ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಳೆ ಬ್ರಹ್ಮಕಲಶಾಭಿಷೇಕ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ 6.30 ಕ್ಕೆ ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕದ ಆರಂಭವಾಗಲಿದೆ. 9.37ರ ಕುಂಭಲಗ್ನದಲ್ಲಿ ಪ್ರಧಾನಕಲಶಾಭಿಷೇಕ‌ ನಡೆಯಲಿದೆ. ಅಲ್ಲಿ ತನಕ ದೇವಳದ ಶೇಕಡಾ 90 ಧಾರ್ಮಿಕ ವಿಧಿವಿಧಾನ ಹಾಗೂ ಕಲಶಗಳಿಗಾಗಿ ಮುಚ್ಚಲ್ಪಟ್ಟಿರುತ್ತದೆ. ದೇವರಿಗೆ ಬ್ರಹ್ಮಕಲಶಾಭಿಷೇಕದ ನಡೆಯುವ ಸಂದರ್ಭದಲ್ಲಿ ದೇವಾಲಯದ ಒಳಗೆ ನೂರರಷ್ಟು ಮಂದಿ ಮಾತ್ರ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೇ ಸರದಿ ಸಾಲಿನಲ್ಲಿ ಬಂದರೂ ದರ್ಶನ ಕಷ್ಟ. ಹಾಗಾಗಿ ಕಲಶಾಭಿಷೇಕ ಪುಣ್ಯ ಕಾರ್ಯಗಳನ್ನು ಎಲ್ಲರೂ ನೋಡುದಕ್ಕಾಗಿ ದೂರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ […]

ಸಚಿವ ಸಂಪುಟ ವಿಸ್ತರಣೆ ಸಂಭವ್ಯ ಪಟ್ಟಿ ತಯಾರಿ: ನಾಳೆ ಬಿ.ಎಸ್. ಯಡಿಯೂರಪ್ಪ ದೆಹಲಿಗೆ

ಬೆಂಗಳೂರು, ಜ.29: ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ವಿಸ್ತರಣೆ ಸಂಬಂಧ ಸಂಭಾವ್ಯ ಪಟ್ಟಿ ತಯಾರಾಗಿದೆ. ಈ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ (ಗುರುವಾರ) ದೆಹಲಿಗೆ ತೆರಳಿಲಿದ್ದು, ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಪಟ್ಟಿಯನ್ನು ಹೈಕಮಾಂಡ್ ಅಂತಿಮ ಮಾಡುತ್ತದೆಯೇ ಅಥವಾ ದೆಹಲಿ ಚುನಾವಣೆಯ ನಂತರ ಅಂತಿಮ ಮಾಡುತ್ತದೆಯೋ ಎನ್ನುವುದೂ ಕುತೂಹಲ‌ ಮೂಡಿಸಿದೆ. ಒಂದುವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ […]

ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನ: ಜೀರ್ಣೋದ್ಧಾರಕ್ಕೆ 15 ಕೋ. ರೂ. ಯೋಜನೆ ಸಿದ್ಧ

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗುಲವನ್ನು ಸಂಪೂರ್ಣ ಜೀರ್ಣೋದ್ದಾರ ಗೊಳಿಸಲು ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಮುಂದಾಗಿದ್ದು, 15 ಕೋಟಿ ರೂಪಾಯಿ ಯೋಜನೆ ಇದೀಗ ಸಿದ್ಧಗೊಂಡಿದ್ದು ಮರ ಮತ್ತು ಶಿಲೆಗೆ ಸಂಬಂಧಿಸಿದ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ. ಏನೇನು ಕಾಮಗಾರಿ? ನೂತನ ದಾಸೋಹ ಭವನ, ವ್ಯವಸ್ಥಿತ ಅಡುಗೆ ಶಾಲೆ, ಶಿಥಿಲಗೊಂಡ ಸುತ್ತುಪೌಳಿ ತೀರ್ಥ ಮಂಟಪ ಮತ್ತು ಧ್ವಜಸ್ತಂಭಕ್ಕೆ ಬೆಳ್ಳಿ ಕವಚ ಹೊದಿಕೆ, ನೂತನ ಸ್ವಾಗತ ಗೋಪುರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.  ಜೀರ್ಣೋದ್ದಾರ ಕಾಮಗಾರಿಗಳೊಂದಿಗೆ ಶ್ರೀದೇವಿಗೆ ಬ್ರಹ್ಮಕುಂಭಾಭಿಷೇಕವನ್ನು […]

ಹೃದಯ ಸಂಬಂಧಿತ ಖಾಯಿಲೆಗೆ ತುತ್ತಾಗಿದ್ದ ವ್ಯಕ್ತಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಚೆಕ್ ವಿತರಣೆ

ಮಂಗಳೂರು: ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದ ವ್ಯಕ್ತಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ 1 ಲಕ್ಷ ರೂ. ಚೆಕ್ಕನ್ನು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡ ವಾರ್ಡಿನ ಬರ್ಕೆ ನಿವಾಸಿ ಉಮೇಶ್ ಎಂಬವರು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಕುಟುಂಬಸ್ಥರು ಕೊನೆಗೆ ಸ್ಥಳೀಯ ಬಿಜೆಪಿ ಮುಖಂಡರ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಸಂಪರ್ಕಿಸಿ ಸಹಾಯ ಕೋರಿದ್ದರು. ತಕ್ಷಣ ಸ್ಪಂದಿಸಿದ […]

ಕಾರ್ಕಳದಲ್ಲಿ ಅದ್ದೂರಿ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವ: ಎಲ್ಲೆಲ್ಲೂ ಜನ ವೈಭವ

ಕಾರ್ಕಳ:  ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 26 ರಿಂದ ಶುರುವಾಗಿದ್ದು ಬುಧವಾರ  ಅತ್ತೂರಿನಾಂದ್ಯತ ಜನಜಾತ್ರೆ ನೆರೆದಿತ್ತು. ಜ. 26ರಂದು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಕೊಂಕಣಿಯಲ್ಲಿ), ಜ. 27ರಂದು ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿ ಸ್ವಾಮಿ  ಜ. 28ರಂದು ಪುತ್ತೂರು ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್ , ಶಿವಮೊಗ್ಗ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ […]