ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೋ ಮೋಹನ್ ಅವರಿಗೆ ಪ್ರಶಸ್ತಿ
ಉಡುಪಿ: ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಮಾನ್ಯತೆಯ ಮೇರೆಗೆ ಫೋಟೋ ಮ್ಯಾಜಿಕ್ ಒಮ್ನಿಕ್ ಆರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ (ಸರ್ಕಿಟ್ )ಛಾಯಾಚಿತ್ರ ಸ್ಪರ್ಧೆಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರಕ್ಕೆ ಸ್ವರ್ಣ ಪದಕ ಲಭಿಸಿದೆ. ಫೋಟೋ ಟ್ರಾವೆಲ್ ವಿಭಾಗದಲ್ಲಿ’ಚೇಸಿಂಗ್’ ಶೀರ್ಷಿಕೆಯಲ್ಲಿ ನೀಡಲಾದ ಕಂಬಳ ಚಿತ್ರಕ್ಕೆ ಬಹುಮಾನ ಲಭಿಸಿದೆ. ಇದೇ ಸ್ಪರ್ಧೆಯಲ್ಲಿ ಆಸ್ಟ್ರೋ ಅವರ 6 ಚಿತ್ರಗಳು ಸ್ವೀಕೃತಿಯನ್ನು ಪಡೆದಿವೆ.
ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳ ವೈದ್ಯಕೀಯ ವರದಿ ನೆಗೆಟೀವ್: ಕೊರೊನಾ ಆತಂಕ ದೂರ
ಉಡುಪಿ: ಶಂಕಿತ ಕೊರೊನಾ ಸೋಂಕಿನ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಗೆ ಗುರುವಾರ ದಾಖಲಾಗಿದ್ದ ಮಣಿಪಾಲ ಕೆಎಂಸಿ ವಿದ್ಯಾರ್ಥಿಗಳಲ್ಲಿ ಸೋಂಕು ಇಲ್ಲ ಎಂಬುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಮೂಲತಃ ಆಂಧ್ರ ಪ್ರದೇಶ ಹಾಗೂ ಕೇರಳ ರಾಜ್ಯದವರಾಗಿದ್ದು, ಈಚೆಗೆ ಅಮೆರಿಕ ಹಾಗೂ ಮಲೇಷ್ಯಾ ಪ್ರವಾಸ ಕೈಗೊಂಡು ಮಣಿಪಾಲಕ್ಕೆ ಮರಳಿದ್ದರು. ಬಳಿಕ ಇವರಲ್ಲಿ ಕೊರೊನಾ ರೋಗದ ಪ್ರಾಥಮಿಕ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗದ ಲ್ಯಾಬ್ ಗೆ ಕಳುಹಿಸಿಕೊಡಲಾಗಿದ್ದ ವಿದ್ಯಾರ್ಥಿಗಳ ಗಂಟಲಿನ ದ್ರವ ಹಾಗೂ ರಕ್ತದ […]
ಕೊರೊನಾ ಸೋಂಕಿಗೆ ದೇಶದಲ್ಲಿ ಎರಡನೇ ಬಲಿ: ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಸಾವು
ದೆಹಲಿ: ಕೊರೊನಾ ಸೋಂಕು ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ವೃದ್ದೆಯೊಬ್ಬರು (69) ಮೃತಪಟ್ಟಿದ್ದಾರೆ. ಇಟಲಿಯಿಂದ ಬಂದಿದ್ದ ಮಗನಿಂದ ವೃದ್ದೆಗೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಾಪ್ಪಿದ್ದಾರೆ.
ಪೆರ್ಡೂರಿನ ಈ ಮಿಠಾಯಿ ಅಂಗಡಿಯ ಸಿಹಿತಿಂಡಿ ಬಲು ರುಚಿ: ದೇಶಿ ಸ್ವಾದ ಸಖತ್ ಟೇಸ್ಟ್
ಪೆರ್ಡೂರಿನಲ್ಲಿ ಸುಮಾರು 80 ವರ್ಷಗಳಿಂದ ಸಿಹಿ ತಯಾರಿಸುತ್ತಿರುವ ಜೋಗರಾಯ ಶೇಟ್, ರವಿ ಶೇಟ್, ಶಂಕರ್ ಶೇಟ್ ಇವರ ಶ್ರೀ ಅನಂತಪದ್ಮನಾಭ ಸ್ವೀಟ್ ಸ್ಟಾಲ್ ನ ಸಿಹಿ ತಿಂಡಿಗಳು ದೇಶಿ ಸ್ವಾದದಿಂದ ಜನರ ಬಾಯನ್ನು ಸೆಳೆಯುತ್ತಿವೆ. ಈ ಮೂವ್ವರೂ ತಮ್ಮ ತಂದೆಯ ಕಾಲದಿಂದಲೂ ಸಿಹಿತಿಂಡಿಯ ಉದ್ಯೋಗವನ್ನು ಅವಲಂಬಿಸಿ ಜನಗಳಿಗೆ ಸಿಹಿಯನ್ನು ಹಂಚುತ್ತಿದ್ದಾರೆ. ಸಕ್ಕರೆ ಮಿಠಾಯಿ, ಬೆಂಡು, ಜಿಲೇಬಿ, ಅತ್ರಾಸ, ಚಕ್ಕುಲಿ ಮುಂದಾದ ಸಿಹಿ ತಿಂಡಿಯನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶಿ ಸ್ವಾದವಿರುವ ಇವರ ಸಿಹಿತಿಂಡಿಗಳು ಸ್ವಾದಿಷ್ಟ ಮತ್ತು […]
ಕೊರೊನಾ ಶಂಕೆ: ಸಾಗರದ ಮಹಿಳೆಯ ಮಾದರಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಿದ ವೈದ್ಯರು
ಮಣಿಪಾಲ: ಶಂಕಿತ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಗರ ತಾಲ್ಲೂಕಿನ ಆನಂದಪುರದ ಮಹಿಳೆಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮತ್ತೆ ಶಿವಮೊಗ್ಗ ದಲ್ಲಿರುವ ಪ್ರಯೋಗಾಲಯಕ್ಕೆ ಇಂದಯ ಕಳುಹಿಸಲಾಗಿದೆ ಎಂದು ಡಿಎಚ್ಓ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಈಗಾಗಲೇ ಶಿವಮೊಗ್ಗ ದಲ್ಲಿ ಹಾಗೂ ಮಣಿಪಾಲದಲ್ಲಿ ನಡೆಸಿದ ಮಾದರಿಗಳ ಪರೀಕ್ಷಾ ವರದಿ ನೆಗೆಟೀವ್ ಬಂದಿದ್ದು, ಈಗ ಮಹಿಳೆಯಲ್ಲಿ ಮತ್ತೆ ಕೊರೊನಾ ಲಕ್ಷಣ ಕಾಣಿಸಿಕೊಂಡಿರುವುದರಿಂದ ಮತ್ತೊಮ್ಮೆ ಪರೀಕ್ಷೆಗಾಗಿ ಮಾದರಿಗಳನ್ನು ರವಾನಿಸಲಾಗಿದೆ ಎಂದು ಮಾಹಿತಿ […]