ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳು ಗಂಗೊಳ್ಳಿ ಗ್ರಾಮಕ್ಕೆ ಭೇಟಿ
ಗಂಗೊಳ್ಳಿ : ಗಂಗೊಳ್ಳಿಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ನ ವಿದ್ಯಾರ್ಥಿಗಳು ಗಂಗೊಳ್ಳಿ ಗ್ರಾಮದ ಎಸ್.ಎಲ್.ಆರ್.ಎಂ. ಘಟಕಕ್ಕೆ ಗುರುವಾರ ಭೇಟಿ ನೀಡಿದರು. ಎಸ್.ಎಲ್.ಆರ್.ಎಂ. ಘಟಕದಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ವಿಂಗಡಿಸಿ, ಸ್ವಚ್ಛಗೊಳಿಸುವ ವಿಧಾನ, ಘಟಕದ ಕಾರ್ಯನಿರ್ವಹಣೆ, ತ್ಯಾಜ್ಯ ಸಂಗ್ರಹ ಮತ್ತಿತರ ಚಟುವಟಿಕೆಗಳನ್ನು ವೀಕ್ಷಿಸಿ, ಇದರ ಸಮಗ್ರ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಗ್ರಾಪಂ ಸಿಬ್ಬಂದಿ ಉದಯಕುಮಾರ್, ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಮನೆಯಲ್ಲಿರುವ ತ್ಯಾಜ್ಯಗಳನ್ನು ನದಿ, […]
ಪ್ರಾಧ್ಯಾಪಕ ಎನ್.ನಿತ್ಯಾನಂದ ಅವರಿಗೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಜೀವಮಾನ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ
ಕುಂದಾಪುರ : ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ಇರುವ ಎ.ಡಿ.ಎ ರಂಗಮಂದಿರದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ಸಾಮಾಜಿಕ ಹಾಗೂ ಆರ್ಥಿಕ ಸುಧಾರಣಾ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬೋಧನೆ, ಸಂಶೋಧನೆ ಹಾಗೂ ಪ್ರಕಟಣೆಗಾಗಿ ನೀಡಲಾಗುವ ಪ್ರತಿಷ್ಠಿತ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಜೀವಮಾನ ಸಾಧನೆಯ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಾಧ್ಯಾಪಕ ಎನ್.ನಿತ್ಯಾನಂದ ಅವರಿಗೆ ನೀಡಿ ಗೌರವಿಸಲಾಗಿದೆ. ರಾಷ್ಟ್ರೀಯ ನೀತಿ ಆಯೋಗದ ಮಾಜಿ ಆರ್ಥಿಕ ಸಲಹೆಗಾರ, ನಿವೃತ್ತ ಐಎಫ್ಎಸ್ ಅಧಿಕಾರಿ ಡಾ.ಎಚ್.ವಿ.ಶಿವಪ್ಪ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಾಯರ್ಅಕಾಡೆಮಿ ಆಫ್ ಗ್ಲೋಬಲ್ […]
ಮಹಿಳಾ ವಿಶ್ವಕಪ್ ಟಿ20: ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ
ಐಸಿಸಿ ಮಹಿಳಾ ವಿಶ್ವಕಪ್ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೋರಾಟ ನಡೆಸಲಿದೆ. ವಿಶ್ವಕಪ್ ಟಿ20 ಟೂರ್ನಿ ಸೆಮಿಫೈನಲ್ ಪಂದ್ಯಕ್ಕೆ ಮಳೆ ವಿಪರೀತ ಅಡ್ಡಿಯಾಗಿದ್ದು, ಅಂಕಪಟ್ಟಿ ಆಧಾರದಲ್ಲಿ ಇಂಗ್ಲೆಂಡ್ ಹಿಂದಿಕ್ಕಿದ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದರು. ಹಾಗೇಯೆ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಮಾ.8 ರಂದು ನಡೆಯಲಿರುವ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಇಲ್ಲಿ ಮಕ್ಕಳೇ ಮಾಡ್ತಾರೆ ಸಾವಯವ ಕೃಷಿ: ಈ ಅಂದ ಚಂದದ ಶಾಲೆ ನೋಡೋದೇ ಖುಷಿ: ರಾಜ್ಯಕ್ಕೆ ಮಾದರಿಯಾದ ಸರಕಾರಿ ಶಾಲೆಯ ಕತೆ ಕೇಳಿ!
ಕಾರ್ಕಳ:ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಶಾಲೆ. ಇಲ್ಲಿನ ಪರಿಸರದ ಸೌಂದರ್ಯಕ್ಕೆ, ಶಾಲಾ ಆವರಣದ ಸ್ವಚ್ಛತೆಗೆ, ಶಾಲಾ ಹೊರಗೋಡೆಗಳ ವರ್ಲಿ ಚಿತ್ರಗಳಿಗೆ, ಶಾಲೆಯ ಮುಂದಿರುವ ಉದ್ಯಾನಕ್ಕೆ ಮಾರುಹೋಗದವರಿಲ್ಲ.ವಿದ್ಯಾರ್ಥಿಗಳ ಶಿಸ್ತು, ವಿಶಾಲವಾದ ಆಟದ ಮೈದಾನ, ವಿಸ್ತೃತವಾದ ಶಾಲಾ ಜಮೀನು, ಹೂಬಳ್ಳಿಗಳಿಂದ ಆವರಿಸಿರುವ ಹಚ್ಚಹಸುರಿನ ಓಪನ್ ಸ್ಟೇಜ್, ಗೋಡೆಗಳಲ್ಲಿ ಸುಂದರ ವಿನ್ಯಾಸವಿರುವ, ಕಲಿಕೆಗೆ ಪೂರಕವಾದ ಚಾರ್ಟ್ ಗಳಿಂದ ಕಂಗೊಳಿಸುವ ತರಗತಿ ಕೊಠಡಿಗಳು, ಗ್ರೀನ್ ಬೋರ್ಡ್ ಹಾಗೂ ಅದರ ಸುತ್ತಲಿನ ಬಣ್ಣದ ಚೌಕಟ್ಟು ಇತ್ಯಾದಿಗಳಿಂದ ಕಂಗೊಳಿಸುವ ಈ ಶಾಲೆಯೇ ಕಾರ್ಕಳ ತಾಲೂಕಿನ ಕೆರುವಾಶೆಯ […]