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್ ರಸ್ತೆಯಲ್ಲಿ ತುರ್ತು ಸೇವೆ ನೆಪ ಹೇಳಿ ಬೇಕಾಬಿಟ್ಟಿ ಕಾರು ಚಾಲನೆ, ನಿಯಮ ಗಾಳಿಗೆ ತೂರಿದವರ ವಿರುದ್ಧ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಕಾರ್ಕಳ: ದೇಶವೇ ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿದೆ. ಜಿಲ್ಲಾಡಳಿತ ತುರ್ತು ಸೇವೆ ಹೊರತುಪಡಿಸಿ ಬೇರ್ಯಾವುದೇ ಸಾರ್ವಜನಿಕ ಚಟುವಟಿಕೆಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮಾಡದಂತೆ ನಿರ್ಬಂಧ ಹೇರಿದ್ದರೂ ಕಾರ್ಕಳದ ಕೋಟಿ ಚೆನ್ನಯ್ಯ ಪಾರ್ಕ್  ರಸ್ತೆಯಲ್ಲಿ ಈ ಲಾಕ್ ಡೌನ್ ಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೌದು  ಶುಕ್ರವಾರ ಕಾರ್ಕಳ ಪೇಟೆಯ ನಾಗರಿಕರೊಬ್ಬರು ತಮ್ಮ ಮಕ್ಕಳ ಜೊತೆ ಇಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ , ಡ್ರೈವಿಂಗ್ ಕಲಿಸುವ ನೆಪದಲ್ಲಿ ತಮ್ಮ  ಕಾರ್ ನಲ್ಲಿ ಪಾರ್ಕ್ ರಸ್ತೆಯಲ್ಲಿ ಸುಮಾರು 20 […]

ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೋನಾದಿಂದ ಮೃತಪಟ್ಟ ವೃದ್ಧೆಯ ಅಂತ್ಯ ಸಂಸ್ಕಾರ

ಮಂಗಳೂರು:ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೊನಾ ಪಾಸಿಟಿವ್ ರೋಗಿಯ ಅಂತ್ಯ ಸಂಸ್ಕಾರ ನಡೆದಿದೆ. ಅಂತ್ಯ ಸಂಸ್ಕಾರಕ್ಕೆ ಆರಂಭದಲ್ಲಿ ಜನ ಅವಕಾಶ ಮಾಡಿಕೊಟ್ಟಿರಲಿಲ್ಲ. ಮಂಗಳೂರಿನ ಎಲ್ಲಾ ಸ್ಮಶಾನದಲ್ಲೂ ರಾತ್ರಿ ಇಡೀ ಜನರ ಕಾವಲು ಇತ್ತು. ಕೊನೆಗೆ ಪೊಲೀಸ್ ರಕ್ಷಣೆಯೊಂದಿಗೆ ಬಂಟ್ವಾಳದ ಕೈಕುಂಜೆಯಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಜಿಲ್ಲಾಡಳಿತ ದ ಕಾರ್ಯಕ್ಕೆ ಅಡ್ಡಿಯಾದ ಶಾಸಕ ಭರತ್ ಶೆಟ್ಟಿ ಪಚ್ಚನಾಡಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಕ್ಕೆ  ಶಾಸಕ ವೈ ಭರತ್ ಶೆಟ್ಟಿ, ಅವಕಾಶ ಮಾಡಿಕೊಡಲಿಲ್ಲ. ಇದೀಗ  ಶಾಸಕರ ಮೌಡ್ಯಕ್ಕೆ […]