ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಹೊಸ ರೈಲು: ಕರಾವಳಿಯ ದಶಕಗಳ ಕನಸು ಈಗ ನನಸು

ಉಡುಪಿ: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಮಾನ್ಯ ರಾಜ್ಯ ರೈಲ್ವೇ ಖಾತೆ ಸಚಿವರಾದ  ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ, ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ ರೈಲು ಸೇವೆಯು ಮಂಗಳೂರು ಸೆಂಟ್ರಲ್ ಹಾಗೂ ಜಂಕ್ಷನ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಷ್ಟು ಕಾಲದ ಅನಗತ್ಯ ಕಾಯುವಿಕೆಯನ್ನು ತಪ್ಪಿಸಿ, ಬೆಂಗಳೂರು-ಉಡುಪಿ/ಕುಂದಾಪುರ ಮಧ್ಯೆ ರೈಲು ಪ್ರಯಾಣ ಸಮಯವನ್ನು ಮೂರು ಗಂಟೆಗಳಷ್ಟು ಕಾಲಕಡಿತಗೊಳಿಸುವ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನತೆ ಕಡಿಮೆ ಸಮಯದಲ್ಲಿ ಕರಾವಳಿ ಕರ್ನಾಟಕವನ್ನು ತಲುಪುವಂತೆ ಮಾಡುವುದು. ದೆಹಲಿಯಲ್ಲಿ ಮಾನ್ಯ […]

ಪಂಡಿತ್ ದೀನ್ ದಯಾಳ್ ಸೈದ್ದಾಂತಿಕ ನಿಲುವಿನಲ್ಲಿ ಬದ್ದತೆ ಹೊಂದಿದ್ದರು: ಕಾಮತ್

ಉಡುಪಿ: ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಪಂಡಿತ್‌ ದೀನ್‌ದಯಾಳ್‌ ಅವರು, ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆಯನ್ನು ಹೊಂದಿದ್ದರು. ಆದ್ದರಿಂದ ಅವರ ಹೆಸರು ಭಾರತದ ರಾಜಕೀಯದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್‌ ಕಾರ್ಯಕರ್ತ ರಾಘವೇಂದ್ರ ಕಾಮತ್‌ ಹೇಳಿದರು. ಪಂಡಿತ್‌ ದೀನ್‌ದಯಾಳ್‌ ಬಲಿದಾನ ದಿನದ ಅಂಗವಾಗಿ ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಂಘವನ್ನು ರಾಜಕೀಯವಾಗಿ ಬೆಳೆಸುವುದರ ಜತೆಗೆ ಅದನ್ನು ಮುಂಚೂಣಿಗೆ ತರುವಲ್ಲಿ ದೀನ್‌ದಯಾಳ್‌ ಅವರ ಪಾತ್ರ ದೊಡ್ಡದಿದೆ. ಜನಸಂಘದಲ್ಲಿ ಹಲವಾರು […]

ಫೆ.22 – 23:ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಮಾರಂಭಕ್ಕೆ ಮುಖ್ಯಮಂತ್ರಿಗೆ ಆಹ್ವಾನ

ಕಾರ್ಕಳ: ಫೆ. 22 ಮತ್ತು 23 ರಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜರಗಲಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಬೆಳ್ಳಿಹಬ್ಬ ಮತ್ತು ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬೆಂಗಳೂರಿನ ಮುಖ್ಯ ಮಂತ್ರಿಗಳ ನಿವಾಸದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ   ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನ ನೀಡಿದರು.

ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಮಾರ್ಗ ಬದಲು: ನೂಕುನುಗ್ಗಲು ಇಲ್ಲದೇ ಶ್ರೀಕೃಷ್ಣನ ದರ್ಶನ

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನದ ಮಾರ್ಗವನ್ನು ಬದಲಾಯಿಸಿದ್ದು, ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯಾವುದೇ ನೂಕುನುಗ್ಗಲು ಇಲ್ಲದೆ ಭಕ್ತರು ಕೂಡಲೇ ದೇವರ ದರ್ಶನ ಪಡೆಯಲು ಸಾಧ್ಯವಾಗಿದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀಕೃಷ್ಣಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಮಾರ್ಗದಿಂದ ಭಕ್ತರು ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಮೊದಲು ದೇವರ ದರ್ಶನ ಮಾಡಲು ಅರ್ಧ ಗಂಟೆ ತಗಲುತ್ತಿದ್ದರೆ, ಈಗ ಐದು ನಿಮಿಷದಲ್ಲಿ ದೇವರ ದರ್ಶನ ಪಡೆಯಬಹುದಾಗಿದೆ ಎಂದರು. ಪ್ರಸ್ತುತ […]

ಫೆ.16: ಕಾರ್ಕಳದಲ್ಲಿ ರಂಗ ಕಲಾವಿದರಿಗೆ ಮಾಹಿತಿ ಶಿಬಿರ

ಕಾರ್ಕಳ: ಕಲಾವಿದರ ಭವಿಷ್ಯದ ಭದ್ರತೆಗಾಗಿ ರಚನೆಗೊಂಡ ಕರಾವಳಿ ಕರ್ನಾಟಕ ರಂಗಕಲಾವಿದರ ಸೇವಾ ಪರಿಷತ್ತು ಇದರ ವತಿಯಿಂದ ಫೆ.16 ರಂದು ಬೆಳಗ್ಗೆ 10 ಗಂಟೆಗೆ ಕಾರ್ಕಳದಲ್ಲಿರುವ ಕಿಸಾನ್ ಸಭಾ ದಲ್ಲಿ ಕ.ಕ.ರಂ.ಕ.ಸೇ.ಪರಿಷತ್ತಿನ ಪದಾಧಿಕಾರಿಗಳಿಂದ ಮಾಹಿತಿ ಶಿಬಿರ ನಡೆಯಲಿದೆ .ಈ ಸಭೆಗೆ ರಂಗಭೂಮಿಯ ಎಲ್ಲ ಕಲಾವಿದರು ಬಂದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ  ಕಾರ್ಕಳ ವಲಯದ ಸದಸ್ಯ ಹಮೀದ್ ಮಿಯ್ಯಾರು ತಿಳಿಸಿದ್ದಾರೆ