ಸಿದ್ದರಾಮಯ್ಯ ಓರ್ವ ನಿರುದ್ಯೋಗಿ: ಶ್ರೀರಾಮುಲು ವ್ಯಂಗ್ಯ

ಮಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ಓರ್ವ ನಿರುದ್ಯೋಗಿ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಮಾಡೋಕೆ ಕೆಲಸ ಇಲ್ಲ. ಕಾಂಗ್ರೆಸ್ ಪಾರ್ಟಿಯ ಎಲ್ಲಾ ನಾಯಕರು ನಿರುದ್ಯೋಗಿಗಳು ಅಂತ ವ್ಯಂಗ್ಯವಾಡಿದ್ದಾರೆ. ನೂತನ ಸಚಿವರು ಅನರ್ಹರಲ್ಲ ಅಂತಾ ಜನ ಹೇಳಿದ್ದಾರೆ. ಜನರು ಅವರನ್ನು ಗೆದ್ದು ಕಳುಹಿಸಿದ್ದಾರೆ. ಕಮಲದ ಚಿಹ್ನೆ ಮೇಲೆ ಗೆದ್ದು ಬಂದಿದ್ದಾರೆ. ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿರುವ ‌ಕಾರಣ ಏನೆಲ್ಲ ಹೇಳಿಕೆಗಳ ಮೂಲಕ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ ಎಂದ […]

ಮಂಗಳೂರು: ತುರ್ತು ಶಸ್ತ್ರ ಚಿಕಿತ್ಸೆಗಾಗಿ 40 ದಿನದ ಮಗು ಬೆಂಗಳೂರಿಗೆ: ಝೀರೊ ಟ್ರಾಫಿಕ್ ಗೆ ಸಾರ್ವಜನಿಕರ ಸಹಕಾರ

ಮಂಗಳೂರು: 40 ದಿನದ ಸೈಫುಲ್ ಅಝ್ಮಾನ್ ಎಂಬ ಮಗುವೊಂದು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದರೆ ಇಂದು ತುರ್ತು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆಂಬುಲೆನ್ಸಿನಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್ನಲ್ಲಿ ಮಗುವನ್ನು ಕೊಂಡೊಯ್ಯಲಾಗಿದೆ. ಉಪ್ಪಿನಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ 75 ರ ಮೂಲಕ ಹಾಸನ ಕಡೆ ಅಂಬ್ಯುಲೆನ್ಸ್ ಸಂಚರಿಸಿದ ವೇಳೆ ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ ಕಡೆಗಳಲ್ಲಿ ಪೋಲೀಸರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರ […]

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜ್ಞಾನದಾಸೋಹಕ್ಕೆ ಕೈ ಬೀಸಿ ಕರೆಯುತ್ತಿವೆ ಪುಸ್ತಕ ಮಳಿಗೆಗಳು

ಕಲಬುರ್ಗಿ: 85ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಕಲಬುರ್ಗಿಯ ವಿಶ್ವ ವಿದ್ಯಾಲಯ ಆವರಣದಲ್ಲಿನ ಪುಸ್ತಕ ಮಳಿಗೆಗಳು ಕಳೆಕಟ್ಟಿವೆ. ದಾಖಲೆಯನ್ನಬಹುದಾದ 800 ಕ್ಕೂ ಹೆಚ್ಚಿನ ಪುಸ್ತಕ ಮಳಿಗೆಗಳು, ಪುಸ್ತಕ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ  ಒದಗಿಸಿದಂತಾಗಿದೆ. ಸಾಹಿತ್ಯ ಪ್ರಿಯರು ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ  ಪುಸ್ತಕ ಪ್ರೇಮಿಗಳು ಪುಸ್ತಕ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪುಸ್ತಕ ಖರೀದಿಸುತ್ತಿದ್ದುದು, ಈ ಸಮ್ಮೇಳನದಲ್ಲಿ ಪುಸ್ತಕ ಖರೀದಿ ಜೋರಾಗಿಯೇ […]

ಫೆ.9: ನಾಲ್ಕನೇ ಆವೃತ್ತಿಯ ‘ಮಣಿಪಾಲ್ ಮ್ಯಾರಥಾನ್ 2020’

ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಜಿಲ್ಲಾ ಅಮೆಚೂರು ಅಥ್ಲೆಟಿಕ್‌ ಅಸೋಸಿಯೇಶನ್‌ ಸಹಯೋಗದಲ್ಲಿ ‘ಮಣಿಪಾಲ್ ಮ್ಯಾರಥಾನ್‌–2020’ ಫೆ. 9ರಂದು ಬೆಳಿಗ್ಗೆ 5.15ಕ್ಕೆ ಮಣಿಪಾಲದಲ್ಲಿ ನಡೆಯಲಿದೆ. ಇದು ನಾಲ್ಕನೇ ಆವೃತ್ತಿಯ ಮಣಿಪಾಲ್‌ ಮ್ಯಾರಥಾನ್‌ ಆಗಿದ್ದು, ಇದರಲ್ಲಿ ‘ಅಂಗಾಗಗಳ ದಾನ’ದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಮಾಹೆ ಕುಲಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಬುಧವಾರ ತಿಳಿಸಿದರು. 42 ಕಿ.ಮೀ ವಿಭಾಗದಲ್ಲಿ 75 ಸ್ಪರ್ಧಿಗಳು ಭಾಗವಹಿಸುತ್ತಿದ್ದು, 21 ಕಿ.ಮೀ. ವಿಭಾಗದಲ್ಲಿ 300, 10 ಕಿ.ಮೀ. ವಿಭಾಗದಲ್ಲಿ 600, […]

ರಾಜ್ಯ ಸಚಿವ ಸಂಪುಟ ವಿಸ್ತರಣೆ: 10 ಮಂದಿ ಹೊಸ ಶಾಸಕರ ಸೇರ್ಪಡೆ

ಬೆಂಗಳೂರು: ಕಳೆದ ಡಿಸೆಂಬರ್ 5 ರಂದು ನಡೆದ ರಾಜ್ಯ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಚುನಾಯಿತರಾದ ಹತ್ತು ಮಂದಿ ಹೊಸ ಶಾಸಕರು ಗೆಲುವಿನ ನಗೆ ಬೀರಿದ ಎರಡು ತಿಂಗಳ ನಂತರ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಕ್ಕೆ  ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟ ಎರಡನೇ ಬಾರಿಗೆ ವಿಸ್ತರಣೆಯಾಗಿದೆ. ಇದರಿಂದ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 28 ಕ್ಕೆಏರಿದೆ. ಅಲ್ಲದೆ, ರಾಜ್ಯ ಸಚಿವ ಸಂಪುಟದಲ್ಲಿ ಇನ್ನೂ ಆರು ಸ್ಥಾನಗಳು ಖಾಲಿ […]