ಉಡುಪಿ: ಕೊರೋನಾ ನಿಯಂತ್ರಣಕ್ಕೆ ಚೆಕ್ ಪೋಸ್ಟ್ ಸ್ಥಾಪನೆ – ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ , ಜಿಲ್ಲೆಯಲ್ಲಿನ ದ.ಕನ್ನಡ ಮತ್ತು ಉ.ಕನ್ನಡ ಗಡಿಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ ಉಡುಪಿ ರೈಲ್ವೆ ನಿಲ್ದಾಣದ ಬಳಿ , ಉಡುಪಿ ನಗರಸಭೆಯಿಂದ ಕೊರೋನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತಂತೆ ಜನಜಗೃತಿ ಮೂಡಿಸಲು ಆರಂಭಿಸಿರುವ, ಸ್ಯಾನಿಟೈಸರ್ ಸಹಿತ ನಳ್ಳಿ ನೀರು ಸೌಲಭ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಕೇರಳದಿಂದ ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳದಿಂದ ದ.ಕನ್ನಡ […]
ಮಾರಣಕಟ್ಟೆ ದೇವಳ ಪ್ರಾಂಗಣ ಸ್ವಚ್ಛತಾ ಕಾರ್ಯ
ಕುಂದಾಪುರ: ರಿಕ್ಷಾ ಚಾಲಕ ಮಾಲಕರ ಸಂಘ ಮಾರಣಕಟ್ಟೆ, ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶ್ರೀ ಕ್ಷೇತ್ರ ಮಾರಣಕಟ್ಟೆಯ ಹಣ್ಣುಕಾಯಿ ಅಂಗಡಿಯವರು, ದೇವಸ್ಥಾನದ ನೌಕರ ವೃಂದದವರು ಸ್ವಯಂಪ್ರೇರಿತವಾಗಿ ಶನಿವಾರ ಮಾರಣಕಟ್ಟೆ ದೇವಸ್ಥಾನದ ಎದುರು ಪ್ರಾಂಗಣವನ್ನು ಸಂಪೂರ್ಣ ಸ್ವಚ್ಛ ಮಾಡಿದರು. ಮಾರಣಕಟ್ಟೆ ಬಸ್ ನಿಲ್ದಾಣದಿಂದ ದೇವಸ್ಥಾನದ ತನಕ ಇಡೀ ಪ್ರಾಂಗಣದ ಕಸವನ್ನೆಲ್ಲಾ ತಗೆದು, ಸೋಪ್ ಆಯಿಲ್, ಫಿನೈಲ್ ಬಳಸಿ ನೀರಿನಿಂದ ಪ್ರಾಂಗಣವನ್ನು ತೊಳೆಯಲಾಯಿತು. ಕೊರೋನಾದಿಂದ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ ಹಾಕಿರುವುದರಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಯಂ ಪ್ರೇರಿತವಾಗಿ ೪೦ಕ್ಕೂ ಹೆಚ್ಚು ಜನ […]
ಕುಂದಾಪುರ: ಮೀನು ವ್ಯಾಪಾರಿಯ ಮೇಲೆ ಕೊಲೆ ಯತ್ನ:ಮಹಾರಾಷ್ಟ್ರದ ನಾಲ್ವರಿಂದ ಸಿನಿಮೀಯ ಕೊಲೆಗೆ ನಡೆಯಿತು ಪ್ಲಾನ್ !
