ಮಂಗಳೂರು: ಪತ್ರಕರ್ತರ ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗಲಿದೆ: ಕೋಟ
ಮಂಗಳೂರು, ಫೆ. 28: ಕರಾವಳಿ ಜಿಲ್ಲೆಯಲ್ಲಿ ನಡೆಯುವ ಪತ್ರಕರ್ತರ ಸಮ್ಮೆಳನ ರಾಜ್ಯಕ್ಕೆ ಮಾದರಿ ಸಮ್ಮೇಳನವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾರ್ಚ್ 7 ಹಾಗೂ ಮಾರ್ಚ್ 8 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿರುವ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಅವರು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯದಲ್ಲಿ […]
ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ದೊರೆತಿಲ್ಲ: ಈ ಬಗ್ಗೆ ಸರಕಾರ ಕಣ್ಣು ತೆರೆಯಬೇಕು: ಕತ್ತಲ್‌ಸಾರ್
ಉಡುಪಿ: ಅತ್ಯಂತ ಸಮೃದ್ಧ ಹಾಗೂ ಸುಂದರ ಭಾಷೆ ಆಗಿರುವ ತುಳುವಿಗೆ ಈವರೆಗೂ ಅಧಿಕೃತ ರಾಜ್ಯ ಭಾಷೆ ಮಾನ್ಯತೆ ಸಿಕ್ಕಿಲ್ಲ. ಇದರಿಂದ ತುಳುವನ್ನು ಸಂವಿಧಾನದ 8 ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನಾದರೂ ಕಣ್ಣುತೆರೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಎಂಜಿಎಂ ಕಾಲೇಜಿನ ತುಳು ಸಂಘ ಹಾಗೂ ತುಳುಕೂಟ ಉಡುಪಿ ಇದರ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ […]
ಕ್ರಿಕೆಟ್ ಆಟಗಾರ ಪ್ರಶಾಂತ ಪಾಂಗಾಳ ಹೃದಯಾಘಾತದಿಂದ ಸಾವು
ಉಡುಪಿ: ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ಪ್ರಶಾಂತ್ ಪಾಂಗಾಳ ಶುಕ್ರವಾರ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರತಿಭಾವಂತ ಕ್ರಿಕೆಟ್ ಆಟಗಾರನಾಗಿದ್ದ ಪ್ರಶಾಂತ್, ಟೆನ್ನಿಸ್ ಬಾಲ್ ಟೂರ್ನ್ ಮೆಂಟ್ ಗಳಲ್ಲಿ ಹಲವು ಪಂದ್ಯಗಳನ್ನಾಡಿದ್ದು, ಒಬ್ಬ ಪ್ರತಿಭಾವಂತ ಆಟಗಾರರಾಗಿ ಹೆಸರು ಗಳಿಸಿದ್ದರು.
ಆಳ್ವಾಸ್ ಮೀಡಿಯಾ ಬಝ್ ಗೆ ಚಾಲನೆ
ಮೂಡಬಿದ್ರೆ:ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಅದರ ರಕ್ಷಣೆ ನಮ್ಮ ಜವಬ್ದಾರಿ. ಮಾಧ್ಯಮಗಳು ಪರಿಸರದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನ ಆದಾಯತೆರಿಗೆಯ ಡೈರೆಕ್ಟರ್‌ಜನರಲ್ ನರೋತ್ತಮ್ ಮಿಶ್ರ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ `ಮೀಡಿಯಾ ಆಂಡ್ ಕ್ಲೈಮೇಟ್ ಆಕ್ಷನ್’ ಎಂಬ ವಿಚಾರದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು `ಮೀಡಿಯಾ ಬಝ್ […]
ಗುಳ್ಳದ ಬೀಜದ ಮಹತ್ವದ ಬಗ್ಗೆ ಸಂಶೋಧನೆ ಅಗತ್ಯವಿದೆ: ವಿಶ್ವವಲ್ಲಭ ಶ್ರೀ
ಉಡುಪಿ: ಎಲ್ಲ ತರಕಾರಿ ಬೆಳೆಗಳಿಗಿಂತ ಮಟ್ಟುಗುಳ್ಳ ಭಿನ್ನವಾಗಿದ್ದು, ಮಟ್ಟುವಿನ ಮಣ್ಣಿನ ಗುಣ, ಗುಳ್ಳದ ಬೀಜದ ಮಹತ್ವದ ಬಗ್ಗೆ ಸಂಶೋಧನೆ ಮಾಡಬೇಕಾದ ಅಗತ್ಯವಿದೆ ಎಂದು ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಮಟ್ಟುಗುಳ್ಳ ಕೃಷಿಯ ಸುಸ್ಥಿರ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ಖಾದ್ಯಪ್ರಿಯರಿಗೆ ಮಟ್ಟುಗುಳ್ಳದ ಪರಿಚಯವಿದೆ. ಮಟ್ಟುಗುಳ್ಳ ಎಂಬ ತರಕಾರಿ ಇಂದು ಜಗತ್ತಿನಾದ್ಯಂತ ಪಸರಿಸಿ ಮಟ್ಟುಗ್ರಾಮದ ಹೆಸರನ್ನು ಗುರುತಿಸುವಂತೆ ಮಾಡಿದೆ. ಇದಕ್ಕೆ ಗುಳ್ಳದ ಬೀಜ […]