ಭಾರತದಲ್ಲಿ 11 ಸಾವಿರ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಮಾಹಿತಿ ಬಿಡುಗಡೆಗೊಳಿಸಿದ ಆರೋಗ್ಯ ಸಚಿವಾಲಯ

ನವದೆಹಲಿ:  ದೇಶದಲ್ಲಿ ಕೊರೊನಾ ಮಹಾಮಾರಿ  ಸೋಂಕಿಗೆ ಒಳಗಾದವರ ಸಂಖ್ಯೆ 11,933ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಸಂಜೆ ತಿಳಿಸಿದೆ. ಕೊರೊನಾ ಸೋಂಕಿಗೆ ಇದುವರೆಗೆ 392 ಮಂದಿ ಮೃತಪಟ್ಟಿದ್ದಾರೆ. ಹಾಗೂ 10,197 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,344 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಬಡಗಬೆಟ್ಟು ಸೊಸೈಟಿ ವತಿಯಿಂದ ಮುಖ್ಯ ಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ 

ಉಡುಪಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ತಡೆಗಟ್ಟುವ ಹಿನ್ನೆಲೆ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಕೋವಿಡ್ 19 ಮುಖ್ಯ ಮಂತ್ರಿ ಪರಿಹಾರ ನಿಧಿ ಗೆ 5 ಲಕ್ಷ ರೂಪಾಯಿ ದೇಣಿಗೆಯನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ  ವರ್ಗಾಯಿಸಲಾಯಿತು.

ಗೇರು ಬೀಜ ಸಂಸ್ಕರಣಾ ಘಟಕ ಆರಂಭಕ್ಕೆ ಷರತ್ತು ಬದ್ದ ಅನುಮತಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಏ.15: ಕೊರೋನಾ ವೈರಾಣು ಸಾಂಕ್ರಾಮಿಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು  ಕೆಲವೊಂದು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ನಡುವೆ ಆಹಾರ ಸಂಸ್ಕರಣೆ ಘಟಕಗಳಿಗೆ ಕಾರ್ಯಾಚರಣೆ ಮಾಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಈಗ ಮಾರುಕಟ್ಟೆಗೆ ಆಗಮಿಸುತ್ತಿರುವ ಸ್ಥಳೀಯ ಗೇರು ಬೀಜ ಕೃಷಿಕರಿಗೆ ಉತ್ತಮ ಧಾರಣೆ ಒಗದಿಸಿಕೊಟ್ಟು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ , ಗೇರು ಬೀಜ ಸಂಸ್ಕರಣಾ ಘಟಕಗಳನ್ನು  ಕೆಲವೊಂದು ಷರತ್ತು ವಿಧಿಸಿ ಕಾರ್ಯಚರಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ. ಸಂಸ್ಕರಣಾ ಘಟಕದ ಒಟ್ಟು ಕಾರ್ಮಿಕರ 25% ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡು. […]

ಕೊರೊನಾ ವೈರಸ್: ಆಯುರ್ವೇದ ಚಿಕಿತ್ಸೆಗೆ ಮುಂದಾಯ್ತು ಸರಕಾರ: 10 ರೋಗಿಗಳಿಗೆ ಔಷಧ

ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಆರಂಭಿಸುವುದಕ್ಕೆ ಸರ್ಕಾರ ಸಿದ್ದತೆ ನಡೆಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹಿರಿಯ ವೈದ್ಯ ಡಾ.ಗಿರಿಧರ ಕಜೆ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಈ ಕುರಿತು ಮಾತನಾಡಿದರು. ಏನಂತಾರೆ ವೈದ್ಯರು? ‘ಕೊರೋನಾ ತಡೆಗಟ್ಟಲು ಆರಂಭದಲ್ಲಿ ಹತ್ತು ಮಂದಿ ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದ ಮಾತ್ರೆ ನೀಡಲಾಗುವುದು, ಆ ಫಲಿತಾಂಶದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಗಿರಿಧರ ಕಜೆ ತಿಳಿಸಿದ್ದಾರೆ. ಸರಕಾರ ಆದೇಶ ಬಂದ ಕೂಡಲೇ ಈ ಪ್ರಕ್ರಿಯೆ […]