ಮಂಗಳೂರಿನಲ್ಲಿ ಓರ್ವ ಕೊರೊನಾ ರೋಗಿ ಗುಣಮುಖ: ನಾಳೆ ಡಿಸ್ಚಾರ್ಜ್
ಮಂಗಳೂರು: ಮಂಗಳೂರಿನಲ್ಲಿ ಓರ್ವ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖವಾಗಿದ್ದು ಏ. 6ರಂದು ಡಿಸ್ಚಾರ್ಜ್ ಆಗಲಿದ್ದಾರೆ. ಭಟ್ಕಳ ಮೂಲದ 22 ವರ್ಷದ ಯುವಕ ಕೊರೊನಾ ಸೋಂಕಿನಿಂದ ಗುಣಮುಖವಾಗಿದ್ದಾನೆ. ಈತ ಮಾ.19ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಎ.2 ಮತ್ತು ಎ.3 ರಂದು ಈತನ ಗಂಟಲು ದ್ರವವನ್ನು ಪುನರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಹೀಗಾಗಿ ನಾಳೆ ಡಿಸ್ಚಾರ್ಜ್ ಗೊಳ್ಳಲಿದ್ದಾರೆ. ಶನಿವಾರ ಕಳುಹಿಸಲಾಗಿದ್ದ 28 ಗಂಟಲು ದ್ರವದ ಪರೀಕ್ಷೆಯ ವರದಿ ಕೂಡ ನೆಗೆಟಿವ್ ಬಂದಿದೆ. ಈವರೆಗೆ 12 […]
ಶೆಲ್ಟರ್ ರೂಂ ಗಳಿಗೆ ತಪಾಸಣಾಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ
ಉಡುಪಿ ಏ.5: ಕೋವಿಡ್-19 ನಿಯಂತ್ರಣದ ಅಂಗವಾಗಿ, ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ವಿವಿದಡೆಯಲ್ಲಿ ನೆಲೆ ಇಲ್ಲದೆ ಜಿಲ್ಲೆಗೆ ಆಗಮಿಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ತಂಗಲು ಹಾಗೂ ಊಟೋಪಚಾರ ಒದಗಿಸುವ ಸಲುವಾಗಿ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಶೆಲ್ಟರ್ ರೂಂ ಗಳನ್ನು ತೆರೆದು ಅಗತ್ಯ ವ್ಯವಸ್ಥೆ ಕಲ್ಪಸಲಾಗಿದೆ. ಈ ಶೆಲ್ಟರ್ ರೂಂ ಗಳಲ್ಲಿ , ಕೂಲಿ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಸರಿಯಾದ […]
ಉಡುಪಿ ಜಿಲ್ಲೆಗೆ ವಿದೇಶದಿಂದ ಬಂದವರ ಕ್ವಾರಂಟೈನ್ ಅವಧಿ ಮುಕ್ತಾಯ: ಸಂಸದೆ ಶೋಭಾ
ಉಡುಪಿ ಏ.5: ಉಡುಪಿ ಜಿಲ್ಲೆಗೆ ವಿದೇಶಗಳಿಂದ ಬಂದ ವ್ಯಕ್ತಿಗಳ 28 ದಿನಗಳ ಕ್ವಾರಂಟೈೈನ್ ಅವಧಿ ಇಂದಿಗೆ ಮುಕ್ತಾಯಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಅವರು ಭಾನುವಾರ ಉಡುಪಿಯ ಶಾರದಾ ಮಂಟಪದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 3 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಪರ್ಕಕ್ಕೆ ಬಂದ ಎಲ್ಲಾ ವ್ಯಕ್ತಿಗಳನ್ನೂ ಕ್ವಾರಂಟೈನ್ ನಲ್ಲಿಡಲಾಗಿದ್ದು, ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು […]
ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆಯ ಗುಂಡಿಗೆ 9 ಮಂದಿ ಉಗ್ರರು ಬಲಿ
ಜಮ್ಮು- ಕಾಶ್ಮೀರ: 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ 9 ಮಂದಿ ಉಗ್ರರು ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ..ಕೆರೆನ್ ಸೆಕ್ಟರ್‌ನಲ್ಲಿ 5 ಮಂದಿ ಉಗ್ರರು ಒಳಬರಲು ನುಸುಳುತ್ತಿದ್ದಾಗ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.ದಕ್ಷಿಣ ಕಾಶ್ಮೀರದ ಬಟ್ಪುರದಲ್ಲಿ ಶನಿವಾರ 4 ಮಂದಿ ಉಗ್ರರು ಭಾರತೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಯತ್ನಿಸುತ್ತಿದ್ದಾಗ ಸೈನಿಕರ ಗುಂಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