ಮಾಳ-ಕುದುರೆಮುಖ ರಸ್ತೆಯಲ್ಲಿ ಬಂಡೆಕಲ್ಲಿಗೆ ಬಡಿದ ಬಸ್ಸು: ಮೈಸೂರಿನ 9 ಮಂದಿ ಉದ್ಯೋಗಿಗಳು ಭೀಕರ ಸಾವು
ಕಾರ್ಕಳ :ಮಾಳ ಮೂಳೂರು ಘಾಟಿ ಯಲ್ಲಿ ಬಂಡೆಗಲ್ಲಿಗೆ ಬಡಿದು ಬಸ್ ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ಕಾರ್ಕಳ ಮಾಳ ಮುಳ್ಳೂರು ಘಾಟಿನಲ್ಲಿ ಶನಿವಾರ ಸಾಯಂಕಾಲ ಸಂಭವಿಸಿದೆ. ರಂಜಿತಾ, ರಾದಾದೇವಿ(22) ಯೋಗೇಂದ್ರ(21) ಬಸವರಾಜ್, (22) ವಿನುತಾ ಅನಘ್ನಾ,(20),ಪ್ರೀತಮ್, ಶರಿಲ್ ಸಾವನ್ನಪ್ಪಿದವರು. ಬಸ್ಸು ಕುದುರೆಮುಖ ದಾರಿಯಾಗಿ ಮಾಳ ದಾರಿಯಾಗಿ ಧರ್ಮಸ್ಥಳಕ್ಕೆ ಹೊರಟಿರುವಾಗ ಈಘಟನೆ ಸಂಭವಿಸಿದೆ. ಮೈಸೂರು ಖಾಸಗಿ ಕಂಪೆನಿಗೆ ಸೇರಿದ ಬಸ್ಸಾಗಿದ್ದು ಬಸ್ಸಲ್ಲಿದ್ದವರು ಪ್ರವಾಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಬಸ್ ಅತ್ಯಂತ ವೇಗದಿಂದ ಬಂದು ಇಲ್ಲಿನ ತಿರುವಿನಲ್ಲಿರುವ ಬಂಡೆಕಲ್ಲಿಗೆ ಬಡಿದಿದ್ದರಿಂದಲೇ […]
ಉಸೇನ್ ಬೋಲ್ಟ್ ಸಾಧನೆ ಮುರಿದ ಕಂಬಳ ಓಟಗಾರ ಮಿಜಾರು ಶ್ರೀನಿವಾಸ್ ಗೌಡರಿಗೆ ತರಬೇತಿ :ಕ್ರೀಡಾ ಸಚಿವರ ಟ್ವೀಟ್ ಗೆ ಕರಾವಳಿಗರು ಹರ್ಷ
ಮಂಗಳೂರು: ಇತ್ತೀಚೆಗೆ ಕಂಬಳದಲ್ಲಿ ವಿಶ್ವದ ಶ್ರೇಷ್ಠ ಆಟಗಾರ ಉಸೇನ್ ಬೋಲ್ಟ್ ದಾಖಲೆ ಮುರಿದು ಸುದ್ದಿಯಾದ ಕಂಬಳ ಓಟಗಾರರಾದ ಮಿಜಾರು ಶ್ರೀನಿವಾಸ್ ಗೌಡರಿಗೆ ರಾಷ್ಟ್ರೀಯ ಮಟ್ಟದ ತರಬೇತುದಾರರಿ೦ದ ಕೋಚಿ೦ಗ್ ನೀಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ ನೀಡಿರುವುದು ಈಗ ಹೊಸ ಸುದ್ದಿಗಾಗಿ ಕರಾವಳಿಯ ಕಂಬಳ ಪ್ರಿಯರಲ್ಲಿ ಸಂತಸ ಮೂಡಿದೆ. ಟ್ವೀಟರ್ ನಲ್ಲಿ ಶ್ರೀನಿವಾಸ ಗೌಡರ ಸಾಧನೆಯನ್ನು ಕೊಂಡಾದಿದ ಆನಂದ್ ಮಹೀಂದ್ರ ಅವರು “ಗೌಡರು ಅಸಾಮಾನ್ಯವಾಗಿ ಓಡಿದ್ದಾರೆ. ಈ ವ್ಯಕ್ತಿಯ ಮೈಕಟ್ಟನ್ನು ಗಮನಿಸಿದರೆ ಈ ವ್ಯಕ್ತಿ […]
ಇವರ ಕೈ ರುಚಿಯ ಸಕ್ಕರೆ ಮಿಠಾಯಿ, ಬತ್ತಾಸು ತಿಂದ್ರೆ ಆಹಾ ಅಂತೀರಾ! : ಇವರು ಪೆರ್ಡೂರಿನ ಸ್ವೀಟ್ ಸ್ಪೆಷಲಿಸ್ಟ್ !
