ಕ್ವಾರಂಟೈನಲ್ಲಿದ್ದ ವಿದೇಶಿಗರಿಂದ ಆದೇಶ ಉಲ್ಲಂಘಿಸಿ ತಿರುಗಾಟ: ಆತಂಕ
ಮಂಗಳೂರು: ಕ್ವಾರಂಟೈನ್ ನಲ್ಲಿದ್ದಂತಹ ಐವರು ವಿದೇಶಿಗರು ಆದೇಶ ಉಲ್ಲಂಘಿಸಿ ತಿರುಗಾಡಿದ್ದಲ್ದೇ ಅಪಾರ್ಟ್ ಮೆಂಟ್ ನ ಗೋಡೆಗಳಿಗೆ ಉಗಿಯುವ ಮೂಲಕ ಆತಂಕ ಸೃಷ್ಠಿಸಿದ ಘಟನೆ ಮಂಗಳೂರು ನಗರದ ಕೊಡಿಯಲ್ ಬೈಲ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆಂದು ವಿಯೆಟ್ನಾಂ ನಿಂದ ಮೂರು ತಿಂಗಳ ಹಿಂದೆ ಆಗಮಿಸಿದ್ದ ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟು 5 ಮಂದಿ, ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ […]
ನಿಖಿಲ್ ಮದುವೆಯಲ್ಲಿ ಎಷ್ಟು ಜನ ಆಗಿದ್ದಾರೆಂದು ತಿಳಿದಿಲ್ಲ: ಕೋಟ
ಕುಂದಾಪುರ: ಈಗಿರುವ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಂಟು-ಹತ್ತು ಮಂದಿ ದೇವಸ್ಥಾನಕ್ಕೆ ಹೋಗಿ ಮದುವೆಯಾದರೆ ಯಾವುದೇ ಅಭ್ಯಂತರವಿಲ್ಲ. ಈಗಾಗಲೇ ನಿಶ್ಚಯವಾಗಿರುವ ಅನೇಕ ಮದುವೆಗಳು ಕಡಿಮೆ ಜನರ ಉಪಸ್ಥಿತಿಯಲ್ಲಿ ನಡೆದಿವೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಈ ರೀತಿಯ ಮದುವೆಗಳಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೊಂದರೆ ಕೊಟ್ಟಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮದುವೆಯಾಗಿದ್ದಾರೆ. ಆದರೆ ಅವರ ಮದುವೆಯಲ್ಲಿ ಎಷ್ಟು ಜನ ಆಗಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಶನಿವಾರ […]
ಕುಂದಾಪುರದಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ
ಕುಂದಾಪುರ: ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿರುವ ಐಸೋಲೇಶನ್ ವಾರ್ಡ್ನಲ್ಲಿ ಥ್ರೋಟ್ ಗಂಟಲು ದ್ರವ ಪರೀಕ್ಷಾ ಕೇಂದ್ರವನ್ನು ಶನಿವಾರ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ರಾಜು ಕೆ. ಅವರು ಉದ್ಘಾಟಿಸಿದರು. ರೋಟರಿ ಕ್ಲಬ್ ಕುಂದಾಪುರ, ಸಿದ್ದಾಪುರ ವೆಲ್ಫೆರ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ೪೦ ಸಾವಿರ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಈ ಗಂಟಲು ದ್ರವ ತಪಾಸಣಾ ಕೇಂದ್ರವು ಕುಂದಾಪುರದಲ್ಲೇ ಮೊದಲ ಟೆಸ್ಟಿಂಗ್ ಕೇಂದ್ರವಾಗಿದೆ. ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಎಸಿ ಕೆ. ರಾಜು ಅವರು, ಕೊರೋನಾ ತಡೆಗಟ್ಟುವಿಕೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ […]
ಉಡುಪಿಯ ಮೂರನೆ ಕೊರೊನಾ ಸೋಂಕಿತನೂ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಡುಪಿ: ಜಿಲ್ಲೆಯ ಮೂರನೇ ಕೊರೊನಾ ಸೋಂಕಿತ (ಕೋವಿಡ್-19) ಉಡುಪಿಯ 29 ವರ್ಷದ ಯುವಕ ಸಂಪೂರ್ಣ ಗುಣಮುಖನಾಗಿದ್ದು, ಆತನನ್ನು ಇಂದು ಮಧ್ಯಾಹ್ನದ 2.55 ವೇಳೆಗೆ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಹೇಳಿದ್ದಾರೆ. ಈತನ ಗಂಟಲಿನ ದ್ರವದ ಮಾದರಿಯನ್ನು ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಎರಡು ಮಾದರಿಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ಇದೀಗ ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿ ಕೊಂಡಿರುವುದು […]