udupixpress
Home Trending ಉಡುಪಿಯಲ್ಲಿ ಕೊರೊನಾ ಆತಂಕ ದೂರ: ಕೊರೊನಾ ಶಂಕಿತರ ಸಂಖ್ಯೆಯೂ ಇಳಿಮುಖ

ಉಡುಪಿಯಲ್ಲಿ ಕೊರೊನಾ ಆತಂಕ ದೂರ: ಕೊರೊನಾ ಶಂಕಿತರ ಸಂಖ್ಯೆಯೂ ಇಳಿಮುಖ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆತಂಕ ನಿಧಾನವಾಗಿ ದೂರವಾಗುತ್ತಿದ್ದು, ಕೊರೊನಾ ಶಂಕಿತರ ಸಂಖ್ಯೆ ಸಹ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಶಂಕಿತರನ್ನು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಮೂವರು ಶಂಕಿತರ ಪೈಕಿ ಇಬ್ಬರಲ್ಲಿ ಕೊರೊನಾ ಲಕ್ಷಣ ಹಾಗೂ ಒಬ್ಬ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಇಂದು ಪತ್ತೆಯಾದ 3 ಶಂಕಿತರು ಸೇರಿದಂತೆ 14 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿಯಿದೆ. 53 ಮಂದಿಯ ವೈದ್ಯಕೀಯ ವರದಿ ಬಂದಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ. ಈವರೆಗೆ ಮೂರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
error: Content is protected !!