ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕಾರ್ಕಳ: ವಿಜ್ಞಾನ ಹಾಗೂ ತಂತ್ರಜ್ಞಾನ ಇವೆರಡೂ ಒಂದೇ ನಾಣ್ಯದ ಎರಡು ಪ್ರಮುಖ ಭಾಗಗಳಿದ್ದಂತೆ. ಒಂದನ್ನು ಹೊರತುಪಡಿಸಿ ಇನ್ನೊಂದು ಅಭಿವೃದ್ಧಿ ಕಾಣಲು ಅಸಾಧ್ಯ” ಎಂದು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಎಜುಕೇಶನ್ & ರಿಸರ್ಚ್ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಟಿ.ಎಸ್. ಮಹೇಶ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದ ವತಿಯಿಂದ ಫೆ.೨೮ ರಂದು ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ […]
ಕಣ್ಣಿಗೆ ಅಂದ, ಫಲಪುಷ್ಪದ ಚೆಂದ: ಮನಸೂರೆಗೊಳ್ಳುತ್ತಿದೆ ಉಡುಪಿಯ ಫಲಪುಷ್ಪ ಪ್ರದರ್ಶನ
ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರದಿಂದ 3 ದಿನ ಕಾಲ ಆರಂಭವಾಗಿರುವ ಜಿಲ್ಲಾಮಟ್ಟದ ಫಲಪುಷ್ಪ ಪ್ರರ್ದಶನವು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಕಲ್ಲಂಗಡಿ ಹಣ್ಣುಗಳಲ್ಲಿ ರಚಿಸಿರುವ ಪೇಜಾವರ ವಿಶ್ವೇಶ್ವತೀರ್ಥರ ಚಿತ್ರ ಸೇರಿದಂತೆ, ಲಾಲ್ ಬಹದ್ದೂರ್ ಶಾಸ್ತ್ರಿ, ವಿವೇಕಾನಂದ, ಸುಭಾಷ್ ಚಂಧ್ರ ಬೋಸ್, ಭಗತ್ ಸಿಂಗ್, ಸರ್.ಎಂ. ವಿಶ್ವೇಶ್ವರಯ್ಯ, ಅಟಲ್ ಬಿಹಾರಿ ವಾಜಪೇಯಿ , ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಕುವೆಂಪು, ವಿಂಗ್ ಕಮಾಂಡರ್ ಅಭಿನಂದನ್ , ಶ್ರೀಕೃಷ್ಣ , […]
ಪುಲ್ವಾಮಾ ದಾಳಿಗೆ ಆಶ್ರಯ ನೀಡಿದ್ದ ಉಗ್ರ ಶಕೀರ್ ಬಷೀರ್ ಬಂಧನ
ನವದೆಹಲಿ: 2019ರ ಫೆಬ್ರುವರಿ 14ರಂದು ಪುಲ್ವಾಮಾ ದಾಳಿಯಲ್ಲಿ 40 ಯೋಧರು ಸಾವಿಗೀಡಾಗಿದ್ದರು. ಈ ದಾಳಿ ನಡೆಸಲು ಸಹಕರಿಸಿದ, ಪಾಕಿಸ್ತಾನದ ಜೈಷ್ ಇ ಮೊಹಮ್ಮದ್ ಸಂಘಟನೆಗೆ ಸೇರಿದ್ದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ. ಆರೋಪಿಯಾದ ಶಕೀರ್ ಬಷೀರ್ ಮ್ಯಾಗ್ರೆ ನನ್ನು (22) ಬಂಧಿಸ್ಸಿದ್ದು, ಈತ ಪುಲ್ವಾಮಾದ ಕಾಕಾಪೊರಾದಲ್ಲಿನ ಪೀಠೋಪಕರಣಗಳ ವ್ಯಾಪಾರ ನಡೆಸುತ್ತಿದ್ದನು. ಪುಲ್ವಾಮಾದಲ್ಲಿ ಬಾಂಬ್ ದಾಳಿ ನಡೆಸಿದ್ದ ಅದಿಲ್ ಅಹ್ಮದ್ ದಾರ್ಗೆ ಆಶ್ರಯ ಮತ್ತು ನೆರವು ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಉಗ್ರ ಮೊಹಮ್ಮದ್ […]
ಕಾಂಗ್ರೆಸ್ ಹಿರಿಯ ಮುಖಂಡ, ಸಹಕಾರಿ ಧುರೀಣ ಕೃಷ್ಣರಾಜ್ ಸರಳಾಯ ಆತ್ಮಹತ್ಯೆ
ಉಡುಪಿ: ಕಾಂಗ್ರೆಸ್ ನ ಹಿರಿಯ ಮುಖಂಡ, ಸಹಕಾರಿ ಧುರೀಣ ಕೆ. ಕೃಷ್ಣರಾಜ್ ಸರಳಾಯ ಇಂದು ಮಧ್ಯಾಹ್ನ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಕೊಂಡಿದ್ದಾರೆ. ನೆರೆ ಮನೆಯವರು ಬಾವಿ ಬಳಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನೋಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿಯಲ್ಲಿ ಪಟಾಕಿ ಉದ್ಯಮ ನಡೆಸುತ್ತಿದ್ದ ಇವರು, ಪಟಾಕಿ ಸರಳಾಯರೆಂದೇ ಚಿರಪರಿಚಿತರಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪತ್ನಿ ಕಳೆದ ಒಂದು ವರ್ಷದಿಂದ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]
‘ಮಿನಿಚರ್’ ತುಳು ಆಲ್ಬಮ್ ಸಾಂಗ್ ಬಿಡುಗಡೆ
ಮಂಗಳೂರು: ಆರ್.ಕೆ. ಸಿನಿ ಕ್ರಿಯೇಷನ್ಸ್ ಅರ್ಪಿಸುವ ಮಿನಿಚರ್ ತುಳು ವಿಡಿಯೊ ಆಲ್ಬಮ್ ಸಾಂಗ್ಅನ್ನು ಮಂಗಳೂರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು. ಆಲ್ಬಂ ಸಾಂಗ್ ಬಿಡುಗಡೆ ಮಾಡಿದ,ಅಮೃತ ಸಂಜೀವಿನಿ ಹಾಗೂ ರಾಜಕೇಸರಿ ಯೂತ್ ಕ್ಲಬ್ನ ಸುಶಾಂತ್ ಅಮೀನ್ ಚಕ್ರತೀರ್ಥ ಮಾತನಾಡಿ, ಆರ್.ಕೆ. ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಕಿರುಚಿತ್ರ, ಆಲ್ಬಮ್ ಸಾಂಗ್ಗಳನ್ನು ನಿರ್ಮಿಸಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದೀಗ ಮಿನಿಚರ್ ತುಳು ವಿಡಿಯೊ ಆಲ್ಬಮ್ ಸಾಂಗ್ ಬಿಡುಗಡೆ ಮಾಡಿದ್ದು, ಆರ್.ಕೆ. ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಣೆಗೆ […]