ರಾಜ್ಯಾದ್ಯಂತ ಲಾಕ್ಡೌನ್ಗೆ ಕುಂದಾಪುರ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ
ಕುಂದಾಪುರ: ಕೊರೋನಾ ವೈರಸ್ ರಾಜ್ಯದೆಲ್ಲಡೆ ವ್ಯಾಪಕವಾಗಿ ಹಬ್ಬುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರು ಆದೇಶಿದ ರಾಜ್ಯಾದ್ಯಂತ ಲಾಕ್ಡೌನ್ಗೆ ಕುಂದಾಪುರ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ರಸ್ತೆಗಿಳಿಯದ ಬಸ್ಗಳು, ಆಟೋ ರಿಕ್ಷಾಗಳು: ಅಗತ್ಯ ಬೇಕಾಗಿರುವ ಮೆಡಿಕಲ್, ತರಕಾರಿ, ಮಾಂಸ, ಮೀನು, ದಿನಸಿ ಸಾಮಾನುಗಳ ಅಂಗಡಿಗಳು ತೆರೆದಿದ್ದು ಬಹುತೇಕ ಎಲ್ಲರೂ ತಮ್ಮ ಅಂಗಡಿಗಳನ್ನು ತೆರೆಯದೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಬೆರಳೆಣಿಕೆಯ ಮಂದಿ ದಿನನಿತ್ಯದ ವಸ್ತುಗಳನ್ನು ಖರೀದಿಸಲು ನಗರಕ್ಕೆ ಆಗಮಿಸಿದ್ದಾರೆ. ಎಂದಿನಂತೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಸಾರಿಗೆ ಬಸ್ಗಳು […]
21 ದಿನ ನಿಮ್ಮ ಮನೆಯಲ್ಲೇ ಇರಿ : ಪ್ರಧಾನಿ ಮೋದಿ ಘೋಷಣೆ, ಭಾರತ ಸಂಪೂರ್ಣ ಲಾಕ್ ಡೌನ್
ನವದೆಹಲಿ: ಇಂದು ಮಧ್ಯರಾತ್ರಿಯಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯ ಘೋಷಿಸಿದ್ದಾರೆ.ಈ ಮೂಲಕ ಭಾರತ ಕೊರೋನಾ ರೋಗದ ವಿರುದ್ದ ಸಮರ ಸಾರುವಂತೆ ತಿಳಿಸಿದ್ದಾರೆ. ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಂದು ಮಧ್ಯರಾತ್ರಿಯಿಂದ ಎ.14 ರವರೆಗೆ ದೇಶವು ಸಂಪೂರ್ಣ ಲಾಕ್ ಟೌನ್ ಆಗಲಿದ್ದು, ಇವತ್ತು ರಾತ್ರಿಯಿಂದಲೇ ಜನತಾ ಕರ್ಪೂ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೇಂದ್ರ ಸರಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. 21 ದಿನ ಮನೆಯಲ್ಲೇ ಇರಿ ನಿಮ್ಮ […]
ಜಿಲ್ಲಾಡಳಿತದ ಆದೇಶ ಪಾಲಿಸಿಲ್ಲ ಅಂದ್ರೆ ಲಾಟಿ ರುಚಿ ತೋರಿಸುತ್ತೇವೆ:ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಖಡಕ್ ವಾರ್ನಿಂಗ್
