ಕೊರೊನಾ ವೈರಸ್: ಆಯುರ್ವೇದ ಚಿಕಿತ್ಸೆಗೆ ಮುಂದಾಯ್ತು ಸರಕಾರ: 10 ರೋಗಿಗಳಿಗೆ ಔಷಧ

ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಆರಂಭಿಸುವುದಕ್ಕೆ ಸರ್ಕಾರ ಸಿದ್ದತೆ ನಡೆಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹಿರಿಯ ವೈದ್ಯ ಡಾ.ಗಿರಿಧರ ಕಜೆ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಈ ಕುರಿತು ಮಾತನಾಡಿದರು.
ಏನಂತಾರೆ ವೈದ್ಯರು?
‘ಕೊರೋನಾ ತಡೆಗಟ್ಟಲು ಆರಂಭದಲ್ಲಿ ಹತ್ತು ಮಂದಿ ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದ ಮಾತ್ರೆ ನೀಡಲಾಗುವುದು, ಆ ಫಲಿತಾಂಶದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಗಿರಿಧರ ಕಜೆ ತಿಳಿಸಿದ್ದಾರೆ. ಸರಕಾರ ಆದೇಶ ಬಂದ ಕೂಡಲೇ ಈ ಪ್ರಕ್ರಿಯೆ ಶುರುಮಾಡಲಾಗುವುದು ಅಂದ ಹಾಗೆ  ಪ್ರಚಾರಕ್ಕಾಗಿ ನಾನು ಈ ಕೆಲಸ ಮಾಡಿಲ್ಲ, ಆಯುಷ್ ಇಲಾಖೆಯಿಂದ ನನಗೆ ನೋಟಿಸ್ ಬಂದಿಲ್ಲ, ರಾಜ್ಯ ಸರ್ಕಾರದ ಮೂಲಕ ಐಸಿಎಂಆರ್‌ಗೆ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದವರು ತಿಳಿಸಿದ್ದಾರೆ.