ಕುಂದಾಪುರ: ಮೀನು ವ್ಯವಹಾರದಲ್ಲಿನ ವಿಚಾರಕ್ಕೆ ಸಂಬಂಧಿಸಿದಂತೆ ಮರವಂತೆಯ ಮೀನು ವ್ಯಾಪಾರಿಯೊರ್ವರ ಮೇಲೆ ಕೊಲೆ ಯತ್ನ ನಡೆಸಲು ಮಹಾರಾಷ್ಟ್ರದ ರತ್ನಗಿರಿಯಿಂದ ಮಾರಕಾಯುಧಗಳೊಂದಿಗೆ ಬಂದಿದ್ದ ನಾಲ್ವರು ಆರೋಪಿಗಳನ್ನು ಸಿನಿಮೀಯ ರೀತಿಯ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಕುಂದಾಪುರ ಪೊಲೀಸರು ಸಂಭವಿಸಬಹುದಾದ ದುರಂತವೊಂದನ್ನು ತಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ. ಕಳೆದ 2 ವರ್ಷಗಳಿಂದ ಮರವಂತೆ ನಿವಾಸಿ ಮೊಹಮ್ಮದ್ ಶಾಖೀರ್ ಹಾಗೂ ರತ್ನಗಿರಿಯ ದಾನೀಶ್ ಪಾಟೀಲ್ ಮೀನು ವ್ಯವಹಾರ ನಡೆಸುತ್ತಿದ್ದರು. ಈ ವ್ಯವಹಾರಕ್ಕೆ ಶಾಖೀರ್‌ಗೆ ಕರೆ ಮಾಡಿದ್ದ ದಾನಿಶ್ ೫೦ ಲಕ್ಷ ಬಾಕಿ ಇರುವುದಾಗಿ […]
ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಜನಜಾಗೃತಿಯ ಮೈಕ್ ಪ್ರಚಾರಕ್ಕೆ ಚಾಲನೆ
ಕುಂದಾಪುರ: ಕೊರೋನಾ ಮುಕ್ತ ಭಾರತ ಆಗಬೇಕಿದ್ದರೆ ಸರ್ಕಾರ ಹೊರಡಿಸುವ ಎಲ್ಲಾ ಆದೇಶಗಳನ್ನು ಪ್ರಜೆಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಪ್ರಧಾನಮಂತ್ರಿ, ಮುಖ್ಯಮಂತ್ರಿಯವರು ಕೊರೋನಾ ಜನಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಆದೇಶ ನೀಡಿದ್ದಾರೆ. ಕೊರೋನಾ ತಡೆಗಟ್ಟಲು ತಾಲೂಕು ಆಡಳಿತ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ಸಹಾಯಕ ಆಯುಕ್ತ ರಾಜು ಕೆ ಹೇಳಿದರು. ಅವರು ಶನಿವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘಟನೆ ಕುಂದಾಪುರ ವಲಯದ ಸಹಭಾಗಿತ್ವದಲ್ಲಿ ಕೊರೋನಾ […]
ಮಾರಿಗುಡಿ ದೇವಸ್ಥಾನಗಳಲ್ಲಿ ಸುಗ್ಗಿ ಮಾರಿಪೂಜೆ ಸರಳವಾಗಿ ಆಚರಣೆವಂತೆ ಡಿಸಿ ಜಿ. ಜಗದೀಶ್ ಸೂಚನೆ
ಉಡುಪಿ ಮಾ.21: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸಿ.ಆರ್. ಪಿ.ಸಿ ಸೆಕ್ಷನ್ 144(3) ಜಾರಿಗೊಳಿಸಲಾಗಿದ್ದು, ಜಾತ್ರೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿರುತ್ತದೆ. ಆದ್ದರಿಂದ ಕಾಪು ತಾಲೂಕಿನ ಪಡು ಹಾಗೂ ಉಳಿಯಾರಗೋಳಿ ಗ್ರಾಮದಲ್ಲಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಾರ್ಚ್ 24 ಹಾಗೂ 25 ರಂದು ಕಾಲಾವಧಿ ಸುಗ್ಗಿ ಮಾರಿಪೂಜೆಯನ್ನು ದೇವಳದ ಸಮಿತಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಿ, ಸರಳವಾಗಿ ಆಚರಿಸುವಂತೆ ಹಾಗೂ ಜಾತ್ರೆ ದಿನಗಳಂದು ಕೋಳಿ, […]