ಕುಂದಾಪುರ: ಕರ್ಫ್ಯೂ ಮೊದಲ ದಿನವಾದ ಮಂಗಳವಾರ ರಸ್ತೆಗಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದೇವೆ. ಕರೋನಾ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಹುತೇಕರಿಗೆ ಪರಿಸ್ಥಿತಿಯ ಅರಿವಿದೆ. ಬೆರಳೆಣಿಕೆಯಷ್ಟು ಜನ ಜಿಲ್ಲಾಡಳಿತದ ಆದೇಶಗಳನ್ನು ಪಾಲಿಸುತ್ತಿಲ್ಲ. ಇದು ಹೀಗೆ ಮುಂದವರೆದರೆ ಲಾಠಿ ರುಚಿ ತೋರಿಸಬೇಕಾಗುತ್ತದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಕುಂದಾಪುರದ ಎಎಸ್ಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಕೋರೋನಾ ಹರಡುವಿಕೆ ತಡೆಗಟ್ಟುವಿಕೆಯಲ್ಲಿ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು. ಆರೋಗ್ಯ […]
ಕುಂದಾಪುರ: ತುರ್ತು ಸಂದರ್ಭ ಹೊರತುಪಡಿಸಿ ವಾಹನ ರಸ್ತೆಗಿಳಿಸಿದರೆ ಕೇಸು ಜಡಿತೇವೆ:ಪೊಲೀಸರಿಂದ ಖಡಕ್ ಎಚ್ಚರಿಕೆ
ಕುಂದಾಪುರ: ತುರ್ತು ಸಂದರ್ಭ ಹೊರತುಪಡಿಸಿ ಖಾಸಗಿ ವಾಹನಗಳನ್ನು ರಸ್ತೆಗಿಳಿಸಬೇಡಿ ಎಂಬ ಜಿಲ್ಲಾಡಳಿತದ ಖಡಕ್ ಸೂಚನೆಯನ್ನೂ ಲೆಕ್ಕಿಸದೆ ಮಂಗಳವಾರ ರಸ್ತೆಗಿಳಿದ ಖಾಸಗಿ ವಾಹನ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮನೆಗೆ ವಾಪಾಸ್ ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಸಿಎಂ ಹೊರಡಿಸಿರುವ ಲಾಕ್ಡೌನ್ ಆದೇಶಕ್ಕೆ ತಾಲೂಕಿನ ಎಲ್ಲಾ ವರ್ತಕರು, ರಿಕ್ಷಾ ಚಾಲಕರು, ಹೊಟೇಲ್ ಮಾಲೀಕರು ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡರೆ, ಬಹುತೇಕ ಖಾಸಗಿ ವಾಹನಗಳ ಹಾಗೂ ದ್ವಿಚಕ್ರ […]
ಕಾಪು ಮಾರಿಯಮ್ಮ ನುಡಿ ಇದು ಸುಳ್ಳುಸುದ್ದಿ: ಆಡಳಿತ ಮಂಡಳಿ ಸ್ಪಷ್ಟನೆ
ಕಾಪು ಮಾ.24: ಕೊರೊನಾ ವೈರಸ್ ಬರದಂತೆ ತಡೆಯಲು ಬೆಲ್ಲದ ಕಣ್ಣ ಚಾಕ್ಕೆ ಅರಸಿನ ಹುಡಿ ಸೇರಿಸಿ ಸಂಜೆ 6 ಗಂಟೆಯೊಳಗೆ ಕುಡಿಯಿರಿ ಎಂದು ಕಾಪು ಮಾರಿಯಮ್ಮನ ನುಡಿಯಾಗಿದೆ ಎಂದು ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಸುದ್ದಿ ಎಂದು ಕಾಪು ಮಾರಿಗುಡಿಗಳ ಆಡಳಿತ ಮಂಡಳಿ ಸ್ಪಸ್ಟನೆ ನೀಡಿದೆ. ಇಂದು ಕಾಪು ಮಾರಿಗುಡಿಯಲ್ಲಿ ಇಂತಹ ಯಾವುದೇ ವಿದ್ಯಾಮಾನ ನಡೆದಿಲ್ಲ, ದೇವಿಯು ಯಾವುದೇ ಅಪ್ಪಣೆ ನೀಡಿಲ್ಲ ಹಾಗೂ ಇಂದು ಮಧ್ಯಾಹ್ನ ದೇವಿಯ ದರ್ಶನ ಸೇವೆ ಕೂಟ […]