ಸುಪ್ರೀಂ ತೀರ್ಪು ವಿಚಾರ: ಕೇಂದ್ರ ಸುಗ್ರಿವಾಜ್ಞೆ ಜಾರಿ ತರಲಿ: ಖಾದರ್ ಒತ್ತಾಯ

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಬೇಕು ಅಥವಾ ಮರು ಅರ್ಜಿಯನ್ನು ಸಲ್ಲಿಸಬೇಕು ಎಂದು ಮಾಜಿ ಸಚಿವ ಯು. ಟಿ. ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ. ತೀರ್ಪು ಕುರಿತು ಕೇಂದ್ರ ಸರ್ಕಾರವು ಮರು ಪರಿಶೀಲನಾ ಅರ್ಜಿ ಅಥವಾ ಸುಗ್ರಿವಾಜ್ಞೆ ಜಾರಿಗೆ ತರಬೇಕು. ಸುಪ್ರೀಂಕೋರ್ಟ್ ತೀರ್ಮಾನದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಅವರ ಬದ್ಧತೆ ಏನು ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿ ಆಗಿಂದಾಗ್ಗೆ […]

ವಿದ್ಯಾರ್ಥಿಗಳಿಗೆ ‌ಶೈಕ್ಷಣಿಕ ಶಿಬಿರ ಆಯೋಜಿಸಿದರೆ ಉತ್ತಮ ಫಲಿತಾಂಶ ಸಾಧ್ಯ: ಕೆ. ಮಂಜುಳ

ಉಡುಪಿ: ಪರೀಕ್ಷಾ ತಯಾರಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸಿದಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಹೇಳಿದರು. ಉದ್ಯಾವರ ಸಂತ ಜೇವಿಯರ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಂಟರ್‍ಯಾಕ್ಟ್‌ ಕ್ಲಬ್‌, ರೋಟರಿ ಕ್ಲಬ್‌ ಉಡುಪಿ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಾಲೆಯಲ್ಲಿ ಬುಧವಾರ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆ ಹಾಗೂ ವಿಷಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ […]

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರಾವಾಹಿ ನಟಿ ರಾಧಿಕಾ

ಬೆಂಗಳೂರು: ಕನ್ನಡ ಧಾರಾವಾಹಿ ‘ಮಂಗಳಗೌರಿ ಮದುವೆ’ ನೆಗೆಟಿವ್ ರೋಲ್ ನಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರು ನಟ, ನಿರ್ದೇಶಕ ಶ್ರವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಈ ಹಿಂದೆ ನಟ ವಿಜಯ್ ರಾಜ್‍ಕುಮಾರ್ ಅಭಿನಯದ ‘ಗ್ರಾಮಾಯಣ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ‘ಪರಾರಿ’, ‘ಅಂಬರ’ ಮತ್ತು ‘ಚಿಕ್ಕಮಗಳೂರು ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಶ್ರವಂತ್ ಕೂಡ ನಟಿಸಿದ್ದಾರೆ. ‘ಮಧುಬಾಲ’ ಧಾರಾವಾಹಿಯಲ್ಲಿ […]

ಕಾಪು: ಬೃಹತ್ ಗೃಹ ಸಾಲ ಮೇಳ

ಉಡುಪಿ: ಕಾಪು ಪುರಸಭಾ ವ್ಯಾಪ್ತಿಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಯೋಗದೊಂದಿಗೆ PMAY(U) CLSS ಯೋಜನೆಯಡಿ (ಕಡಿಮೆ ಬಡ್ಡಿ ದರದಲ್ಲಿ) ಬೃಹತ್ ಗೃಹ ಸಾಲ ಮೇಳವನ್ನು ಫೆಬ್ರವರಿ 19 ರಂದು ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ  ಕಾಪು ಪುರಸಭೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ವಂತ ನಿವೇಶನ ಹೊಂದಿದ್ದು, ಮನೆ ನಿರ್ಮಿಸಲು ಆಸಕ್ತಿ ಇರುವ ಫಲಾನುಭವಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕಾಪು ಪುರಸಭೆಯ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.