ಬಡ ಕುಟುಂಬಗಳ ಸಾಲಮನ್ನಾ ಮಾಡಬೇಕು: ಪ್ರತಿಭಟನಾ ಸಭೆಯಲ್ಲಿ ಸೊರಕೆ ಆಗ್ರಹ
ಉಡುಪಿ: ಮೈಕ್ರೋಫೈನಾನ್ಸ್‌ಗಳು ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬಡ ಕುಟುಂಬಗಳ ಸಾಲಮನ್ನಾ ಮಾಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮತ್ತು ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯು ರಾಜ್ಯ ದಲಿತ ಸಂಘರ್ಷ ಸಮಿತಿ, ಭೀಮಘರ್ಜನೆ ರಾಜ್ಯ ಸಮಿತಿ ಹಾಗೂ ಅಂಬೇಡ್ಕರ್ ಸೇನೆಯ ಸಹಭಾಗಿತ್ವದಲ್ಲಿ ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮೈಕ್ರೋಫೈನಾನ್ಸ್‌ಗಳ […]
ಆಳ್ವಾಸ್ ನಲ್ಲಿ ಪ್ರಧಾನಮಂತ್ರಿ ಶ್ರಮ್‌ಯೋಗಿ ಮನ್-ಧನ್‌ಯೋಜನಾ’ ಜಾಗೃತಿ ಕಾರ್‍ಯಕ್ರಮ
ಮೂಡಬಿದ್ರೆ: ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ರೂಪಿಸುವುದು ದೇಶದ ಪ್ರಗತಿಯ ಸಂಕೇತವಾಗಿದೆ. ವಲಸೆ ಕಾರ್ಮಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿರುವುದರಿಂದ ಅವರನ್ನು ಒಂದೇ ಸೂರಿನಡಿ ತರುವುದು ಕ್ಲಿಷ್ಟಕರ ಸಂಗತಿ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಕೇಂದ್ರ ಸರಕಾರವು `ಪ್ರಧಾನಮಂತ್ರಿ ಶ್ರಮ್‌ಯೋಗಿ ಮನ್-ಧನ್‌ಯೋಜನಾ’ ಜಾರಿತರಲಾಗಿದೆ ಎಂದು ಕರ್ನಾಟಕ ರಾಜ್ಯ ಕೇಂದ್ರ ಕಾರ್ಮಿಕ ಸೇವೆಯ ಸೆಸ್ ಮತ್ತು ಕಲ್ಯಾಣ ಆಯುಕ್ತ ಎಮ್.ಕೆ ಶೇಖರ್ ಹೇಳಿದರು. ಅವರು ಕಾರ್ಮಿಕಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಜಂಟಿ ಆಯೋಗದಲ್ಲಿ ನಡೆದ `ಪ್ರಧಾನಮಂತ್ರಿ […]
ಮಂಗಳೂರು: ಸಿಎಎ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಗಾರ
ಮಂಗಳೂರು: ಸಿಎಎ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಹಿತಿ ನೀಡುವ ಕಾರ್ಯಗಾರವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಬಿ. ಎಲ್. ಶಂಕರ್ ಉದ್ಘಾಟಿಸಿದರು. ಮಂಗಳೂರಿನ ಕುಲಶೇಖರದ ಕೋರ್ಡೆಲ್ ಹಾಲ್ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಎಲ್ಲಿಯವರೆಗೆ ಸಂವಿಧಾನ ರಕ್ಷಣೆ ಮಾಡಲು ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಯಾರೇ ಭಾರತೀಯನನ್ನು ಪೌರ ಅಲ್ಲ ಎಂದು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದರು. ದೇಶದ ಸಂವಿಧಾನ ಬಲಿಷ್ಠವಾಗಿದ್ದು, ಈ ಸಂವಿಧಾನ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಮೊದಲು ರಾಷ್ಟ್ರಧ್ವಜದ ಬಗ್ಗೆ ಗೌರವ […]
ಶ್ರೀ ಕೃಷ್ಣ ಮಠದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ವಾದಿರಾಜ ಗುರುಗಳ ಜಯಂತಿ ಪ್ರಯುಕ್ತ ವಿವಿಧ ಶಾಲೆಗಳಿಗೆ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬಹುಮಾನ ನೀಡಿ ಅನುಗ್ರಹಿಸಿದರು.
ಆಟೋ ಪ್ರಯಾಣ ದರ ರೂ.30 ಕ್ಕೆ ಏರಿಕೆ, ಮೀಟರ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯ ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತಂತೆ ಈಗಿನ ಕನಿಷ್ಠ ದರ ರೂ.25 ರಿಂದ ದರವನ್ನು ರೂ.30 ಕ್ಕೆ ಹೆಚ್ಚಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದು, ಹೆಚ್ಚಳವಾದ ದರ ಏಪ್ರಿಲ್ 1 ರಿಂದ ಅನ್ವಯವಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2014 ರಲ್ಲಿ ಆಟೋ ಪ್ರಯಾಣ ಪರಿಷ್ಕರಿಸಿದ ನಂತರ […]