ರಾಜ್ಯದಲ್ಲಿ 197ಕ್ಕೇರಿತು ಸೋಂಕಿತರ ಸಂಖ್ಯೆ: ಗುರುವಾರ ಒಂದೇ ದಿನ 16 ಮಂದಿಗೆ ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ವೃದ್ದಿಸುತ್ತಲೇ ಇದೆ. ಇದೀಗ ಗುರುವಾರ ಒಂದೇ ದಿನ 16 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆಯಾಗಿದೆ. ಎಲ್ಲೆಲ್ಲಿ?: ಬೆಂಗಳೂರಿನಲ್ಲಿ 5, ಬೆಳಗಾವಿಯಲ್ಲಿ 3, ಮೈಸೂರಲ್ಲಿ 2, ಬಾಗಲಕೋಟೆ 3, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಮಂಡ್ಯದಲ್ಲಿ ತಲಾ ಒಂದೊಂದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿಯಂತೆ  ಒಟ್ಟು 197 ಮಂದಿಗೆ ಕೋವಿಡ್ 19 ಖಚಿತವಾಗಿದ್ದು, ಅವುಗಳ ಪೈಕಿ […]

ಉಡುಪಿಯಲ್ಲಿ ಮತ್ತೆ 30 ಮಂದಿಯಲ್ಲಿ ಕೊರೊನಾ ಶಂಕೆ: ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 30 ಮಂದಿ ಕೊರೊನಾ ಶಂಕಿತರನ್ನು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. 30 ಮಂದಿ ಶಂಕಿತರ ಪೈಕಿ 24 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರಾಗಿದ್ದು, ಇಬ್ಬರಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಉಳಿದ ನಾಲ್ಕು ಮಂದಿಯಲ್ಲಿ ಉಸಿರಾಟದ ಸಮಸ್ಯೆ ಕಂಡುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇಂದು 11 ಮಂದಿಯ ವೈದ್ಯಕೀಯ ವರದಿ ಬಂದಿದ್ದು, ಎಲ್ಲರಲ್ಲೂ ನೆಗೆಟಿವ್ ಬಂದಿದೆ. 33 ಮಂದಿಯ ವರದಿ ಬರಲು […]

ರಾಜಕೀಯಕ್ಕಾಗಿ ಹಿಂದುತ್ವದ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಯಶ್ ಪಾಲ್ ಸುವರ್ಣ

ಉಡುಪಿ: ಕರಾವಳಿ ಹಿಂದುತ್ವದ ಭದ್ರನೆಲೆ ರಾಜಕೀಯಕ್ಕಾಗಿ ಹಿಂದುತ್ವದ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಕಾರ್ಯಕರ್ತರ ಜೊತೆ  ನಿಲ್ಲಲು ನಾನು ಸದಾಕಾಲಕ್ಕೂ ಸಿದ್ಧ ಎಂದು ಹಿಂದೂ ಮುಖಂಡ ಯಶ್ ಪಾಲ್  ಸುವರ್ಣ ಹೇಳಿದ್ದಾರೆ. ಕೋರೋನಾ  ವೈರಸ್ ನಿಯಂತ್ರಣ ಮೀರಿ ಹರಡಲು ದಿಲ್ಲಿಯ ನಿಜಾಮುದ್ದೀನ್ ಪ್ರಕರಣವೇ ಕಾರಣ ಎಂದು ದೇಶದ ಉನ್ನತ ತನಿಖಾ ಸಂಸ್ಥೆಗಳೇ  ಒಪ್ಪಿಕೊಂಡಿವೆ. ಅಂತ ಸಮಾಜಘಾತುಕ ಶಕ್ತಿಗಳ ವಿರುದ್ಧ ಮಾತನಾಡಿದರೆ ಯಾವುದಾದರೂ ಒಂದು ಸಮುದಾಯಕ್ಕೆ ಯಾಕೆ ನೋವಾಗಬೇಕು.  ಆ  ಸಮುದಾಯದ ಯಾವುದೇ ವ್ಯಕ್ತಿಗಳು ಮುಂದೆ ಬಂದು […]

ಲಾಕ್ ಡೌನ್ ಹಿನ್ನೆಲೆ: 8 ಮಂದಿ ಕುಟುಂಬಿಕರ ಸಮ್ಮುಖ ಸರಳ ವಿವಾಹ!

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಇದ್ದು ಯಾವುದೇ ಶುಭ ಸಮಾರಂಭಗಳಲ್ಲಿ ಕುಟುಂಬಿಕರನ್ನು ಹೊರತು ಹೆಚ್ಚು ಮಂದಿ ಸೇರಬಾರದೆಂಬ ಆದೇಶದ ಹಿನ್ನೆಲೆ ಕುಂದಾಪುರದಲ್ಲಿ ಗುರುವಾರ ಸರಳವಾಗಿ ವಿವಾಹವೊಂದು ನೆರವೇರಿದೆ. ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಅಚ್ಲಾಡಿ ಮೂಲದ ಪ್ರೀತಿಕಾ ವಿವಾಹವು ಸರಳವಾಗಿ ಕುಂದಾಪುರ ತಾಲೂಕಿನ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ಜರುಗಿತು. ಈ ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು ಸೇರಿ ಎಂಟು ಮಂದಿ ಭಾಗಿಯಾಗಿದ್ದಾರೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ […]

ಲಾಕ್‍ಡೌನ್ ಕೊಟ್ಟ ಹೊಡೆತ: ಕೃಷಿಕ ಬೆಳೆದ ಬಲಿತ ಬಾಳೆಗೊನೆಗಳು ಗೊಬ್ಬರಗುಂಡಿಗೆ!

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ವಿಶ್ವದಾದ್ಯಂತ ಮರಣಮೃದಂಗ ಬಾರಿಸಿದ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿದ ಲಾಕ್‍ಡೌನ್ ಆದೇಶದಿಂದಾಗಿ ಇದೀಗ ಗ್ರಾಮೀಣ ಭಾಗದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೃಷಿಕರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಷ್ಟಪಟ್ಟು ಬೆಳೆದ ಫಸಲುಗಳನ್ನು ಜಾನುವಾರುಗಳು ಗೊಬ್ಬರಗುಂಡಿಗಳಿಗೆ ಹಾಕಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಲಾಕ್‍ಡೌನ್ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಕಲ್ಲಂಗಡಿ, ಅನಾನಸು ಮುಂತಾದ ಗ್ರಾಮೀಣ ಭಾಗದ ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ಮಾರಾಟ […]