ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಆರಾಧನೆ:ಪರ್ಯಾಯ ಅದಮಾರು ಶ್ರೀಗಳಿಂದ ವಿಶೇಷ ಪೂಜೆ

ಉಡುಪಿ: ಶ್ರೀ ಕೃಷ್ಣ ಮಠದ ವೃಂದಾವನ ಸಮುಚ್ಚಯದಲ್ಲಿ ಪುತ್ತಿಗೆ ಮಠದ ಗುರು ಪರಂಪರೆಯ ಶತಾಯುಷಿ ಯತಿಗಳಾದ ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಅವರ ವೃಂದಾವನಕ್ಕೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.

ಟೊಮ್ಯಾಟೊ ಕುಚ್ ಕುಚ್ ಮೇಲೆ ಆಗ್ತದೆ “ಕುಚ್ ಕುಚ್”: ಮನೆಲೇ ಮಾಡಿ ನೋಡಿ ಈ ರುಚಿಕರ ಪಾಕ

ಟೊಮ್ಯಾಟೊ ಕುಚ್ ಕುಚ್ ಅನ್ನೋದು ಒಂದು ರುಚಿಕರ ಪಾಕ. ಬ್ಯಾಚುಲರ್ ಊಟಕ್ಕೆ ಈ ಕುಚ್ ಕುಚ್ ಮಾಡಿದರೆ ಸಾಕು ಹೊಟ್ಟೆಗೂ ಈ ರುಚಿಯ ಮೇಲೆ ಕುಚ್ ಕುಚ್ ಆಗಲು ಶುರು. ಕುಚ್ ಕುಚ್ ಮಾಡೋದು ಹೇಗೆ?  ಇಲ್ಲಿದೆ ಮಾಹಿತಿ. ಏನೇನ್ ಬೇಕು ಟೊಮ್ಯಾಟೊ 1, ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆಗೆ ತಕ್ಕಷ್ಟು, ಅರಿಶಿನ, ಹಸಿಮೆಣಸಿನಕಾಯಿ, ಉಪ್ಪು ಮಾಡುವ ವಿಧಾನ: ಒಂದು ಟೊಮ್ಯಾಟೊವನ್ನು ಉದ್ದುದ್ದವಾಗಿ, ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ […]

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ: ಸಾಮಾಜಿಕವಾಗಿ ಮಹಿಳೆ ಬಹುಮುಖಿ ನೆಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರ ಜತೆಗೆ ಯಶಸ್ಸನ್ನು ಕಂಡಿದ್ದಾಳೆ. ಮಹಿಳೆ ಹಠವಾದಿ ಮಾತ್ರವಲ್ಲ ಛಲವಾದಿ ಎಂದು ಜೇಸಿಐ 15 ವಲಯಾಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಹೇಳಿದರು . ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ ಹಾಗೂ ಕುಂದಾಪುರ ಸಿಟಿ ಜೇಸಿಐ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ‘ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು . ಇದೇ ಸಂದರ್ಭದಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರದ ಸಾಧನೆಗಾಗಿ ಕುಂದಾಪುರದ […]

ಕೇರಳದಲ್ಲಿ ಹಕ್ಕಿ ಜ್ವರ: ಕೋಳಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಸರ್ಕಾರ

ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಾಕಿದ ಕೊಳಿ ಹಾಗೂ ಹಕ್ಕಿಗಳನ್ನು ಸಾಮೂಹಿಕ ಹತ್ಯೆ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮವನ್ನು ಕೇರಳ ಸರ್ಕಾರ ಕೈಗೊಂಡಿದೆ. ಕೇರಳದ ವೆಂಗೆರಿ ಮತ್ತು ಕೊಡಿಯಾಥೂರ್‌ ಪ್ರದೇಶದಲ್ಲಿ ಇರುವ ಎರಡು ಪೌಟ್ರಿಯಲ್ಲಿದ್ದ 12,000ಹಕ್ಕಿಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಇದರಲ್ಲಿ ಹೆಚ್ಚಿನವು ಸಾಕು ಕೋಳಿ, ಟರ್ಕಿ ಮತ್ತು ಲವ್‌ ಬರ್ಡ್‌ಗಳು ಹೊಂದಿದೆ. ಹಾಗೇಯೆ ಅದರ ಜೊತೆಗೆ ಪಕ್ಷಿಗಳ ಪಂಜರವನ್ನು ಸಂಪೂರ್ಣವಾಗಿ ಸುಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೋಳಿಯ ದರ ರೂ.60 ರಿಂದ 65ಕ್ಕೆ  ಇಳಿತ […]

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯುವಮೆರಿಡಿಯನ್ ಸಾಧನೆ ಶ್ಲಾಘನೀಯ: ಶೈನ್ ಶೆಟ್ಟಿ

ಕುಂದಾಪುರ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ದರ್ಜೆಗೇರಿಸುವ ಮೂಲಕ ರಾಷ್ಟ್ರ ಮತ್ತು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಯುವಮೆರಿಡಿಯನ್ ಮುಖ್ಯಸ್ಥರಾದ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ಸೀಸನ್ 7 ಬಿಗ್ ಬಾಸ್ ನ ವಿಜೇತ ಶೈನ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 7ರಂದು ಸಂಜೆ ಯುವಮೆರಿಡಿಯನ್ ಸ್ವಿಮ್ ಸ್ಲೈಡ್ ಎಂಡ್ ಸ್ಪ್ಲಾಶ್ ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಹಲವು ವಿಶಿಷ್ಟ ಸೇವೆಗಳ ಮೂಲಕ ಕುಂದಾಪುರದ ಹೆಸರನ್ನು ಉತ್ತುಂಗಕ್ಕೇರಿಸಿದ ಉದಯಕುಮಾರ್ ಶೆಟ್ಟಿ ಹಾಗೂ ವಿನಯ […]