udupixpress
Home Trending ಶೆಲ್ಟರ್ ರೂಂ ಗಳಿಗೆ ತಪಾಸಣಾಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ

ಶೆಲ್ಟರ್ ರೂಂ ಗಳಿಗೆ ತಪಾಸಣಾಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ

ಉಡುಪಿ ಏ.5: ಕೋವಿಡ್-19 ನಿಯಂತ್ರಣದ ಅಂಗವಾಗಿ, ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ವಿವಿದಡೆಯಲ್ಲಿ ನೆಲೆ ಇಲ್ಲದೆ ಜಿಲ್ಲೆಗೆ ಆಗಮಿಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ತಂಗಲು ಹಾಗೂ ಊಟೋಪಚಾರ ಒದಗಿಸುವ ಸಲುವಾಗಿ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಶೆಲ್ಟರ್ ರೂಂ ಗಳನ್ನು ತೆರೆದು ಅಗತ್ಯ ವ್ಯವಸ್ಥೆ ಕಲ್ಪಸಲಾಗಿದೆ.

ಈ ಶೆಲ್ಟರ್ ರೂಂ ಗಳಲ್ಲಿ , ಕೂಲಿ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಮಾಡಲಾಗಿರುವ ಬಗ್ಗೆ ಪರಿಶೀಲಿಸಿ  ವರದಿ ನೀಡಲು ತಪಾಸಣಾ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

ಈ ಅಧಿಕಾರಿಗಳು, ತಾಲೂಕು  ತಹಸೀಲ್ದಾರ್ ಗಳು ಹಾಗೂ ಉಡುಪಿ ನಗರಸಭೆಯ ಆಯುಕ್ತರ ಸಮನ್ವಯದೊಂದಿಗೆ  ಶೆಲ್ಟರ್ ರೂಂ ಗಳನ್ನು  ಚೆಕ್ ಲಿಸ್ಟ್ ಪ್ರಕಾರ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿಗಳು , ಶೆಲ್ಟರ್ ರೂಂ  ಪರಿಶೀಲನೆಯ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿಯನ್ನಾಗಿ ಆನಂದಪ್ಪ ನಾಯ್ಕ್, ಚುನಾವಣಾ ತಹಸೀಲ್ದಾರರು ದೂ.ಸಂ. 9901531594 ಇವರನ್ನು ನೇಮಿಸಿದ್ದಾರೆ.

 

 

error: Content is protected !!