“ಫೈವ್ star ತಿಂದರೆ ಕಳೆದೇ ಹೋಗ್ತೀರಿ” ಅನ್ನೋ ಚಾಕ್ಲೇಟ್ ಜಾಹೀರಾತನ್ನು ನೋಡಿ ನಾವೆಲ್ಲ ಬಾಯಲ್ಲಿ ನೀರು ಸುರಿಸಿರಬಹುದು. ಆದರೆ ಫೈವ್ star ಅನ್ನೇ ಮೀರಿದ ಸಹಜ ಸುಂಗಂಧದ, ಆಪ್ತ ರುಚಿಯ ಈ ಸಿಹಿತಿಂಡಿ ತಿಂದರೆ ಸಾಕು, ಬಾಯಿ “ಆಹಾ ಏನ್ ರುಚಿ” ಅನ್ನುತ್ತದೆ, ಈ ಮಧುರ ತಿಂಡಿಯ ಹಿತಾನುಭವವನ್ನು ವ್ಯಕ್ತಪಡಿಸಲು ಸಾಧ್ಯವಾಗದೇ, ಹಾಗೇ ಚಪ್ಪರಿಸುತ್ತ ಇನ್ನೊಂದು ಪೀಸನ್ನು ಕೈಗೆತ್ತಿಕೊಂಡು ತಿಂದು ಕರಗಿಸಿಯೇ ಬಿಡುತ್ತೀರಿ ! ಪೆರ್ಡೂರಿನ ಯುವಕ ಕೀರ್ತಿ ಶೇಟ್ ಅವರ ಕೈರುಚಿಯಲ್ಲಿ ತಯಾರಾದ ಈ ಸಿಹಿ […]
ರೋರಿಂಗ್ ಸ್ಟಾರ್ “ಮದಗಜ” ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ನಾಯಕಿಯಾಗಿ ನಟಿ ಆಶಿಕಾ ರಂಗನಾಥ್ ಸಿನಿಮಾದ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಮೊದಲ ಬಾರಿ ರೋರಿಂಗ್ ಸ್ಟಾರ್ ಗೆ ಆಶಿಕಾ ಅವರು ಜೋಡಿಯಾಗಿದ್ದಾರೆ. ಶ್ರೀಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾಯಕಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹಳ್ಳಿ ಜೀವನದ ಬಗ್ಗೆ ಆಸಕ್ತಿ ಇರುವ ರೈತರ ಜೀವನವನ್ನು ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಆಶಿಕಾ ಅವರು ಮದಗಜ ಚಿತ್ರದಲ್ಲಿ ಲಂಗ ದಾವಣಿ ಹಾಕಿಕೊಂಡು ಕೈನಲ್ಲಿ ಬುಟ್ಟಿ, ಸಲಿಕೆ ಹಿಡಿದುಕೊಂಡು ಆಶಿಕಾ ರಂಗನಾಥ್ […]
ಫೆ. 9-17: ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ: ವರ್ಷಾವಧಿ ಜಾತ್ರಾ ಮಹೋತ್ಸವ
ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.9 ರಂದು ಆರಂಭಗೊಂಡಿದ್ದು, ಫೆ.17 ರ ವರೆಗೆ ನಡೆಯಲಿದೆ. ಫೆ.15 ರಂದು ಮಹಾಗಣಪತಿ ಹೋಮ, ಶ್ರೀ ವಿಶ್ವನಾಥ ದೇವರಿಗೆ ಶತ ಸೀಯಾಳಾಭಿಷೇಕ, ಮಹಾಪೂಜೆ, ಭೂತಬಲಿ, ಉತ್ಸವ, ರಾತ್ರಿ ರಥೋತ್ಸವ, ಕೆರೆದೀಪೋತ್ಸವ, ಕಟ್ಟೆಪೂಜೆ ಹಾಗೂ ಫೆ.16 ರಂದು ಮಹಾಗಣಪತಿ ಹೋಮ, ತುಲಾಭಾರ ಸೇವೆ, ಮಹಾಪೂಜೆ, ಹಗಲು ಉತ್ಸವ – ರಥೋತ್ಸವ, ಮಹಾ ಅನ್ನಸಂತರ್ಪಣೆ, ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗಬೇಟೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ. ಫೆ. […]