ಜಿಲ್ಲೆಯ ಹಾಪ್ ಕಾಮ್ಸ್ ಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಹಣ್ಣು ಮತ್ತು ತರಕಾರಿ ಮಾರಾಟ: ಜಿಲ್ಲಾಧಿಕಾರಿ
ಉಡುಪಿ ಏಪ್ರಿಲ್ 8: ಪ್ರಸಕ್ತ ಕೊರೊನಾ ವೈರಾಣು ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯೆಲ್ಲಿ ಮಾರ್ಚ್ 24 ರಿಂದ ದೇಶವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಕೇಂದ್ರ ಸರ್ಕಾರದಿಂದ ಆದೇಶಿಸಲಾಗಿದ್ದು, ಆದೇಶದಲ್ಲಿ ಕೆಲವೊಂದು ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ರಾಜ್ಯದ ಹಾಪ್ ಕಾಮ್ಸ್ ಸಂಸ್ಥೆಯು ತೋಟಗಾರಿಕೆ ಇಲಾಖೆಯ ಒಂದು ಅಂಗ ಸಂಸ್ಥೆಯಾಗಿದ್ದು, ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ರೈತರಿಂದ ಖರೀದಿಸಿದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುವಾಗುವಂತೆ , ಉಡುಪಿ ಜಿಲ್ಲೆಯಲ್ಲಿನ, […]
ಉಡುಪಿಯಲ್ಲಿ ಕೊರೊನಾ ಆತಂಕ ದೂರ: ಕೊರೊನಾ ಶಂಕಿತರ ಸಂಖ್ಯೆಯೂ ಇಳಿಮುಖ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ನಿಧಾನವಾಗಿ ದೂರವಾಗುತ್ತಿದ್ದು, ಕೊರೊನಾ ಶಂಕಿತರ ಸಂಖ್ಯೆ ಸಹ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಶಂಕಿತರನ್ನು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಮೂವರು ಶಂಕಿತರ ಪೈಕಿ ಇಬ್ಬರಲ್ಲಿ ಕೊರೊನಾ ಲಕ್ಷಣ ಹಾಗೂ ಒಬ್ಬ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಇಂದು ಪತ್ತೆಯಾದ 3 ಶಂಕಿತರು ಸೇರಿದಂತೆ 14 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿಯಿದೆ. 53 […]
ಕಾರ್ಮಿಕರಿಂದ ಬಾಡಿಗೆ ವಸೂಲಿ ಮಾಡಿದಲ್ಲಿ ಪರವಾನಗಿ ರದ್ದು: ಜಿಲ್ಲಾಧಿಕಾರಿ
ಉಡುಪಿ ಏ.8: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕಾರ್ಮಿಕರ ಶೆಡ್ ಹಾಗೂ ಬಾಡಿಗೆ ಮನೆಗಳಲ್ಲಿ ವಾಸವಿರುವ ಬಾಡಿಗೆದಾರರಿಂದ ಮಾರ್ಚ್, ಏಪ್ರಿಲ್ ಮಾಹೆಯ ಎರಡು ತಿಂಗಳ ಮನೆ, ಶೆಡ್ ಒದಗಿಸಿರುವ ಮನೆ ಮಾಲೀಕರು ಬಾಡಿಗೆ ಶುಲ್ಕವನ್ನು ವಸೂಲು ಮಾಡದಂತೆ ಎಚ್ಚರಿಸಿ ಒಂದು ವೇಳೆ ಬಾಡಿಗೆ ವಸೂಲಿ ಮಾಡಿದ್ದಲ್ಲಿ ಸಂಬoಧಪಟ್ಟ ಮನೆ ಮಾಲೀಕರ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಈಗಾಗಲೇ ಪತ್ರಿಕೆಯಲ್ಲಿ […]
ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಿ: ಡಿಹೆಚ್‍ಓ
ಉಡುಪಿ ಏ.8: ಕೊರೋನಾ ನಿಯಂತ್ರ್ರಿಸಲು ಅತ್ಯಗತ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿ ರೆಡ್ ಕ್ರಾಸ್ ಭವನದ ಮುಂಬಾಗದಲ್ಲಿ, ಕಾರ್ಮಿಕ ಇಲಾಖೆ, ಉಡುಪಿ ಹಾಗೂ ಭಾರತೀಯ ರೆಡ್ ಕ್ರಾಸ್ ಘಟಕ ಉಡುಪಿ ರವರ ವತಿಯಿಂದ ಕೊರೋನಾ ಕುರಿತು ಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ […]