ಕಂಬಳ ವೀರ ಶ್ರೀನಿವಾಸ ಗೌಡರಿಗೆ ಮುಖ್ಯಮಂತ್ರಿ ಗಳಿಂದ ಗೌರವ

ಉಡುಪಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಓಟ ಓಡಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಸೋಮವಾರ ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂ. ಚೆಕ್ ಮುಖ್ಯಮಂತ್ರಿ  ಬಿ‌.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.